ಮಹೇಶ್ವರಸ್ವಾಮಿ ಜಾತ್ರೆಗೆ ಪುರುಷರಿಗೆ ಮಾತ್ರ ಅವಕಾಶ: ಅಪ್ಪಿತಪ್ಪಿ ಮಹಿಳೆಯರು ಬಂದ್ರೆ ನಡೆಯುತ್ತೆ ಅನಾಹುತ

Edited By:

Updated on: Dec 18, 2025 | 8:15 AM

ದಾವಣಗೆರೆ ಹೊರವಲಯದ ಬಸಾಪುರದಲ್ಲಿ ಮಹೇಶ್ವರಸ್ವಾಮಿ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಇದು ಒಂದು ವಿಶಿಷ್ಟ ಜಾತ್ರೆ, ಏಕೆಂದರೆ ಇಲ್ಲಿ ಪುರುಷರಿಗೆ ಮಾತ್ರ ಪ್ರವೇಶವಿದೆ, ಮಹಿಳೆಯರಿಗೆ ಪ್ರವೇಶ ನಿಷಿದ್ಧ. ಪುಷ್ಯ ಮಾಸದ ಎಳ್ಳು ಅಮವಾಸ್ಯೆಯಂದು ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಬಾಳೆಹಣ್ಣಿನ ಸಿಪ್ಪೆಗಳ ವಿಸರ್ಜನೆಯ ಮೂಲಕ ಗ್ರಾಮದ ಭವಿಷ್ಯವನ್ನು ಊಹಿಸುವ ನಂಬಿಕೆಯೂ ಇದೆ. ಈ ಪ್ರಾಚೀನ ಪದ್ಧತಿ 50-60 ವರ್ಷಗಳಿಂದ ನಡೆದುಕೊಂಡು ಬಂದಿದೆ.

1 / 6
ದಾವಣಗೆರೆ ನಗರದ ಹೊರವಲಯ ಬಸಾಪುರದಲ್ಲಿ ಮಹೇಶ್ವರಸ್ವಾಮಿ ಜಾತ್ರೆ ಶುರುವಾಗಿದೆ. ಸಾವಿರಾರೂ ಭಕ್ತ ಜಾತ್ರೆ ಬರುತ್ತಾರೆ. ಆದರೆ ಇಲ್ಲೊಂದು ವಿಶೇಷವಿದೆ. ಜಾತ್ರೆಗೆ ಪುರುಷರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಹಿಳೆಯರು ಈ ಜಾತ್ರೆಗೆ ಬರುವಂತಿಲ್ಲ.

2 / 6
ಪುಷ್ಯ ಮಾಸದ ಎಳ್ಳು ಅಮವಾಸ್ಯೆ ವೇಳೆ  ಮೂರು ದಿನಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ಆದರೆ ಜಾತ್ರೆಗೆ ಮಹಿಳೆಯರು ಬರುವಂತಿಲ್ಲ. ಈ ಪದ್ಧತಿ 50-60 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಜಾತ್ರೆಯಲ್ಲಿ ಸರ್ವಜನಾಂದವರು ಜಾತ್ರೆಯಲ್ಲಿ ಪಾಲ್ಗೊಳ್ತಾರೆ.

3 / 6
ಕಳೆದ ನಾಲ್ಕು ಶತಮಾನಗಳಿಂದ ಮಹೇಶ್ವರ ಸ್ವಾಮಿ ಪೂಜೆ ಇಲ್ಲಿ ನಡೆಯುತ್ತ ಬಂದಿದೆ. ದೊಡ್ಡ ಮರದ ಕೆಳಗೆ ಸುತ್ತಲು ಭತ್ತದ ಗದ್ದೆಗಳಿರುವ ಪ್ರದೇಶದಲ್ಲಿ ಮಹೇಶ್ವರ ಸ್ವಾಮಿ ನೆಲೆಸಿದ್ದಾರೆ.

4 / 6
Gandasara Jathre (3)ವರ್ಷಕ್ಕೊಮ್ಮೆ ಮಹೇಶ್ವರ ಸ್ವಾಮೀಯಜಾತ್ರೆ ನಡೆಯುತ್ತದೆ. ಜಾತ್ರೆಯ ಸಮಯದಲ್ಲಿ ಅಥವಾ ಪೂಜೆಯ ಸಮಯದಲ್ಲಿ ಮಹಿಳೆಯರು ಇಲ್ಲಿಗೆ ಬರುವಂತಿಲ್ಲ. ಒಂದು ವೇಳೆ ಬಂದರೆ ಅಪಯಾ ಕಟ್ಟಿಟ ಬುತ್ತಿ.

5 / 6
ಮಹೇಶ್ವರಸ್ವಾಮಿ ಗದ್ದುಗೆ ಸಮೀಪದಲ್ಲಿ ಆನೆಕೊಂಡ ಬಸವೇಶ್ವರಸ್ವಾಮಿ, ಗುರುಸಿದ್ಧೇಶ್ವರಸ್ವಾಮಿ ಹಾಗೂ ಹಾಲಸ್ವಾಮಿ ದೇವರುಗಳ ಭೇಟಿಯಾಗುತ್ತದೆ. ಈ  ಗದ್ದುಗೆಯ ಮೇಲೆ  ಬಾಳೆಹಣ್ಣಿನ ಸಿಪ್ಪೆಗಳನ್ನು ಎಸೆಯುತ್ತಾರೆ.

6 / 6
ಪೂಜಾರಿ ಪುಷ್ಕರಣಿಯಲ್ಲಿ ಈ ಬಾಳೆಹಣ್ಣಿನ ಸಿಪ್ಪೆ ವಿಸರ್ಜಿಸ್ತಾರೆ. ಈ ಸಿಪ್ಪೆಗಳು ತೇಲಿದ್ರೆ ಗ್ರಾಮಕ್ಕೆ ಒಳಿತು, ಮುಳುಗಿದ್ರೆ ಆಪತ್ತು ಎಂಬ ನಂಬಿಕೆ ಇಲ್ಲಿದೆ. ಜತೆಗೆ ಇಲ್ಲಿ ಅನ್ನದಾನ ಸೇವೆ ಕೂಡ ಇರುತ್ತದೆ.

Published On - 8:15 am, Thu, 18 December 25