ಟಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ನಟಿ ಶ್ರೀಲೀಲಾ; ಕೈಯಲ್ಲಿದೆ ನಾಲ್ಕು ತೆಲುಗು ಸಿನಿಮಾ

Updated on: Jan 24, 2023 | 9:06 AM

ಶ್ರೀಲೀಲಾ ಅವರು ‘ಧಮಾಕ’ ಸಿನಿಮಾದಲ್ಲಿ ರವಿತೇಜ ಜತೆ ತೆರೆ ಹಂಚಿಕೊಂಡರು. ಈ ಚಿತ್ರ ಹಿಟ್ ಆದ ನಂತರದಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ.

1 / 5
ನಟಿ ಶ್ರೀಲೀಲಾ ಅವರು ಟಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರ ನಟನೆಯ ‘ಧಮಾಕ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ 100 ಕೋಟಿ ರೂಪಾಯಿ ಬಾಚಿಕೊಂಡಿದೆ.

ನಟಿ ಶ್ರೀಲೀಲಾ ಅವರು ಟಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರ ನಟನೆಯ ‘ಧಮಾಕ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ 100 ಕೋಟಿ ರೂಪಾಯಿ ಬಾಚಿಕೊಂಡಿದೆ.

2 / 5

ಶ್ರೀಲೀಲಾ ಅವರು ‘ಧಮಾಕ’ ಸಿನಿಮಾದಲ್ಲಿ ರವಿತೇಜ ಜತೆ ತೆರೆ ಹಂಚಿಕೊಂಡರು. ಈ ಚಿತ್ರ ಹಿಟ್ ಆದ ನಂತರದಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ.

3 / 5

ಮಹೇಶ್ ಬಾಬು ನಟನೆಯ 28ನೇ ಸಿನಿಮಾ, ‘ಅನಗನಗ ಒಕ ರಾಜು’, ‘ಜೂನಿಯರ್​’ ಸೇರಿ ಒಟ್ಟೂ ನಾಲ್ಕು ತೆಲುಗು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.

4 / 5

‘ಕಿಸ್​’ ಚಿತ್ರದಿಂದ ಶ್ರೀಲೀಲಾ ಅವರು ಚಿತ್ರರಂಗ ಪ್ರವೇಶಿಸಿದರು. ‘ಭರಾಟೆ’ ಚಿತ್ರದಿಂದ ಶ್ರೀಲೀಲಾ ಖ್ಯಾತಿ ಹೆಚ್ಚಿತು.

5 / 5

ಶ್ರೀಲೀಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದಾರೆ. ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ.

Published On - 9:05 am, Tue, 24 January 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us