
ಸಾಕಷ್ಟು ಜನರಿಗೆ ನಾಯಿ ಸಾಕಲು ಇಷ್ಟವಿದ್ದರೂ ಕೂಡ, ಅಪಾರ್ಟ್‌ಮೆಂಟ್‌ಗಳಲ್ಲಿ ಜೀವನ ನಡೆಸುವುದರಿಂದ ಹೇಗೆ ಸಾಕುವುದು ಎಂಬ ಚಿಂತೆ ಇರುತ್ತದೆ. ಜೊತೆಗೆ ಮನೆಯಲ್ಲಿ ಮಕ್ಕಳಿರುವುದರಿಂದ ನಾಯಿ ಸಾಕುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಆದ್ದರಿಂದ ನಿಮ್ಮ ಅಪಾರ್ಟ್‌ಮೆಂಟ್ ಸಾಕಲು ಯೋಗ್ಯವಾಗುವಂತಹ ನಾಯಿಯ ತಳಿಗಳು ಇಲ್ಲಿವೆ.

ಚಿಹೋವಾ: ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆ ಒಂದು ಉತ್ತಮ ಆಯ್ಕೆಯೇ ಚಿಹೋವಾ ತಳಿಯ ನಾಯಿಗಳು. 250 ಚದರ ಅಡಿ ವಿಸ್ತೀರ್ಣದ ಕೊಠಡಿಗಳಲ್ಲಿಯೂ ಸಹ ನಿಮಗೆ ಈ ತಳಿಯನ್ನು ಸಾಕಬಹುದು. ಇದು ಮನುಷ್ಯರ ಸಹವಾಸವನ್ನು ಆನಂದಿಸುತ್ತದೆ.

ಪಗ್: ಇದು ನಿಮ್ಮ ಮಕ್ಕಳೊಂದಿಗೆ ಉತ್ತಮವಾಗಿ ನಡೆದುಕೊಳ್ಳುವ ತಳಿಯಾಗಿದೆ. ಜೊತೆಗೆ ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕಲು ಯೋಗ್ಯವಾದಂತಹ ಸಾಕುಪ್ರಾಣಿಯಾಗಿದೆ.

ಗೋಲ್ಡನ್ ರಿಟ್ರೈವರ್: ಈ ತಳಿಯ ನಾಯಿಯನ್ನು ಮನೆಯ ಕಾವಲಿಗಾಗಿ ಸಾಕದೇ, ಮನೆಯ ಒಂದು ಸದಸ್ಯನಂತೆಯೇ ಸಾಕಬಹುದಾಗಿದೆ. ಅಷ್ಟು ಸೌಮ್ಯ ಸ್ವಭಾವ ಮತ್ತು ಅಷ್ಟೇ ಸುರಕ್ಷಿತವೂ ಹೌದು.

ಬೀಗಲ್: ಈ ಜಾತಿಯ ನಾಯಿಗಳನ್ನು 500 ಚದರ ಅಡಿ ವಿಸ್ತೀರ್ಣದ ಮನೆಗಳಲ್ಲಿ ಸುಲಭವಾಗಿ ಇರಿಸಬಹುದು. ಈ ನಾಯಿಗಳು ಸಾಮಾನ್ಯವಾಗಿ ಮನೆಯೊಳಗೆ ಇರುವುದನ್ನು ಮತ್ತು ಮನುಷ್ಯರ ಸಹವಾಸವನ್ನು ಆನಂದಿಸುತ್ತವೆ.

ಡ್ಯಾಷ್‌ಹಂಡ್: ಸಣ್ಣ ಗಾತ್ರದ, ಬೆಳವಣೆಗೆಯ ನಾಯಿಗಳು ಚಿಕ್ಕ ಅಪಾರ್ಟ್ಮೆಂಟ್ ಸ್ಥಳಗಳಿಗೆ ಸೂಕ್ತವಾಗಿವೆ. ಈ ತಳಿಯನ್ನು 250 ಚದರ ಅಡಿಗಳಿಂದ 700 ಚದರ ಅಡಿಗಳಷ್ಟು ಜಾಗದಲ್ಲಿ ಆರಾಮವಾಗಿ ಸಾಕಬಹುದು.

ಬುಲ್ ಡಾಗ್: ಅಪಾರ್ಟ್‌ಮೆಂಟ್‌ಗಳಲ್ಲಿ ಬುಲ್ ಡಾಗ್ಗಳನ್ನು ಸಾಕಲು ಶ್ವಾನ ಪ್ರೇಮಿಗಳು ಹೆಚ್ಚಾಗಿ ಆದ್ಯತೆ ನೀಡುತ್ತಾರೆ. ಈ ಶ್ವಾನ ಒಳಾಂಗಣದಲ್ಲಿ ಉಳಿಯಲು ಇಷ್ಟಪಡುತ್ತವೆ. 250 ರಿಂದ 700 ಚದರ ಅಡಿ ವಿಸ್ತೀರ್ಣದ ಒಂದು ಬೆಡ್‌ರೂಮ್ ಅಪಾರ್ಟ್‌ಮೆಂಟ್‌ನಲ್ಲಿ ಸಹ ಈ ತಳಿಯನ್ನು ಸಾಕಬಹುದು.
Published On - 4:13 pm, Tue, 17 January 23