- Kannada News Photo gallery Radhika Madan statement on television serials gets backlash from tv industry
Radhika Madan: ಧಾರಾವಾಹಿಗಳಿಂದ ಫೇಮಸ್ ಆದ ಬಳಿಕ ಕಿರುತೆರೆ ಬಗ್ಗೆಯೇ ಕಟು ಟೀಕೆ ಮಾಡಿದ ರಾಧಿಕಾ ಮದನ್
Radhika Madan Controversy: ಕಿರುತೆರೆಯಿಂದ ಬಂದು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿದವರು ನಟಿ ರಾಧಿಕಾ ಮದನ್. ಆದರೆ ಈಗ ಅವರು ಧಾರಾವಾಹಿಗಳ ಕುರಿತು ಆಡಿದ ಮಾತನ್ನು ಅನೇಕರು ವಿರೋಧಿಸುತ್ತಿದ್ದಾರೆ.
Updated on: Jan 20, 2023 | 8:29 PM

ನಟಿ ರಾಧಿಕಾ ಮದನ್ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರಿಗೆ ಹಲವು ಅವಕಾಶಗಳು ಸಿಗುತ್ತಿವೆ. ಆದರೆ ಕಿರುತೆರೆ ಬಗ್ಗೆ ಮಾತನಾಡಿ ಅವರು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಸಿನಿಮಾಗೆ ಬರುವುದಕ್ಕೂ ಮುನ್ನ ರಾಧಿಕಾ ಮದನ್ ಅವರು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಆ ಸೀರಿಯಲ್ಗಳಿಂದಲೇ ಅವರು ಫೇಮಸ್ ಆಗಿದ್ದು. ಆದರೆ ಈಗ ಅವರು ಸೀರಿಯಲ್ಗಳ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಕಿರುತೆರೆ ಸೀರಿಯಲ್ ಮಾಡುವವರಿಗೆ ವೃತ್ತಿಪರತೆ ಇಲ್ಲ ಎಂಬರ್ಥದಲ್ಲಿ ರಾಧಿಕಾ ಮದನ್ ಮಾತನಾಡಿದ್ದಾರೆ. ಕೊನೆ ಹಂತದಲ್ಲಿ ಸ್ಕ್ರಿಪ್ಟ್ ಕೊಡುತ್ತಾರೆ. ಸತತ 50 ಗಂಟೆ ಕೆಲಸ ಮಾಡಿಸುತ್ತಾರೆ ಎಂದೆಲ್ಲ ರಾಧಿಕಾ ಮದನ್ ಹೇಳಿದ್ದಾರೆ.

ಸೀರಿಯಲ್ಗಳ ಬಗ್ಗೆ ರಾಧಿಕಾ ಮದನ್ ಹೇಳಿದ ಈ ಮಾತುಗಳಿಗೆ ಕಿರುತೆರೆ ಲೋಕದಿಂದ ಖಂಡನೆ ವ್ಯಕ್ತವಾಗಿದೆ. ನಿರ್ಮಾಪಕಿ ಏಕ್ತಾ ಕಪೂರ್ ಸೇರಿದಂತೆ ಅನೇಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆಳೆಯುವಾಗ ಸೀರಿಯಲ್ಗಳನ್ನು ಬಳಸಿಕೊಂಡು, ನಂತರ ಸಿನಿಮಾದಲ್ಲಿ ಚಾನ್ಸ್ ಸಿಗುತ್ತಿದ್ದಂತೆಯೇ ಕಿರುತೆರೆ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಧಾರಾವಾಹಿಗಳಿಗೆ ಅವಮಾನ ಮಾಡಿದಂತೆ ಆಗಿದೆ ಎಂದು ಹಲವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.




