ಜಹೀರ್ ಖಾನ್​ಗೆ ಒಂದೇ ವರ್ಷಕ್ಕೆ ಸಾಕಾಯ್ತು ಲಕ್ನೋ ತಂಡದ ಸಹವಾಸ

Updated on: Sep 18, 2025 | 9:10 PM

Zaheer Khan Resigns: ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಜಿ ಕ್ರಿಕೆಟ್ ಆಟಗಾರ ಜಹೀರ್ ಖಾನ್ ತಮ್ಮ ಹುದ್ದೆಯಿಂದ ರಾಜೀನಾಮೆ ನೀಡಿದ್ದಾರೆ. ಮುಖ್ಯ ಕೋಚ್ ಮತ್ತು ತಂಡದ ಮಾಲೀಕರೊಂದಿಗಿನ ಭಿನ್ನಾಭಿಪ್ರಾಯ ಇದಕ್ಕೆ ಕಾರಣ ಎನ್ನಲಾಗಿದೆ. 2024ರ ಆಗಸ್ಟ್‌ನಲ್ಲಿ ತಂಡ ಸೇರಿದ್ದ ಜಹೀರ್, ಒಂದು ವರ್ಷದೊಳಗೆ ತಂಡವನ್ನು ತೊರೆದಿದ್ದಾರೆ.

1 / 5
2025 ರ ಏಷ್ಯಾಕಪ್ ನಡುವೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಬಗ್ಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ವರ್ಷವಷ್ಟೇ ಲಕ್ನೋ ಸೂಪರ್​ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರಾಗಿ ನೇಮಕವಾಗಿದ್ದ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್, ಕೇವಲ ಒಂದೇ ವರ್ಷಕ್ಕೆ ಈ ತಂಡದೊಂದಿಗಿನ ತಮ್ಮ ಸಂಬಂಧವನ್ನು ಕಡಿದುಕೊಂಡಿದ್ದಾರೆ.

2 / 5
ಪ್ರಸ್ತುತ ಜಹೀರ್ ಖಾನ್ ಮಾರ್ಗದರ್ಶಕ ಹುದ್ದೆಯನ್ನು ತೊರೆಯಲು ಕಾರಣವೇನು ಎಂಬುದು ಬಹಿರಂಗಗೊಂಡಿಲ್ಲ. ವರದಿಗಳ ಪ್ರಕಾರ, ಜಹೀರ್ ಖಾನ್ ರಾಜೀನಾಮೆ ನೀಡಲು ಪ್ರಮುಖ ಕಾರಣ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರೊಂದಿಗಿನ ಭಿನ್ನಾಭಿಪ್ರಾಯ ಎಂದು ಹೇಳಲಾಗುತ್ತಿದೆ.

3 / 5
ಜಹೀರ್ ಆಗಸ್ಟ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದರು. ಐಪಿಎಲ್ 2023 ರ ನಂತರ ಗೌತಮ್ ಗಂಭೀರ್ ಸ್ಥಾನವನ್ನು ಜಹೀರ್ ಖಾನ್ ಅಲಂಕರಿಸಿದ್ದರು. ಲಕ್ನೋ ತಂಡವನ್ನು ತೊರೆದ ಬಳಿಕ 2025 ರ ಐಪಿಎಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದ ಗಂಭೀರ್ ಆ ನಂತರ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಹುದ್ದೆಗೇರಿದ್ದರು.

4 / 5
ಇತ್ತ ಜಹೀರ್ ಖಾನ್ ಮುಂಬೈ ಇಂಡಿಯನ್ಸ್ ನಂತಹ ಚಾಂಪಿಯನ್ ತಂಡದೊಂದಿಗೆ ಕೆಲಸ ಮಾಡಿದ್ದಾರೆ. ಅವರು 2018 ರಿಂದ 2022 ರವರೆಗೆ ಮುಂಬೈ ಇಂಡಿಯನ್ಸ್ ಜೊತೆಗಿದ್ದ ಜಹೀರ್ ಆ ನಂತರ ಲಕ್ನೋ ಸೂಪರ್ ಜೈಂಟ್ಸ್ ಜೊತೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಅವರ ಒಪ್ಪಂದವು ಒಂದು ವರ್ಷದೊಳಗೆ ಕೊನೆಗೊಂಡಿದೆ.

5 / 5
ಐಪಿಎಲ್‌ನ ಮೊದಲ ಎರಡು ವರ್ಷಗಳಲ್ಲಿ ಅಂದರೆ 2022 ಮತ್ತು 2023 ರಲ್ಲಿ ಲಕ್ನೋ ಪ್ಲೇಆಫ್‌ಗೆ ತಲುಪಿತ್ತು. ಆದರೆ 2024 ಮತ್ತು 2025 ರಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. 2025 ರಲ್ಲಿ, ತಂಡವು 14 ಪಂದ್ಯಗಳಲ್ಲಿ ಕೇವಲ ಆರು ಪಂದ್ಯಗಳನ್ನು ಗೆದ್ದು ಏಳನೇ ಸ್ಥಾನ ಪಡೆದುಕೊಂಡಿತ್ತು. ಇದೀಗ ತಂಡವನ್ನು ತೊರೆದಿರುವ ಜಹೀರ್ ಖಾನ್ ಮುಂದೆ ಯಾವ ತಂಡವನ್ನು ಸೇರುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.