Cyberdog: ಶವೋಮಿಯ ಸೈಬರ್ ಡಾಗ್ ರೋಬೋಟ್ ಬೆಲೆ ಎಷ್ಟು?: ಇದು ಏನೆಲ್ಲ ಮಾಡುತ್ತೆ?

| Updated By: Vinay Bhat

Updated on: Aug 20, 2022 | 3:07 PM

ಶವೋಮಿ ಇತ್ತೀಚೆಗಷ್ಟೆ ಹೊಸ ಸೈಬರ್ ಡಾಗ್ ಅನ್ನು ಅನಾವರಣಗೊಳಿಸಿತ್ತು. ಇದು ಇನ್ನಷ್ಟೆ ಖರೀದಿಗೆ ಸಿಗಬೇಕಿದೆ. ನಾಯಿಯ ವಿನ್ಯಾಸವನ್ನು ಹೊಂದಿದ್ದು, ಸ್ಮಾರ್ಟ್ ಆಫೀಸ್ ಗಳಲ್ಲಿ ಸಾಕಷ್ಟು ಕೆಲಸವನ್ನು ನಿರ್ವಹಿಸಲಿದೆ.

1 / 6
ಚೀನಾ ಮೂಲದ ಶವೋಮಿ ಕಂಪನಿ ಕೇವಲ ಸ್ಮಾರ್ಟ್​ ಫೋನ್ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಸ್ಮಾರ್ಟ್ ಟಿವಿ ಇಯರ್ ಬಡ್ಸ್, ಪವರ್ ಬ್ಯಾಂಕ್ ಸೇರಿದಂತೆ ಅನೇಕ ವಿಭಾಗಗಳಲ್ಲಿ ವಿಸ್ತರಿಸಿಕೊಂಡಿದೆ. ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಶವೋಮಿ ಇತ್ತೀಚೆಗಷ್ಟೆ ಹೊಸ ಸೈಬರ್ ಡಾಗ್ ಅನ್ನು ಅನಾವರಣಗೊಳಿಸಿತ್ತು. ಇದು ಇನ್ನಷ್ಟೆ ಖರೀದಿಗೆ ಸಿಗಬೇಕಿದೆ. ನಾಯಿಯ ವಿನ್ಯಾಸವನ್ನು ಹೊಂದಿದ್ದು, ಸ್ಮಾರ್ಟ್ ಆಫೀಸ್ ಗಳಲ್ಲಿ ಸಾಕಷ್ಟು ಕೆಲಸವನ್ನು ನಿರ್ವಹಿಸಲಿದೆ. ಈ ಮೂಲಕ ರೋಬೋಟ್ ಮಾರುಕಟ್ಟೆಯಲ್ಲಿ ಶವೋಮಿ ತನ್ನ ಕೈಚಳಕ ತೋರಲು ಮುಂದಾಗಿದೆ.

2 / 6
ಶವೋಮಿಯ ಬ್ಲಾಗ್ ಪೋಸ್ಟ್ ಸೈಬರ್ ಡಾಗ್ ಅನ್ನು 'ಶಕ್ತಿಶಾಲಿ, ನಿಖರ ಮತ್ತು ಚುರುಕುತನ' ಎಂದು ಉಲ್ಲೇಖಿಸಿದೆ. ಈ ರೋಬೋಟ್ ಶವೋಮಿಯ ಆಂತರಿಕ ಅಭಿವೃದ್ಧಿ ಹೊಂದಿದ ಸರ್ವೋ ಮೋಟಾರ್ ಗಳನ್ನು ಪ್ಯಾಕ್ ಮಾಡುತ್ತದೆ. ಅದು ಹೆಚ್ಚಿನ ವೇಗ, ಚುರುಕುತನ ಮತ್ತು ವ್ಯಾಪಕ ಚಲನೆಯನ್ನು ಅನುವಾದಿಸುತ್ತದೆ. ಇದರ ಬೆಲೆ ಭಾರತದಲ್ಲಿ ಅಂದಾಜು 1.18 ಲಕ್ಷ ಇರಬಹುದು.

