Kannada News Photo gallery Devotees who came to see the splendor of the lavish village fair held after a century; Here is a glimpse of it
ಶತಮಾನದ ಬಳಿಕ ನಡೆದ ಅದ್ದೂರಿ ಗ್ರಾಮ ದೇವತೆಯ ಜಾತ್ರೆಯ ವೈಭವ ನೋಡಲು ಬಂದ ಭಕ್ತಗಣ; ಇಲ್ಲಿದೆ ನೋಡಿ ಅದರ ಝಲಕ್
TV9 Web | Updated By: ಕಿರಣ್ ಹನುಮಂತ್ ಮಾದಾರ್
Updated on:
Jan 24, 2023 | 8:58 PM
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ದ್ಯಾಮವ್ವ, ದುರ್ಗಮ್ಮ ಗ್ರಾಮ ದೇವಿಯ ಜಾತ್ರೆಯು ಅದ್ದೂರಿಯಾಗಿ ನಡೆದಿದೆ. ಜಿಲ್ಲೆ ಅಷ್ಟೇ ಅಲ್ಲದೇ ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದ ಪುನೀತರಾದರು.
1 / 7
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ದ್ಯಾಮವ್ವ, ದುರ್ಗಮ್ಮ ಗ್ರಾಮ ದೇವಿಯ ಮೂರ್ತಿಗಳು ಹಳೆಯದಾದರಿಂದ ಜಾತ್ರೆಯು ಶತಮಾನದಿಂದ ನಡೆದಿರಲಿಲ್ಲ. ಇದೀಗ ದುರ್ಗಮ್ಮ, ದ್ಯಾಮವ್ವ ದೇವಿ ಹೊಸ ಮೂರ್ತಿಗಳು ತರಲಾಗಿದ್ದು, ಗ್ರಾಮಸ್ಥರೆಲ್ಲಾ ಸೇರಿ ಈ ವರ್ಷ ಗ್ರಾಮ ದೇವತೆಗಳ ಜಾತ್ರೆ ಅದ್ಧೂರಿಯಾಗಿ ಆಚರಿಸಿದ್ದಾರೆ.
2 / 7
ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದಿಂದ ದೇವತೆಗಳ ಹೊಸ ಮೂರ್ತಿಗಳು ತರಲಾಗಿದ್ದು, ಇಂದು(ಜ.23) ದ್ಯಾಮವ್ವ, ದುರ್ಗವ್ವ ದೇವತೆಗಳನ್ನ ಗ್ರಾಮಕ್ಕೆ ಅದ್ಧೂರಿಯಾಗಿ ಬರಮಾಡಿಕೊಂಡರು. ಹೂಗಳಿಂದ ಶೃಂಗಾರ ಮಾಡಿದ ಗ್ರಾಮದಲ್ಲಿ ದೇವತೆ ಮೂರ್ತಿಗಳ ಭವ್ಯ ಮೆರವಣಿಗೆ ಮಾಡಲಾಯಿತು.
3 / 7
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಿದ್ರು. ಈ ವೇಳೆ ಭಕ್ತರು ಪರಸ್ಪರ ಭಂಡಾರ ಎರಚುವ ಮೂಲಕ ಸಂಭ್ರಮಿಸಿದ್ರು. ನೂರಾರು ಸುಮಂಗಲೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
4 / 7
ಈ ವೇಳೆ ಡೊಳ್ಳು ಕುಣಿತ, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆ ರಂಗು ಹೆಚ್ಚಿಸಿದ್ವು. ಈ ಜಾತ್ರೆ ವಿಶೇಷ ಅಂದರೆ ಎರಡು ದಿನ ಈ ಗ್ರಾಮದಲ್ಲಿ ಯಾರೊಬ್ರು ಅಪ್ಪಿತಪ್ಪಿಯೂ ಚಪ್ಪಲಿ ಹಾಕಿಕೊಳ್ಳುವಂತಿಲ್ಲ. ಅಷ್ಟೇ ಅಲ್ಲದೇ ಯಾರ ಮನೆಯಲ್ಲೂ ಒಲೆ ಹೊತ್ತಿಸುವಂತಿಲ್ಲ. ಇಡೀ ಗ್ರಾಮಸ್ಥರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ.
5 / 7
ಶತಮಾನದ ಹಿಂದೆ ಈ ಗ್ರಾಮದ ಗ್ರಾಮದೇವತೆ ಜಾತ್ರೆ ಮಾಡಲಾಗಿತ್ತು. ಈಗ ಒಂದು ಶತಮಾನದ ಬಳಿಕ ದ್ವಾಮವ್ವ, ದುರ್ಗವ್ವ, ಹೊಸ ಮೂರ್ತಿಗಳನ್ನು ತಂದು ಜಾತ್ರೆ ಮಾಡಲಾಗಿದ್ದು, ಮಹಿಳೆಯರು, ಮಕ್ಕಳು, ಹಿರಿಯರು ಎಲ್ಲರೂ ಜಾತಿ ಬೇಧ ಭಾವವಿಲ್ಲದೇ ಈ ಸಂಭ್ರಮದಲ್ಲಿ ತೊಡಗುತ್ತಾರೆ.
6 / 7
ಇನ್ನೂಂದು ವಿಶೇಷವೆಂದರೆ ಮದುವೆಯಾಗಿ ಹೋದ ಗ್ರಾಮದ ಎಲ್ಲ ಮಹಿಳೆಯರು ಎಷ್ಟೇ ವಯಸ್ಸಾದ್ರೂ ದೇವಿ ಜಾತ್ರೆಯಲ್ಲಿ ಭಾಗಿಯಾಗಿದ್ದು, ಗ್ರಾಮದ ಅಲ್ಲಲ್ಲಿ ಶಿರಾ, ಅನ್ನ, ಸಾರು ಊಟದ ವ್ಯವಸ್ಥೆ ಮಾಡಲಾಗಿತ್ತು. ದ್ಯಾಮವ್ವ, ದುರ್ಗರ್ವ ಭಕ್ತರ ಇಷ್ಟಾರ್ಥಗಳು ಈಡೇರಿಸುತ್ತಾರೆ ಅನ್ನೋ ನಂಬಿಕೆ ಗ್ರಾಮಸ್ಥರಲ್ಲಿದೆ.
7 / 7
ಈ ವಿಶೇಷವಾದ ಜಾತ್ರೆಯಲ್ಲಿ ಮಕ್ಕಳು, ಹಿರಿಯರು ತಮ್ಮ ವಯಸ್ಸಿನ ತಾರತಮ್ಯವಿಲ್ಲದೇ ಎಲ್ಲರೂ ಒಂದೇ ವಯಸ್ಸಿನವರು ಎಂದು ಕೊಂಡು ಜಾತ್ರೆಯನ್ನು ಆನಂದಿಸುತ್ತಾರೆ. ನಿಜಕ್ಕೂ ಈಗಿನ ಆಧುನಿಕ ಯುಗದಲ್ಲಿ ಇಂತಹ ಸಾಂಪ್ರದಾಯಿಕ ಜಾತ್ರೆಯನ್ನು ನಮ್ಮ ನಡುವೆ ಆಚರಿಸುತ್ತಿದ್ದು ಸಂತೋಷದ ವಿಚಾರ.
Published On - 8:57 pm, Tue, 24 January 23