Updated on: Jan 25, 2023 | 10:44 AM
‘ಬಿಗ್ ಬಾಸ್ ಕನ್ನಡ ಸೀಸನ್ 9’ ಪೂರ್ಣಗೊಂಡು ತಿಂಗಳು ಕಳೆಯುತ್ತಾ ಬಂದಿದೆ. ದೊಡ್ಮನೆಯಲ್ಲಿ ಒಟ್ಟಾಗಿದ್ದ ಸ್ಪರ್ಧಿಗಳು ಮನೆಯ ಹೊರಗೂ ಫ್ರೆಂಡ್ಶಿಪ್ ಮುಂದುವರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದಾಗ ರಾಕೇಶ್ ಅಡಿಗ, ಅಮೂಲ್ಯ ಗೌಡ, ಅನುಪಮಾ ಗೌಡ, ದಿವ್ಯಾ ಉರುಡುಗ ಮೊದಲಾದವರು ಒಂದು ಗ್ಯಾಂಗ್ ಮಾಡಿಕೊಂಡಿದ್ದರು. ಇದು ವೀಕ್ಷಕರಿಗೆ ಸ್ಪಷ್ಟವಾಗಿತ್ತು.
ರಾಕೇಶ್ ಅಡಿಗ, ದಿವ್ಯಾ ಉರುಡುಗ, ಅಮೂಲ್ಯ ಗೌಡ, ನೇಹಾ ಗೌಡ, ಅನುಪಮಾ ಗೌಡ ಒಂದೆಡೆ ಸೇರಿದ್ದಾರೆ.
ಈ ಫೋಟೋಗಳನ್ನು ಅನುಪಮಾ ಗೌಡ ಮೊದಲಾದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ.
ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ ಬೇರೆ ಗುಂಪಾಗಿತ್ತು. ಹೀಗಾಗಿ, ಅವರು ಗೆಟ್ ಟುಗೆದರ್ನಲ್ಲಿ ಭಾಗಿ ಆಗಿಲ್ಲ.
ಈ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ‘ಪ್ರಮುಖರೇ ಮಿಸ್ಸಿಂಗ್’ ಎಂದು ಅನೇಕರು ಹೇಳಿದ್ದಾರೆ.