
ದೀಪಿಕಾ ಪಡುಕೋಣೆ ಅವರು 95ನೇ ಸಾಲಿನ ಆಸ್ಕರ್ ವೇದಿಕೆ ಮೇಲೆ ಮಿಂಚಿದ್ದಾರೆ. ‘ನಾಟು ನಾಟು..’ ಹಾಡಿನ ಪರ್ಫಾರ್ಮೆನ್ಸ್ಗೂ ಮೊದಲು ದೀಪಿಕಾ ಪಡುಕೋಣೆ ಅವರು ಹಾಡಿನ ಬಗ್ಗೆ ವಿವರಣೆ ನೀಡಿದ್ದಾರೆ.

ಗ್ಲೋಬಲ್ ಸೆನ್ಸೇಷನ್ ಸೃಷ್ಟಿಸಿದ ಹಾಡು ‘ನಾಟು ನಾಟು..’ ಎಂದು ದೀಪಿಕಾ ಕರೆದಿದ್ದಾರೆ. ಅವರು ನಗುಮುಖದಲ್ಲೇ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಕಪ್ಪು ಬಣ್ಣದ ಗೌನ್ನಲ್ಲಿ ದೀಪಿಕಾ ಪಡುಕೋಣೆ ಅವರು ಮಿಂಚಿದ್ದಾರೆ. ಅವರು ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಆಸ್ಕರ್ ವೇದಿಕೆ ಏರುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ದೀಪಿಕಾ ಅವರು ಇಂತಹ ಅವಕಾಶ ಗಿಟ್ಟಿಸಿಕೊಂಡು ಮಿಂಚಿದ್ದಾರೆ.

ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.