
ಮೈಸೂರಿನ ಎಂ.ಜಿ.ರಸ್ತೆ ಮಾರುಕಟ್ಟೆಯಲ್ಲಿ ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಲಾಗಿದೆ. ಡಾಕ್ಟರ್ ಶ್ವೇತಾ ಅನ್ನೋರು ತರಕಾರಿ ಮಾರುವ ಮಹಿಳೆಯರಿಗೆ ಬಾಗಿನ ನೀಡಿ ವುಮೆನ್ಸ್ ಡೇ ಮಹತ್ವ ಹೆಚ್ಚಿಸಿದ್ರು.

ನಿತ್ಯ ತರಕಾರಿ ಕೊಳ್ಳಲು ಮಾರುಕಟ್ಟೆಗೆ ಬರ್ತಿದ್ದ ಶ್ವೇತಾ, ವ್ಯಾಪಾರಿಗಳ ಕಷ್ಟ ಅರಿತಿದ್ರು. ಬೆಳ್ ಬೆಳಗ್ಗೆ ಎದ್ದು ಮಾರುಕಟ್ಟೆಗೆ ಬಂದು ವ್ಯಾಪಾರದಲ್ಲಿ ತಲ್ಲೀನರಾಗ್ತಿದ್ದ ಸ್ತ್ರೀಯರ ಸಮಸ್ಯೆ ತಿಳಿದಿದ್ರು. ಹೀಗಾಗಿ ಮಹಿಳಾ ವ್ಯಾಪಾರಿಗಳಿಗೆ ಅರಿಶಿನ, ಕುಂಕುಮ, ಬಳೆ, ರವಿಕೆ ನೀಡಿ ಅವ್ರನ್ನ ಸನ್ಮಾನಿಸಿದ್ರು.

ಸಿಹಿ ಹಂಚಿ, ಮಹಿಳಾ ವ್ಯಾಪಾರಿಗಳಿಗೆ ಅರಿಶಿನ, ಕುಂಕುಮ, ಬಳೆ, ರವಿಕೆ ನೀಡಿ ಮಹಿಳಾ ದಿನಾಚರಣೆಯನ್ನು ಆಚರಿಸಿದ ಡಾಕ್ಟರ್ ಶ್ವೇತಾ

ತರಕಾರಿ ಮಾರುವ ಮಹಿಳೆಯರಿಗೆ ಬಾಗಿನ ನೀಡಿ ಮಹಿಳಾ ದಿನಾಚರಣೆ ಆಚರಣೆ

ವ್ಯಾಪಾರಿಗಳೊಂದಿಗೆ ಬೆರೆತು ಕಷ್ಟ ಆಲಿಸಿ ವುಮೆನ್ಸ್ ಡೇ ಮಹತ್ವ ಹೆಚ್ಚಿಸಿದ್ರು.