3 / 6
ನಿಮಗೆ ಸಹಾಯಕವಾಗುವ ಅನೇಕ ಕೆಲಸಗಳನ್ನು ನಿರ್ವಹಿಸಲಿದೆ. ಇದು ಎನ್ ವಿಡಿಯಾ ಜೆಟ್ಸನ್ ಕ್ಸೇವಿಯರ್ ಎನ್ ಎಕ್ಸ್ ಎಐ ಸೂಪರ್ ಕಂಪ್ಯೂಟರ್ ನಿಂದ ರನ್ ಆಗಲಿದೆ ಎನ್ನಲಾಗಿದೆ. ಈ ಸೈಬರ್ ಡಾಗ್ ಎರಡು ಡೆಪ್ತ್ ಲರ್ನಿಂಗ್ ವೇಗವರ್ಧಕ ಎಂಜಿನ್ ಗಳನ್ನು ಒಳಗೊಂಡಿದೆ. ಇನ್ನು ಈ ಡಾಗ್ ಶವೋಮಿಯ ಬಯೋ-ಇನ್ಸ್ಪೈರ್ಡ್ ಪ್ರೇರಿತ ಕ್ವಾಡ್ರುಪ್ಡ್ ರೋಬೋಟ್ ಆಗಿದೆ.

4 / 6
ಈ ರೋಬೋಟ್ ಅನ್ನು ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಅಹಮದಾಬಾದ್ ನ ವಿವಿಧ ಮಿ ಹೋಮ್ ಗಳಿಗೆ ಹೋಗಿ ಪರಿಶೀಲಿಸಬಹುದು. ಇದು ತಂತ್ರಜ್ಞಾನ ಆಧಾರಿತ ರೋಬೋಟ್ ಆಗಿದ್ದು, ನೀವು ನೀಡುವ ಸಲಹೆಗಳು ಹಾಗೂ ಆಜ್ಞೆಗಳನ್ನು ಪಾಲಿಸಲಿದೆ. ಇದನ್ನು ಯಾವುದೇ ಸವಾಲಿನ ಪ್ರದೇಶದಲ್ಲಿ ಕೂಡ ಬಳಸುವುದಕ್ಕೆ ಸಾಧ್ಯವಾಗಲಿದೆ.

5 / 6
ಸೈಬರ್ ಡಾಗ್ ರೋಬೋಟ್ ಟಚ್ ಸೆನ್ಸರ್ ಗಳು, ಕ್ಯಾಮೆರಾಗಳು, ಅಲ್ಟ್ರಾಸಾನಿಕ್ ಸೆನ್ಸಾರ್ ಗಳು , ಜಿಪಿಎಸ್ ಮಾಡ್ಯೂಲ್ ಗಳು ಸೇರಿದಂತೆ ಹಲವು ಹೊಸ ಮಾದರಿಯ ಸೆನ್ಸಾರ್ ಗಳನ್ನು ಒಳಗೊಂಡಿದೆ. ಇದರಲ್ಲಿ ಒಟ್ಟು 11 ಹೈ-ಪ್ರಿಸಿಶನ್ ಸೆನ್ಸಾರ್ ಗಳನ್ನು ಅಳವಡಿಸಲಾಗಿದೆ.

6 / 6
ಸೈಬರ್ ಡಾಗ್ ರೋಬೋಟ್ ಎಂಬೆಡೆಡ್ ಮತ್ತು ಎಡ್ಜ್ ಸಿಸ್ಟಮ್ ಎಐ ಸೂಪರ್ ಕಂಪ್ಯೂಟರ್ ಆಗಿದೆ. ಸೈಬರ್ ಡಾಗ್ ತನ್ನ ಸೆನ್ಸಾರ್ ಮೂಲಕ ಸೆರೆಹಿಡಿಯುವ ಬೃಹತ್ ಡೇಟಾವನ್ನು ಸ್ಟೋರೇಜ್ ಮಾಡಬಹುದಾಗಿದೆ. ಇನ್ನು ಈ ಸೈಬರ್ ಡಾಗ್ ನ ಇಂಟರ್ ನಲ್ಲಿ ಇಂಟರ್ಫೇಸ್ ಮೂರು ಟೈಪ್-ಸಿ ಪೋರ್ಟ್ ಗಳು ಮತ್ತು ಒಂದು ಎಚ್ ಡಿಎಂಐ ಪೋರ್ಟ್ ಅನ್ನು ಒಳಗೊಂಡಿದೆ.