Kannada News Photo gallery Death toll rises to 84 in landslides in Kerala's Wayanad July 30 and 31, will be observed as state mourning
ಮಣ್ಣಿನಡಿಯಲ್ಲಿ ಹೂತು ಹೋದ ಮನೆ, ಮನುಷ್ಯರು; ವಯನಾಡಿನ ದುರಂತ ಸ್ಥಳದ ದೃಶ್ಯಗಳು
ಕೇರಳದ ವಯನಾಡ್ ಜಿಲ್ಲೆಯ ಚೂರಲ್‌ಮಲ ಮತ್ತು ಮುಂಡಕೈ ಪ್ರದೇಶಗಳಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಅಪಾರ ನಾಶನಷ್ಟ ಸಂಭವಿಸಿದೆ. ರಾತ್ರಿ ಬೆಳಗಾಗುವುದರೊಳಗೆ ಗ್ರಾಮಗಳೇ ಮಣ್ಣಿನಡಿಯಲ್ಲಿ ಬಿದ್ದಿದ್ದು, ಇಲ್ಲಿವರೆಗೆ 80ಕ್ಕಿಂತಲೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿನ ನದಿಗಳು ಉಕ್ಕಿ ಹರಿಯುತ್ತಿದ್ದು 2018ರ ಪ್ರವಾಹವನ್ನು ನೆನಪಿಸುತ್ತಿದೆ. ಕೆಸರು ಮಣ್ಣುಗಳಿಂದ ಮುಳುಗಿರುವ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
1 / 10
ವಯನಾಡ್ ಗುಡ್ಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 84 ಕ್ಕೆ ಏರಿಕೆಯಾಗಿದ್ದು, ಇದುವರೆಗೆ ಒಟ್ಟು 116 ಮಂದಿ ಗಾಯಗೊಂಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ಕೇರಳದ ನಾಲ್ಕು ಜಿಲ್ಲೆಗಳಿಗಾದ ಕೋಝಿಕ್ಕೋಡ್, ಮಲಪ್ಪುರಂ, ವಯನಾಡ್ ಮತ್ತು ಕಾಸರಗೋಡಿಗೆ ರೆಡ್ ಅಲರ್ಟ್ ಘೋಷಿಸಿದೆ.
2 / 10
ವಯನಾಡ್ ದುರಂತದಿಂದ ಕೇರಳ ತತ್ತರಿಸಿದ್ದು, ಜುಲೈ 30 ಮತ್ತು 31 ರಂದು ಎರಡು ದಿನಗಳ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಕೇರಳ ಸರ್ಕಾರ ಘೋಷಿಸಿದೆ. ರಾಜ್ಯ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತ್ತು.
3 / 10
2018ರ ಪ್ರವಾಹದ ನಂತರ ವಯನಾಡಿನ ಚೂರಲ್ ಮಲ ಭೂಕುಸಿತ ಕೇರಳ ಕಂಡ ಅತಿ ದೊಡ್ಡ ದುರಂತ. ಇಲ್ಲಿ ಗುಡ್ಡ ಕುಸಿದು ಅಪಾರ ನಾಶನಷ್ಟವುಂಟಾಗಿದ್ದು ಚೆಲ್ಲಾಪಿಲ್ಲಿಯಾದ ಮೃತದೇಹಗಳು ಎಲ್ಲಿವೆ ಎಂಬುದೇ ಗೊತ್ತಿಲ್ಲ. ಚೂರಲ್‌ಮಲ ಮಾರುಕಟ್ಟೆಯೇ ಕಣ್ಮರೆಯಾಗಿದೆ. ಎಷ್ಟು ಮನೆಗಳು ನಾಶವಾಗಿವೆ ಎಂಬುದಕ್ಕೆ ನಿಖರವಾದ ಲೆಕ್ಕವಿಲ್ಲ.
4 / 10
ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ಕೂಡ ಸಜ್ಜುಗೊಳಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಈ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದ ಕಾರಣ ರಕ್ಷಣಾ ಪ್ರಯತ್ನಗಳು ಸವಾಲಾಗಿಯೇ ಉಳಿದಿವೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
5 / 10
ಪೀಡಿತ ಪ್ರದೇಶವನ್ನು ಹತ್ತಿರದ ಪಟ್ಟಣಕ್ಕೆ ಸಂಪರ್ಕಿಸುವ ತಾತ್ಕಾಲಿಕ ಸೇತುವೆ ಕುಸಿದಿದ್ದು, ಭಾರತೀಯ ಸೇನೆ ಹಗ್ಗದ ಮೂಲಕ ಸಂಪರ್ಕ ಸಾಧಿಸುತ್ತಿದೆ. ಸೈನ್ಯವು ನಾಲ್ಕು ಕಾಲಮ್‌ಗಳನ್ನು ಸಜ್ಜುಗೊಳಿಸಿದೆ, ಇದರಲ್ಲಿ ಎರಡು ಕಾಲಮ್‌ಗಳು ಎಕ್ಸ್ 122 ಇನ್‌ಫೆಂಟ್ರಿ ಬೆಟಾಲಿಯನ್ (ಟೆರಿಟೋರಿಯಲ್ ಆರ್ಮಿ) ಮತ್ತು ಎರಡು ಮಾಜಿ ಡಿಎಸ್‌ಸಿ ಸೆಂಟರ್, ಕಣ್ಣೂರು.
