- Kannada News Photo gallery Cricket photos Kaviya maran gets marriage proposal in south africa during sa20 league
ಐಪಿಎಲ್ ಸುಂದರಿ ಕಾವ್ಯ ಮಾರನ್ ಸೌಂದರ್ಯಕ್ಕೆ ಕ್ಲೀನ್ ಬೋಲ್ಡ್; ಮದುವೆ ಪ್ರಸ್ತಾಪ ಮಾಡಿದ ಅಭಿಮಾನಿ
ವಾಸ್ತವವಾಗಿ ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿಯಾಗಿರುವ ಕಾವ್ಯಾ ಮಾರನ್, ಈ ವರ್ಷದಿಂದ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭವಾಗಿರುವ ಎಸ್ಎ20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕ್ಯಾಪ್ ಎಂಬ ತಂಡವನ್ನು ಖರೀದಿಸಿದ್ದಾರೆ.
Updated on:Jan 20, 2023 | 5:45 PM

ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನ ಸೌಂದರ್ಯದಿಂದ ಕ್ರಿಕೆಟ್ ಲೋಕದಲ್ಲಿ ಅದೇಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಈ ಚೆಲುವೆಯ ಚೆಲುವಿಗೆ ಮನಸೋಲದವರೆ ಇಲ್ಲ. ಇಷ್ಟು ದಿನ ಐಪಿಎಲ್ ಸಮಯದಲ್ಲಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿ ಯುವಕರ ಎದೆಯಲ್ಲಿ ರಂಗೋಲಿ ಬಿಡುತ್ತಿದ್ದ ಕಾವ್ಯಾ ಮಾರನ್‌ಗೆ ಇದೀಗ ದಕ್ಷಿಣ ಆಫ್ರಿಕಾದಲ್ಲಿ ಮದುವೆಯ ಪ್ರಪೋಸಲ್ ಬಂದಿದೆ.

ವಾಸ್ತವವಾಗಿ ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿಯಾಗಿರುವ ಕಾವ್ಯಾ ಮಾರನ್, ಈ ವರ್ಷದಿಂದ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭವಾಗಿರುವ ಎಸ್ಎ20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕ್ಯಾಪ್ ಎಂಬ ತಂಡವನ್ನು ಖರೀದಿಸಿದ್ದಾರೆ.

ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಒಟ್ಟು 6 ಐಪಿಎಲ್ ಫ್ರಾಂಚೈಸಿಗಳು ತಂಡಗಳನ್ನು ಖರೀದಿಸಿವೆ. ಅದರಲ್ಲಿ ಕಾವ್ಯಾ ಮಾರನ್ ಕೂಡ ಒಬ್ಬರು. ನಿನ್ನೆ ಅಂದರೆ, ಜನವರಿ 19 ರಂದು ಕಾವ್ಯಾ ಒಡೆತನದ ಸನ್‌ರೈಸರ್ಸ್ ಈಸ್ಟರ್ನ್ ಕ್ಯಾಪ್ ತಂಡವೂ ಪಾರ್ಲ್ ರಾಯಲ್ಸ್ ತಂಡವನ್ನು ಎದುರಿಸಿತ್ತು. ಈ ವೇಳೆ ಪಂದ್ಯ ವೀಕ್ಷಿಸಲು ಕಾವ್ಯಾ ಮಾರನ್ ಹಾಜರಿದ್ದರು.

ಪಂದ್ಯದ ನಡುವೆ ಕ್ಯಾಮರದ ಕಣ್ಣು ಕ್ರೀಡಾಂಗಣದತ್ತ ಸುಳಿದಾಡಿದೆ. ಈ ವೇಳೆ ದಕ್ಷಿಣ ಆಫ್ರಿಕಾದ ಅಭಿಮಾನಿಯೊಬ್ಬ ಕಾವ್ಯಾ ಮಾರನ್‌ಗೆ ನೇರವಾಗಿ ಮದುವೆ ಪ್ರಸ್ತಾಪ ಮಾಡಿದ್ದು, ‘ಕಾವ್ಯಾ ನೀವು ನನ್ನನ್ನು ಮದುವೆಯಾಗುತ್ತಿರಾ ಎಂದು ಬರೆದಿದ್ದ ಪೋಸ್ಟರ್ ಪ್ರದರ್ಶಿಸಿ, ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾನೆ.

ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರೊಂದಿಗೆ ಕಾವ್ಯಾ ಮಾರನ್ ಒಡೆತನದ ತಂಡವಾದ ಸನ್‌ರೈಸರ್ಸ್ ಈಸ್ಟರ್ನ್ ಕ್ಯಾಪ್ ಕೂಡ ಈ ಪಂದ್ಯದಲ್ಲಿ ಇನ್ನು 10 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಪಾರ್ಲ್ ರಾಯಲ್ಸ್ ವಿರುದ್ಧ ಜಯದ ನಗೆ ಬೀರಿದೆ.
Published On - 5:39 pm, Fri, 20 January 23




