
ನಟಿ ದಿವ್ಯಾ ಉರುಡುಗ ಅವರು ಇಷ್ಟು ವರ್ಷಗಳ ಕಾಲ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈಗ ಅವರ ಮನೆಗೆ ದುಬಾರಿ ಕಾರು ಬಂದಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ದಿವ್ಯಾ ಉರುಡುಗ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದಿವ್ಯಾಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅವರ ಹೊಸ ಕಾರು ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

ದಿವ್ಯಾ ಉರುಡುಗ ಅವರು ಟಾಟಾ ಹ್ಯಾರಿಯರ್ ಕಾರನ್ನು ಮನೆಗೆ ತಂದಿದ್ದಾರೆ. ಕಾರು ಖರೀದಿಸೋ ಸಂದರ್ಭದಲ್ಲಿ ದಿವ್ಯಾ ಅವರ ಬಾಯ್ಫ್ರೆಂಡ್ ಅರವಿಂದ್ ಕೆಪಿ ಕೂಡ ಜೊತೆಯಲ್ಲೇ ಇದ್ದರು ಅನ್ನೋದು ವಿಶೇಷ.

ಟಾಟಾ ಹ್ಯಾರಿಯರ್ ಕಾರಿನ ಬೇಸಿಕ್ ಬೆಲೆ 19 ಲಕ್ಷ ರೂಪಾಯಿ ಇಂದ ಆರಂಭ ಆಗಿ, 32 ಲಕ್ಷ ರೂಪಾಯಿವರೆಗೂ ಇದೆ. ಇದು ಎಸ್ಯುವಿ ವಿಭಾಗದ ಅಡಿಯಲ್ಲಿ ಬರುತ್ತದೆ. ನಾಲ್ಕು ಸಿಲಿಂಡರ್ ಇಂಜಿನ್ ಇದು ಹೊಂದಿದ್ದು, ಐದು ಜನ ಕೂರಬಹುದಾಗಿದೆ.

ದಿವ್ಯಾ ಸುರೇಶ್ ಅವರು ಸದ್ಯ ‘ನಿನಗಾಗಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಣುತ್ತಿದ್ದು, ಉತ್ತಮ ಟಿಆರ್ಪಿ ಪಡೆಯುತ್ತಿದೆ.
Published On - 11:37 am, Mon, 23 December 24