ರೆಸ್ಟೋರೆಂಟ್‌ಗಳಲ್ಲಿ ಬಾಣಸಿಗರು ಉದ್ದನೆಯ ಬಿಳಿ ಟೋಪಿ ಧರಿಸೋದ್ಯಾಕೆ ಗೊತ್ತಾ?

Updated on: Jun 01, 2025 | 3:53 PM

ಸ್ಟಾರ್‌ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಅಡುಗೆ ಮಾಡುವ ಚೆಫ್‌ಗಳು ಬಿಳಿ ಬಣ್ಣದ ಕೋಟ್ ಜೊತೆಗೆ ಯಾವಾಗಲೂ ತಲೆಯ ಮೇಲೆ ಉದ್ದನೆಯ ಬಿಳಿ ಟೋಪಿ ಧರಿಸುವುದನ್ನು ನೀವು ಗಮನಿಸಿರಬಹುದಲ್ವಾ. ಆದರೆ ಬಾಣಸಿಗರು ಹೀಗೆ ಯಾವಾಗಲೂ ತಲೆಯ ಮೇಲೆ ಬಿಳಿ ಬಣ್ಣದ ಉದ್ದನೆಯ ಟೋಪಿ ಏಕೆ ಧರಿಸುತ್ತಾರೆ, ಬಾಣಸಿಗರು ಉದ್ದನೆಯ ಟೋಪಿಯನ್ನು ಧರಿಸುವುದರ ಹಿಂದಿನ ಕಾರಣವೇನು ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿದ್ಯಾ? ಅಷ್ಟಕ್ಕೂ ದೊಡ್ಡ ದೊಡ್ಡ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಚೆಫ್‌ಗಳು ಎತ್ತರದ ಬಿಳಿ ಟೋಪಿ ಏಕೆ ಧರಿಸುತ್ತಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1 / 7
ಸ್ಟಾರ್‌ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಗೆಬಗೆಯ ಅಡುಗೆ ತಯಾರಿಸುವವರನ್ನು  ಬಾಣಸಿಗ ಎಂದು ಕರೆಯಲಾಗುತ್ತದೆ. ಬಾಣಸಿಗ ವೃತ್ತಿಯೂ ಕೂಡಾ ಒಂದು ಪ್ರಮುಖ ವೃತ್ತಿಯಾಗಿದ್ದು, ಈ ವೃತ್ತಿಗೆ ನಳಪಾಕದಲ್ಲಿ ಪ್ರಾವಿಣ್ಯತೆ ಹೊಂದಿರುವುದು ಬಹಳ ಮುಖ್ಯ. ಅಷ್ಟೇ ಅಲ್ಲದೆ ಕೆಲಸ ಮಾಡುವ ಸಂದರ್ಭದಲ್ಲಿ ಚೆಫ್‌ಗಳು ಒಂದಷ್ಟು ನಿಯಮಗಳನ್ನು ಕೂಡಾ ಪಾಲಿಸುತ್ತಾರೆ. ಅವುಗಳಲ್ಲಿ ಉದ್ದನೆಯ ಬಿಳಿ ಟೋಪಿ ಧರಿಸುವುದು ಕೂಡಾ ಒಂದು. ನೀವು ಕೂಡಾ ಚೆಫ್‌ಗಳು ಬಿಳಿ ಟೋಪಿಗಳನ್ನು ಧರಿಸಿರುವುದನ್ನು ನೋಡಿರುತ್ತೀರಿ ಅಲ್ವಾ. ಅದನ್ನೇಕೆ ಧರಿಸುತ್ತಾರೆ ಗೊತ್ತಾ?

