
ಡಾಲಿ ಧನಂಜಯ್ ಅವರು ಈಗ ವಿವಾಹ ಆಗುತ್ತಿದ್ದಾರೆ. ಬಹುಕಾಲದ ಗೆಳತಿ ಜೊತೆ ಅವರ ವಿವಾಹ ನೆರವೇರುತ್ತಿದೆ. ಈ ಗುಡ್ನ್ಯೂಸ್ನ ಅವರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾವಿ ಪತ್ನಿ ಜೊತೆ ಫೋಟೋಶೂಟ್ ಕೂಡ ಮಾಡಿಸಿದ್ದಾರೆ.

ಧನಂಜಯ್ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಧನ್ಯಾತಾ. ಅವರು ವೃತ್ತಿಯಲ್ಲಿ ವೈದ್ಯೆ. ಧನ್ಯಾತಾ ಹಾಗೂ ಧನಂಜಯ್ ಓದಿದ್ದು ಮೈಸೂರಿನಲ್ಲಿ. ಇಬ್ಬರ ಮಧ್ಯೆ ಹಲವು ವರ್ಷಗಳ ಪರಿಚಯ ಇದೆ. ಇಬ್ಬರೂ ವಿವಾಹ ಆಗುತ್ತಿದ್ದಾರೆ.

ಫೆಬ್ರವರಿ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಧನಂಜಯ್ ಅವರ ಮದುವೆ ನೆರವೇರಲಿದೆ. ಚಿತ್ರರಂಗದವರು, ರಾಜಕೀಯದವರು ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಈ ವಿವಾಹ ಕಾರ್ಯದಲ್ಲಿ ಭಾಗಿ ಆಗಲಿದ್ದಾರೆ.

ಧನಂಜಯ್ ಅವರನ್ನು ಪ್ರೇಮ ವಿವಾಹ. ಧನಂಜಯ್ ಹಾಗೂ ಧನ್ಯಾತಾ ಮಧ್ಯೆ ಪ್ರೀತಿ ಮೂಡಿತ್ತು. ಈಗ ಪ್ರೀತಿಗೆ ಇವರು ಹೊಸ ಅರ್ಥ ನೀಡುತ್ತಾ ಇದ್ದಾರೆ.

ಧನ್ಯತಾ ಚಿತ್ರದುರ್ಗ ಮೂಲದವರು. ಅವರು ಅಪ್ಪಟ ಕನ್ನಡತಿ. ಭಾವಿ ಪತ್ನಿ ಜೊತೆಗಿನ ಸುಂದರವಾದ ಫೋಟೋನ ಧನಂಜಯ್ ಅವರು ಹಂಚಿಕೊಂಡಿದ್ದಾರೆ. ಅವರಿಗೆ ಶುಭಾಶಯ ಬರುತ್ತಿದೆ.

ಮೈಸೂರು ನಗರ ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಭಾವನಾತ್ಮಕವಾಗಿ ಕನೆಕ್ಟ್ ಆದ ಸ್ಥಳ. ಹೀಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ.