ಹೃದಯಾಘಾತ ತಡೆಯಲು ಬೇಸಿಗೆಯಲ್ಲಿ ಈ ತರಕಾರಿಯ ರಸ ಕುಡಿಯಿರಿ

| Updated By: ಅಕ್ಷತಾ ವರ್ಕಾಡಿ

Updated on: Mar 19, 2025 | 2:39 PM

ಸೌತೆಕಾಯಿ ರಸವು ಉತ್ತಮ ಡಿಟಾಕ್ಸ್ ಪಾನೀಯವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ರತಿದಿನ ಬೆಳಿಗ್ಗೆ ಈ ತರಕಾರಿಯ ರಸವನ್ನು ಕುಡಿದರೆ, ದೇಹದಿಂದ ಬೇಡದ ತ್ಯಾಜ್ಯಗಳು ಹೊರಗೆ ಹೋಗಿ ದೇಹವು ಶುದ್ಧವಾಗುತ್ತದೆ. ಇದು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಹಾಗಾದರೆ ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಉಪಯೋಗವಿದೆ ಎಂಬುದನ್ನು ತಿಳಿದುಕೊಳ್ಳಿ.

1 / 5
ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಸಮೃದ್ಧ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಇದು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಉತ್ತಮ ಆಹಾರವಾಗಿದೆ. ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿಯ ಜ್ಯೂಸ್ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.

2 / 5
ಸೌತೆಕಾಯಿ ರಸವು ಉತ್ತಮ ಡಿಟಾಕ್ಸ್ ಪಾನೀಯವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ರತಿದಿನ ಬೆಳಿಗ್ಗೆ ಈ ತರಕಾರಿಯ ರಸವನ್ನು ಕುಡಿದರೆ, ದೇಹದಿಂದ ಬೇಡದ ತ್ಯಾಜ್ಯಗಳು ಹೊರಗೆ ಹೋಗಿ ದೇಹವು ಶುದ್ಧವಾಗುತ್ತದೆ. ಇದು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.

3 / 5
ಪ್ರತಿದಿನ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ. ತೂಕ ಕೂಡ ಬೇಗನೆ ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿರುವ ಕೊಬ್ಬು ಸಹ ಕರಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸ್ಥೂಲಕಾಯತೆ ಇರುವವರಿಗೆ ಸೌತೆಕಾಯಿ ರಸವು ತುಂಬಾ ಉಪಯುಕ್ತವಾಗಿದೆ. ಆದ್ದರಿಂದ ಇದನ್ನು ಪ್ರತಿದಿನ ಸೇವನೆ ಮಾಡುವುದು ಬಹಳ ಉತ್ತಮ.

4 / 5
ಬೇಸಿಗೆಯ ದಿನಗಳಲ್ಲಿ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ಶಾಖದ ಅನುಭವವನ್ನು ಕಡಿಮೆ ಮಾಡುವ ಮೂಲಕ ದೇಹವನ್ನು ತಂಪಾಗಿಸುತ್ತದೆ. ಸನ್ ಸ್ಟ್ರೋಕ್ ನಿಂದ ರಕ್ಷಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಇದರಲ್ಲಿರುವ ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನಮ್ಮ ದೇಹದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಇದು ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.

5 / 5
ಸೌತೆಕಾಯಿಯಲ್ಲಿ ವಿಟಮಿನ್ ಕೆ ಹೆಚ್ಚಾಗಿ ಇರುವುದರಿಂದ ಗಾಯಗಳಾದ ತಕ್ಷಣ ರಕ್ತಸ್ರಾವವಾಗುವ ಬದಲು ರಕ್ತ ಹೆಪ್ಪುಗಟ್ಟುತ್ತದೆ. ಇದರಲ್ಲಿರುವ  ಮೆಗ್ನೀಸಿಯಮ್ ನಿಮಗೆ ಉತ್ತಮ ನಿದ್ರೆ ಬರುವಂತೆ ಮಾಡಿ ನಿದ್ರಾಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹಕ್ಕೆ ವಿಶ್ರಾಂತಿಯನ್ನು ನೀಡುವುದಲ್ಲದೆ  ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಅಜೀರ್ಣ, ಗ್ಯಾಸ್ ಮತ್ತು ಮಲಬದ್ಧತೆಯನ್ನು ಸಹ ನಿವಾರಿಸುತ್ತದೆ.