2 / 7
ಚೆಫ್‌ಗಳು ತಲೆಯ ಮೇಲೆ ಬಿಳಿ ಟೋಪಿ ಏಕೆ ಧರಿಸುತ್ತಾರೆ: ಚೆಫ್‌ಗಳು ಧರಿಸುವ ಬಿಳಿ ಟೋಪಿ ಅಡುಗೆ ಕಲೆ ಮತ್ತು ಕುಶಲತೆಯ ಸಂಕೇತವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಇದನ್ನು ಧರಿಸುವುದು ಕೇವಲ ಸಂಪ್ರದಾಯ ಮತ್ತು ಫ್ಯಾಶನ್‌ ಮಾತ್ರವಲ್ಲ. ಇದರ ಹಿಂದೆ ಹಲವು ವಿಶೇಷ ಕಾರಣಗಳಿವೆ, ಆದರೆ ಹೆಚ್ಚಿನ ಜನರಿಗೆ ಅದರ ಬಗ್ಗೆ ತಿಳಿದಿಲ್ಲ.

3 / 7
ಈ ಬಿಳಿ ಟೋಪಿಯನ್ನು ಏನೆಂದು ಕರೆಯುತ್ತಾರೆ: ಬಾಣಸಿಗರು ಧರಿಸುವ ಬಿಳಿ ಟೋಪಿಯನ್ನು  ಟೋಕ್ ಅಥವಾ ಟೋಕ್‌ ಬ್ಲಾಂಚೆ ಎಂದು  ಕರೆಯಲಾಗುತ್ತದೆ. 100 ನೆರಿಗೆಗಳನ್ನು ಹೊಂದಿರುವ ಟೋಪಿ ಪಾಕಶಾಲೆಯ ಪರಿಣತಿ ಮತ್ತು ಪಾಂಡಿತ್ಯವನ್ನು ಸಂಕೇತಿಸುತ್ತವೆ.  ಒಟ್ಟಾರೆಯಾಗಿ ನೆರಿಗೆಗಳನ್ನು ಹೊಂದಿರುವ ಸಿಲಿಂಡರಾಕಾರದ ಈ ಟೋಪಿ ಬಾಣಸಿಗರ ಹೆಮ್ಮೆಯ ಸಂಕೇತ ಅಂತಾನೇ ಹೇಳಬಹುದು.

4 / 7
ಬಾಣಸಿಗರ ಬಿಳಿ ಟೋಪಿಯ ಇತಿಹಾಸ: ಬಾಣಸಿಗರ ಟೋಪಿಗಳ ಮೂಲದ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಮಾಹಿತಿಯ ಪ್ರಕಾರ ಟೋಕ್ ಬ್ಲಾಂಚೆ ಧರಿಸುವ ಪದ್ಧತಿಯು 18 ನೇ ಶತಮಾನದಲ್ಲಿ ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಪ್ರಸಿದ್ಧ ಬಾಣಸಿಗ ಮೇರಿ-ಆಂಟೊಯಿನ್ ಕ್ಯಾರೆಮ್ ಬಾಣಸಿಗರ ಟೋಕ್ ಮತ್ತು ಬಿಳಿ ಬಣ್ಣದ ಬಾಣಸಿಗರ ಕೋಟ್  ಪರಿಚಯಿಸಿದರು.  ಮೊದಲು, ಫ್ರೆಂಚ್ ಬಾಣಸಿಗರು ಕ್ಯಾಸ್ಕ್ ಎ ಮೆಚೆ ಎಂದು ಕರೆಯಲ್ಪಡುವ ಸ್ಟಾಕಿಂಗ್ ಕ್ಯಾಪ್  ಧರಿಸುತ್ತಿದ್ದರು. ನಂತರ, ಫ್ರೆಂಚ್ ಬಾಣಸಿಗ ಬೌಚರ್, ಅಡುಗೆಮನೆಯ ನೈರ್ಮಲ್ಯಕ್ಕೆ ಸಂಬಂಧಿಸಿದ ಕಾರಣಗಳಿಗಾಗಿ ಬಿಳಿ ಬಣ್ಣವನ್ನು ಧರಿಸಬೇಕೆಂದು ಹೇಳಿದರು. ಬಳಿಕ ಪರಿಣತಿ ಮತ್ತು ಅಧಿಕಾರವನ್ನು ಸಂಕೇತಿಸಲು ಬಾಣಸಿಗರು  18 ಇಂಚಿನ ಬಿಳಿ ಬಣ್ಣದ ಟೋಪಿ ಧರಿಸಲು ಆರಂಭಿಸಿದರು.

5 / 7
ಇದಕ್ಕಾಗಿಯೇ  ಬಿಳಿ ಟೋಪಿಗಳನ್ನು ಧರಿಸುತ್ತಾರೆ: ಬಾಣಸಿಗರ ಟೋಪಿ ಕೇವಲ ಸಂಪ್ರದಾಯ ಅಥವಾ ಫ್ಯಾಷನ್‌ಗೆ ಸೀಮಿತವಾಗಿಲ್ಲ. ಇದು ಅಡುಗೆ ಪ್ರಕ್ರಿಯೆಯಲ್ಲಿ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೌದು ಅಡುಗೆ ಮನೆಯ ನೈರ್ಮಲ್ಯದ ಕಾರಣಕ್ಕಾಗಿ ಬಾಣಸಿಗರು ಈ ಉದ್ದನೆಯ ಬಿಳಿ ಟೋಪಿಗಳನ್ನು ಧರಿಸುತ್ತಾರೆ. ಇದರಿಂದ ಕೂದಲು ಆಹಾರಕ್ಕೆ ಬೀಳುವುದಿಲ್ಲ ಮತ್ತು ನೈರ್ಮಲ್ಯಕ್ಕೆ ವಿಶೇಷ ಗಮನ ನೀಡಬಹುದು.  ಅಲ್ಲದೆ ಈ ಬಿಳಿ ಬಣ್ಣ ಸ್ವಚ್ಛತೆಯ ಸಂಕೇತವಾಗಿದೆ.

6 / 7
ಇದೂ ಒಂದು ಕಾರಣ: ಈ ಟೋಪಿಗಳು ಬೆವರು ಹೀರಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದೆ. ಅಡುಗೆ ಮಾಡುವಾಗ ತುಂಬಾ ಶಾಖವಿರುತ್ತದೆ ಮತ್ತು ಇದು ಬೆವರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಬೆವರನ್ನು ಹೀರಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುವ ಈ ಕ್ಯಾಪ್‌ಗಳನ್ನು ನೈರ್ಮಲ್ಯದ ದೃಷ್ಟಿಯಿಂದ ಬಾಣಸಿಗರು ತೊಡುತ್ತಾರೆ. ಅಲ್ಲದೆ ಇದು ಬಾಣಸಿಗರು ಕೆಲಸದಲ್ಲಿ ವೃತ್ತಿಪರ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

7 / 7
ಟೋಪಿಯಲ್ಲಿ ಬದಲಾವಣೆ: ಈ ಬಿಳಿ ಟೋಪಿಗಳು ಗೌರವದ ಸಂಕೇತವಾಗಿ ಉಳಿದಿವೆ, ಆದರೆ ಇಂದು ಚೆಫ್‌ಗಳು  ತಮ್ಮ ಕೆಲಸದ ಪರಿಸ್ಥಿತಿಗಳು ಮತ್ತು ವೈಯಕ್ತಿಕ ಇಚ್ಛೆಗೆ ತಕ್ಕಂತೆ ವಿವಿಧ ರೀತಿಯ ಹೆಡ್‌ವೇರ್‌ಗಳನ್ನು ಧರಿಸುತ್ತಾರೆ. ಇಂದು ಚೆಫ್ ಬೀನ್, ಬೆರೆಟ್‌, ಪಿಲ್‌ಬಾಕ್ಸ್ ಟೋಪಿಗಳು, ಬೇಸ್‌ಬಾಲ್ ಕ್ಯಾಪ್‌ಗಳನ್ನು ಚೆಫ್‌ಗಳು ಧರಿಸುತ್ತಿದ್ದಾರೆ.