ರೊನಾಲ್ಡೊ ಮನೆಗೆ ಬಾಣಸಿಗರು ಬೇಕಾಗಿದ್ದಾರೆ; ತಿಂಗಳ ಸಂಬಳ ಎಷ್ಟು ಲಕ್ಷ ಗೊತ್ತಾ?
TV9 Web | Updated By: ಪೃಥ್ವಿಶಂಕರ
Updated on:
Jan 20, 2023 | 6:31 PM
Cristiano Ronaldo: ರೊನಾಲ್ಡೊ ಹಾಕಿರುವ ಷರತ್ತುಗಳಿಗೆಲ್ಲ ಒಕೆ ಎನ್ನುವ ಬಾಣಸಿಗ ಸಿಕ್ಕರೆ ಆತನಿಗೆ ತಿಂಗಳಿಗೆ 4500 ಪೌಂಡ್ (ಸುಮಾರು 4.5 ಲಕ್ಷ ರೂ.) ಸಂಬಳ ನೀಡಲಾಗುತ್ತದೆ ಎಂದು ವರದಿಯೊಂದು ಹೇಳಿದೆ.
1 / 6
ಪೋರ್ಚುಗಲ್‌ನ ಸೂಪರ್‌ಸ್ಟಾರ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಫುಟ್ಬಾಲ್ ವಿಶ್ವಕಪ್ಗೂ ಮುನ್ನ ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿದ್ದ ರೊನಾಲ್ಡೊ. ಇತ್ತೀಚೆಗೆ ದಾಖಲೆ ಮೊತ್ತಕ್ಕೆ ಸೌದಿ ಅರೇಬಿಯಾ ಮೂಲದ ಫುಟ್ಬಾಲ್ ತಂಡ ಅಲ್ ನಾಸ್ರ್ ಸೇರಿಕೊಂಡಿದ್ದರು.
2 / 6
ದಾಖಲೆಯ ಸಂಬಳ ಪಡೆಯುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ರೊನಾಲ್ಡೊ ಇದೀಗ ಹೊಸ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಅದೆನೆಂದರೆ ಈ ಫುಟ್ಬಾಲ್ ದೈತ್ಯನ ಮನೆಗೆ ಸರಿ ಹೊಂದುವಂತಹ ಬಾಣಸಿಗ ಸಿಗುತ್ತಿಲ್ಲ.
3 / 6
ಆದರೆ ಎಷ್ಟೇ ಪ್ರಯತ್ನ ಮಾಡಿದರೂ ರೊನಾಲ್ಡೊಗೆ ಅವರ ಅವಶ್ಯಕತೆಗೆ ತಕ್ಕಂತಹ ಬಾಣಸಿಗರು ಸಿಗುತ್ತಿಲ್ಲ. ವಾಸ್ತವವಾಗಿ ರೊನಾಲ್ಡೊ ತಮ್ಮ ಮನೆಗೆ ಬಾಣಸಿಗರಾಗಬೇಕೆನ್ನುವವರಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದಾರೆ.
4 / 6
ಅದರಲ್ಲಿ ಮುಖ್ಯವಾದುದ್ದೆಂದರೆ, ರೊನಾಲ್ಡೊ ಮನೆಯ ಬಾಣಸಿಗರಾಗಲು ಇಚ್ಚಿಸುವವರು ಪೋರ್ಚುಗೀಸ್ ಆಹಾರವನ್ನು ತಯಾರಿಸುವುದರ ಜೊತೆಗೆ ರುಚಿಕರವಾದ ಅಂತರರಾಷ್ಟ್ರೀಯ ಭಕ್ಷ್ಯಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರಬೇಕು.
5 / 6
ರೊನಾಲ್ಡೊ ಹಾಕಿರುವ ಷರತ್ತುಗಳಿಗೆಲ್ಲ ಒಕೆ ಎನ್ನುವ ಬಾಣಸಿಗ ಸಿಕ್ಕರೆ ಆತನಿಗೆ ತಿಂಗಳಿಗೆ 4500 ಪೌಂಡ್ (ಸುಮಾರು 4.5 ಲಕ್ಷ ರೂ.) ಸಂಬಳ ನೀಡಲಾಗುತ್ತದೆ ಎಂದು ವರದಿಯೊಂದು ಹೇಳಿದೆ.
6 / 6
ಪ್ರಸ್ತುತ, ರೊನಾಲ್ಡೊ ತನ್ನ ಕುಟುಂಬಕ್ಕಾಗಿ ಪೋರ್ಚುಗಲ್‌ನ ಕ್ವಿಂಟಾ ಡ ಮರಿನ್ಹಾದಲ್ಲಿ ಐಷಾರಾಮಿ ಮನೆಯನ್ನು ನಿರ್ಮಿಸುತ್ತಿದ್ದು, 2021 ರಲ್ಲಿಯೇ ಮನೆ ನಿರ್ಮಾಣಕ್ಕಾಗಿ ರೊನಾಲ್ಡೊ ಭೂಮಿಯನ್ನು ಖರೀದಿಸಿದರು. ಜೂನ್ 2023 ರ ವೇಳೆಗೆ ಅವರ ಮನೆ ಪೂರ್ಣಗೊಳ್ಳಲಿದೆ ಎಂದು ಊಹಿಸಲಾಗಿದೆ.
Published On - 6:31 pm, Fri, 20 January 23