Updated on: Mar 08, 2022 | 6:55 PM
ಐಪಿಎಲ್ ಆರಂಭಕ್ಕೆ ಇನ್ನು ವಾರಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ತಯಾರಿಯನ್ನು ಆರಂಭಿಸಿವೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೂರತ್ನಲ್ಲಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ತಂಡಕ್ಕೆ ನೆಟ್ ಬೌಲರ್ ಅನ್ನು ಕೂಡ ಸೇರಿಸಿಕೊಂಡಿದ್ದಾರೆ.
ಹೌದು, ಐರ್ಲೆಂಡ್ ತಂಡದ ಯುವ ಎಡಗೈ ವೇಗಿ ಜೋಶ್ ಲಿಟಲ್ ಸಿಎಸ್‌ಕೆ ತಂಡಕ್ಕೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಐರ್ಲೆಂಡ್ ಆಟಗಾರ ಕೂಡ ಐಪಿಎಲ್‌ನ ಭಾಗವಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕ್ರಿಕೆಟ್ ಐರ್ಲೆಂಡ್, ಮುಂಬರುವ ಐಪಿಎಲ್‌ನ ಆರಂಭಿಕ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಅವಕಾಶ ಪಡೆದ ಜೋಶ್ ಲಿಟಲ್ಗೆ ಅಭಿನಂದನೆಗಳು. ಸಿಎಸ್‌ಕೆ ತಂಡದ ನೆಟ್ ಬೌಲರ್ ಆಗಿ ಅದ್ಭುತ ಅನುಭವ ಪಡೆಯಲಿದ್ದೀರಿ ಎಂದು ಕ್ರಿಕೆಟ್ ಟ್ವೀಟ್ ಮಾಡಿದೆ.
ಅಂದಹಾಗೆ 22 ವರ್ಷದ ಜೋಶ್ ಲಿಟಲ್ ಇದುವರೆಗೆ ಐರ್ಲೆಂಡ್ ಪರ 19 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 61 ವಿಕೆಟ್ ಪಡೆದು ಮಿಂಚಿದ್ದಾರೆ.
ಇದೀಗ ಯುವ ಎಡಗೈ ವೇಗಿ ನೆಟ್ ಬೌಲರ್ ಆಗಿ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದು, ಈ ಮೂಲಕ ಮುಂಬರುವ ದಿನಗಳಲ್ಲಿ ಐಪಿಎಲ್ ಆಡುವ ವಿಶ್ವಾಸ ಹೊಂದಿದ್ದಾರೆ ಜೋಶ್ ಲಿಟಲ್.