Photos.. ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಅನ್ನದಾತರ ಕಿಚ್ಚು
ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತ ಪರ ಸಂಘಟನೆಗಳು ದೆಹಲಿ ಚಲೋ ಪ್ರತಿಭಟನೆ ಮಾಡುತ್ತಿವೆ. ಇದು ಇಡೀ ದೇಶಕ್ಕೆ ವ್ಯಾಪಿಸಿದೆ. ದಕ್ಷಿಣ ಭಾರತದ ರಾಜ್ಯಗಳ ರೈತರೂ ಸಹ ಪಂಜಾಬ್ ರೈತರಿಗೆ ಬೆಂಬಲ ಸೂಚಿಸಿದ್ದಾರೆ.
1 / 9
ಹೊಸ ಕೃಷಿ ಕಾನೂನುಗಳ ವಿರುದ್ಧ ಘಾಜಿಪುರ ಗಡಿಯಲ್ಲಿ ನಡೆದ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕೈಟ್ ರೈತರನ್ನು ಉದ್ದೇಶಿಸಿ ಮಾತನಾಡಿದರು.
2 / 9
ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ 'ದೆಹಲಿ ಚಲೋ' ಪ್ರತಿಭಟನೆಯ ಸಂದರ್ಭದಲ್ಲಿ ಪಂಜಾಬಿ ನಟ ಮತ್ತು ಗಾಯಕ ದಿಲ್ಜಿತ್ ದೊಸಾಂಜ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಪ್ರತಿಭಟನಾನಿರತ ರೈತರಿಗೆ ಅಗತ್ಯ ವಸ್ತು ಖರೀದಿಸಲು 1ಕೋಟಿ ರೂ. ದಾನ ನೀಡಿದ್ದಾರೆ.
3 / 9
ಡಿಸೆಂಬರ್ 6 ರ ಭಾನುವಾರ ದೆಹಲಿ-ಯುಪಿ ಗಡಿಯಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧದ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು.
4 / 9
ಡಿಸೆಂಬರ್ 6, 2020 ರಂದು ನವದೆಹಲಿಯ ಎನ್ಎಚ್ -24 ಕಂಡು ಬಂದದ್ದು ಹೀಗೆ.
5 / 9
'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯಲ್ಲಿ ರೈತರನ್ನು ತಡೆಯಲು ಸಜ್ಜಾಗಿರುವ ಭದ್ರತಾಪಡೆ.
6 / 9
ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ರೈತರನ್ನು ತಡೆಯಲು ಘಾಜಿಪುರ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
7 / 9
ದೆಹಲಿಯ ಸಿಂಗು ಗಡಿಯಲ್ಲಿ ರೈತರು ಆಹಾರವನ್ನು ತಯಾರಿಸುತ್ತಿರುವುದು.
8 / 9
ಡಿಸೆಂಬರ್ 5 ರ ಶನಿವಾರದಂದು ದೆಹಲಿಯ ಸಿಂಗು ಗಡಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ರೈತರು.
9 / 9
ಡಿಸೆಂಬರ್ 5 ರ ಶನಿವಾರದಂದು ದೆಹಲಿಯ ಸಿಂಗು ಗಡಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ರೈತರು.