6 / 10
ಮುಂಡಕೈಯಲ್ಲಿ ಹಲವು ಮೃತದೇಹಗಳು ರಾಶಿ ಬಿದ್ದಿವೆ ಎಂದು ವರದಿಯಾಗಿದೆ. ಇವುಗಳನ್ನು ಮೇಪಾಡಿಗೆ ತಲುಪಿಸಲು ಸಾಧ್ಯವಾಗಿಲ್ಲ. ಕುಸಿದ ಕಟ್ಟಡಗಳ ಮೇಲೆ ಮೃತದೇಹಗಳು ಬಿದ್ದಿರುವ ಬಗ್ಗೆ ಮುಂಡಕೈಯಿಂದ ಮಾಹಿತಿ ಲಭಿಸಿದೆ. ಅಲ್ಲಿಗೆ ತಲುಪಲು ಯಾವುದೇ ಮಾರ್ಗವಿಲ್ಲ, ರಕ್ಷಣಾ ಕಾರ್ಯ ಮುಂದುವರಿದಿದೆ
7 / 10
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ವಯನಾಡಿಗೆ ಐದು ಕೋಟಿ ರೂಪಾಯಿಗಳನ್ನು ಪರಿಹಾರ ಸಹಾಯಕ್ಕಾಗಿ ಬಿಡುಗಡೆ ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಎಲ್ಲ ರೀತಿಯ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
8 / 10
ಇದೇ ವೇಳೆ ನದಿಯಲ್ಲಿ ಅನಿರೀಕ್ಷಿತವಾಗಿ ನೀರು ಹೆಚ್ಚಾದ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಗಿದೆ. ನಮ್ಮ ಮಕ್ಕಳನ್ನಾದರೂ ಮುಂಡಕೈಯಿಂದ ರಕ್ಷಿಸಿ ಎಂದು ಅಲ್ಲಿನ ಜನರು ಫೋನ್ ನಲ್ಲಿ ಅಳುತ್ತಿದ್ದಾರೆ. ಮನೆಗಳು ಧ್ವಂಸಗೊಂಡಿದ್ದು, ಆಹಾರ ಮತ್ತು ನೀರಿನ ಕೊರತೆಯಿದೆ. 12 ಗಂಟೆ ವಿದ್ಯುತ್ ಇಲ್ಲದೆ ಹಲವರ ಫೋನ್ ಸ್ವಿಚ್ ಆಫ್ ಆಗಿದ್ದು, ರಕ್ಷಣಾ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುತ್ತಿದೆ.
9 / 10
ಕಳೆದ 24 ಗಂಟೆಗಳಲ್ಲಿ ವಯನಾಡು ಜಿಲ್ಲೆಯ ಒಂಬತ್ತು ಸ್ಥಳಗಳಲ್ಲಿ 300 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. ಮಕಿಯಾಡ್, ಚೆಂಬ್ರಾ, ಸುಧಾಂಗಿರಿ, ಲಖಿಡಿ, ಬಾಣಾಸುರ ಕಂಟ್ರೋಲ್ ಶಾಫ್ಟ್, ನಿರವಿಲ್ ಪುಳ, ಪುತ್ತುಮಲ, ಪೆರಿಯ ಅಯಾನಿಕಲ್ ಮತ್ತು ತೆಟ್ಟಮಲ ಎಂಬೀ ಪ್ರದೇಶಕಗಳ ಮಳೆ ಮಾಪಕಗಳಲ್ಲಿ ಕಳೆದ 24 ಗಂಟೆಗಳಲ್ಲಿ 300 ಮಿಮೀ ಮಳೆ ದಾಖಲಾಗಿದೆ. ಈ ಪೈಕಿ 24 ಗಂಟೆಗಳಲ್ಲಿ ತೆಟ್ಟಮಲದಲ್ಲಿ ಕೇವಲ 409 ಮಿ.ಮೀ ಮಳೆಯಾಗಿದೆ.
10 / 10
ಪ್ರಸ್ತುತ ನಡೆಯುತ್ತಿರುವ ಪರಿಹಾರ ಕಾರ್ಯಗಳನ್ನು ಬೆಂಬಲಿಸಲು ವಯನಾಡಿನ ಚೂರಲ್ ಮಲದಲ್ಲಿರುವ ಮಸೀದಿ ಮತ್ತು ಮದರಸಾದಲ್ಲಿ ತಾತ್ಕಾಲಿಕ ಆಸ್ಪತ್ರೆ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು ಎಂದು ಕೇರಳ ಆರೋಗ್ಯ ಸಚಿವರು ಹೇಳಿದ್ದಾರೆ
Published On - 5:30 pm, Tue, 30 July 24