ಹುಟ್ಟೂರಿನ ಶಾಲೆಗೆ ಹೊಸ ಮೆರುಗು ಕೊಟ್ಟ ಡಾಲಿ ಧನಂಜಯ್

Updated on: Feb 13, 2025 | 7:16 PM

Daali Dhananjay: ಡಾಲಿಯ ಹುಟ್ಟೂರಾದ ಕಾಳೇನಹಟ್ಟಿಯ ಸರ್ಕಾರಿ ಶಾಲೆ ದೀನ ಸ್ಥಿತಿಯಲ್ಲಿತ್ತು. ತಾರಸಿ ಮುರಿದಿತ್ತು, ನೆಲದ ಹಾಸೆಲ್ಲ ಒಡೆದು ಹೋಗಿತ್ತು. ಮಕ್ಕಳಿಗೆ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದನ್ನು ನೋಡಿದ್ದ ಡಾಲಿ ಶಾಲೆಗೆ ಮರು ಜೀವ ತುಂಬುವ ಕಾರ್ಯ ಮಾಡಿದ್ದಾರೆ. ಶಾಲೆಯನ್ನು ನವೀಕರಣಗೊಳಿಸಿದ್ದಾರೆ.

1 / 6
ಹುಟ್ಟೂರು ಬಿಟ್ಟು ಬೆಂಗಳೂರಿನಂತಹಾ ಮಹಾನಗರಗಳಲ್ಲಿ ಜೀವನ ಕಟ್ಟಿಕೊಂಡಿರುವ ಹಲವರು ಸಿಗುತ್ತಾರೆ. ಆದರೆ ಅವರಲ್ಲಿ ಎಷ್ಟು ಮಂದಿ ಹುಟ್ಟೂರು ತಮಗೆ ಕೊಟ್ಟಿದ್ದನ್ನು, ಮರಳಿ ಊರಿಗೆ ಕೊಡುವ ಕಾರ್ಯ ಮಾಡಿದ್ದಾರೆ.

2 / 6
ವೃತ್ತಿಗಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಡಾಲಿ ಧನಂಜಯ್, ತಮ್ಮ ಹುಟ್ಟೂರನ್ನು ಮರೆತಿಲ್ಲ. ತಮ್ಮ ಏಳ್ಗೆಯ ಭಾಗವಾಗಿರುವ ಹುಟ್ಟೂರಿಗೆ ಏನಾದರೂ ಮರಳಿ ಕೊಡಬೇಕು ಎಂದುಕೊಂಡು, ಇದೀಗ ಊರಿನ ಶಾಲೆಯನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ.

3 / 6
ಡಾಲಿಯ ಹುಟ್ಟೂರಾದ ಕಾಳೇನಹಟ್ಟಿಯ ಸರ್ಕಾರಿ ಶಾಲೆ ದೀನ ಸ್ಥಿತಿಯಲ್ಲಿತ್ತು. ತಾರಸಿ ಮುರಿದಿತ್ತು, ನೆಲದ ಹಾಸೆಲ್ಲ ಒಡೆದು ಹೋಗಿತ್ತು. ಮಕ್ಕಳಿಗೆ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಇದನ್ನು ನೋಡಿದ್ದ ಡಾಲಿ ಶಾಲೆಗೆ ಮರು ಜೀವ ತುಂಬುವ ಕಾರ್ಯ ಮಾಡಿದ್ದಾರೆ.

4 / 6
ತಮ್ಮೂರಿಗೆ ಸರ್ಕಾರಿ ಶಾಲೆಗೆ ಬಣ್ಣ ಹೊಡೆಸಿ, ಒಡೆದಿದ್ದ ತಾರಸಿಯನ್ನು ಸರಿ ಮಾಡಿಸಿ, ನೆಲ ಹಾಸನ್ನು ಮತ್ತೊಮ್ಮೆ ಹಾಕಿಸಿ. ಶುದ್ಧ ಕುಡಿಯುವ ನೀರಿಗೆ ವಾಟರ್ ಫಿಲ್ಟರ್​ಗಳನ್ನು ಅಳವಡಿಸಿ ಕೊಟ್ಟಿದ್ದಾರೆ.

5 / 6
ಮದುವೆಗೆ ಮುಂಚೆ ಈ ಸಾಮಾಜಿಕ ಕಾರ್ಯಕ್ಕೆ ಡಾಲಿ ಕೈ ಹಾಕಿದ್ದರು. ಅದರಂತೆ ಇಂದು (ಫೆಬ್ರವರಿ 13) ಡಾಲಿ ಧನಂಜಯ ತಮ್ಮೂರಿನ ನವೀಕೃತ ಶಾಲೆಗೆ ಹೋಗಿ ಎಲ್ಲವನ್ನೂ ಪರಿಶೀಲಿಸಿದ್ದಲ್ಲದೆ, ಶಾಲೆಯ ಮಕ್ಕಳೊಡನೆ ಮಾತನಾಡಿ ಬಂದಿದ್ದಾರೆ. ಇಲ್ಲಿವೆ ಚಿತ್ರಗಳು.

6 / 6
ಕೆಲ ವಾರಗಳ ಹಿಂದಷ್ಟೆ ತಮ್ಮೂರಿನ ಸರ್ಕಾರಿ ಶಾಲೆಯ ನವೀಕರಣ ಕೆಲಸವನ್ನು ಡಾಲಿ ಶುರು ಮಾಡಿದ್ದರು. ಇದೀಗ ಮದುವೆಗೆ ಕೆಲ ದಿನ ಇರುವಂತೆ ಶಾಲೆಯ ಕಾರ್ಯಗಳನ್ನು ಮುಗಿಸಿದ್ದಾರೆ.

Published On - 7:08 pm, Thu, 13 February 25