ದೇಶ, ವಿದೇಶಗಳ ವಿವಿಧ ತಳಿಯ 70ಕ್ಕೂ ಹೆಚ್ಚು ಶ್ವಾನಗಳು ಒಟ್ಟಿಗೆ ನೆರೆದಿದ್ದು, ಶ್ವಾನಗಳು ಕೂಡ ತಾವ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಹೆಜ್ಜೆ ಹಾಕಿದವು. ಇದನ್ನು ಕಂಡ ಶ್ವಾನ ಪ್ರಿಯರು ಸಖತ್ ಎಂಜಾಯ್ ಮಾಡಿದರು.
ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಕೆಯಿಂದ ಇದೆ ಮೊದಲ ಸಲ ಬೀದರ್ ಜಿಲ್ಲೆಯಲ್ಲಿ ಶ್ವಾನ ಪ್ರದರ್ಶನ ಆಯೋಜಿಸಲಾಗಿತ್ತು. ಶ್ವಾನ ಪ್ರೀಯರಿಗೆ ಪ್ರೋತ್ಸಾಹ, ಅದಕ್ಕೆ ಬರುವ ರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶ್ವಾನ ಪ್ರದರ್ಶನ ನಡೆಸಲಾಯ್ತು.
ವಿವಿಧ ಜಾತಿಯ ದೇಶಿ-ವಿದೇಶಿ ತಳಿಯ ಶ್ವಾನಗಳು ಭಾಗಿಯಾಗಿದ್ದವು. ಸ್ವಿಡ್ಜ್, ಫಗ್ಗ, ಪಮೋರಿ, ರ್ಯಾಟ್ ವೀಲರ್, ಪಗ್, ಡ್ಯಾಷ್ ಹೌಂಡ್ ತಳಿಯ ಶ್ವಾನಗಳು ಇದ್ದವು.
ಬೀದರ್ ಶ್ವಾನ ಪ್ರೀಯರನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಬೀದರ್ನ ನೆಹರೂ ಕ್ರೀಡಾಗಂಣದಲ್ಲಿ ಇಂದು ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧ ತಾಲೂಕುಗಳಿಂದ 70 ಕ್ಕೂ ಹೆಚ್ಚು 18 ಜಾತಿಯ ನಾಯಿಗಳು ಶ್ವಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದವು.
ಮಾಲೀಕನ ಆಜ್ಞೆಯನ್ನು ಚಾಚೂ ತಪ್ಪದೇ ಪಾಲಿಸುವ ಶ್ವಾನಗಳ ಪ್ರದರ್ಶನ, ಪ್ರಾಣಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಮಾಲೀಕ ಹೇಳುವ ಮಾತನ್ನು ಕೇಳುತ್ತಿದ್ದ ಶ್ವಾನಗಳನ್ನು ಕಂಡ ವೀಕ್ಷಕರು ನಾವೂ ನಾಯಿ ಸಾಕಬೇಕು ಅನ್ನುವ ಹಾಗಿತ್ತು ಶ್ವಾನ ಪ್ರದರ್ಶನ.
ಪ್ರದರ್ಶನದಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಹಾಕಿದ ಶ್ವಾನಗಳು ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ರಂಜಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡವು. ಮುಧೋಳ್ ಡಾಗ್, ಲ್ಯಾಬ್ರಡಾರ್, ರಿಟ್ರೈವರ್, ರಾರಯಟ್ ವೀಲರ್, ಪಗ್, ಡ್ಯಾಷ್ ಹೌಂಡ್, ಡಾಬರ್‌ಮನ್ ಹೀಗೆ ನಾನಾ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡು ಜನರನ್ನು ರಂಜಿಸಿದವು.
ವಿದೇಶಿ ತಳಿಯ ಕೆನೆಕ್ವಾರ್ಸ್, ರಾಟ್ ವ್ಹೀಲರ್, ನಿಯೋ ಪಾಲಿಟನ್ ಮಾಸ್ಟ್ರಿಫ್, ಅಮೆರಿಕನ್ ಬುಲ್, ಡೋಗೊ ಅರ್ಜೆಂಟೀನಾ, ಬೊರ್ ವೆಲ್, ಟರ್ಕಿಸ್ ಕಂಗಾಲ್, ಫಿಲಾ ಬೇರ್ಜಿಲೋ, ಜರ್ಮನ್ ಶೆಫರ್ಡ್, ಗೋಲ್ಡನ್ ರೀಟ್ಟೀಮ್ ಹೀಗೆ 20 ಜಾತಿಯ 120 ಕ್ಕೂ ಹೆಚ್ಚು ನಾಯಿಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು.
ಲಕ್ಷಾಂತರ ರೂಪಾಯಿ ಬೆಲೆ ಭಾಳುವ ಈ ದುಬಾರಿ ಮೌಲ್ಯದ ಶ್ವಾನವನ್ನು ನೋಡಲು ಚಿಕ್ಕ-ಮಕ್ಕಳಿಂದ ಹಿಡಿದು ವೃದ್ಧರೂ ಮುಗಿಬಿದ್ದಿದ್ದರು. ಇತ್ತ, ಶ್ವಾನ ಪ್ರದರ್ಶನಕ್ಕೆ ಆಗಮಿಸಿದ್ದ ಬೀದರ್ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ , ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭೀಮ ಶ್ವಾನವನ್ನು ಕುತೂಹಲದಿಂದ ನೋಡಿ, ಶ್ವಾನದ ಜೊತೆ ಪೋಟೋ ತೆಗೆಸಿಕೊಂಡು ಸಂತಸಪಟ್ಟರು.
ಒಟ್ಟಿನಲ್ಲಿ ಇಂದು ಬೀದರ್ ನಲ್ಲಿ ನಡೆದ ದೇಶಿ ವಿದೇಶಿ ನಾಯಿಗಳ ಪ್ರದರ್ಶನ ಪ್ರಾಣಿ ಪ್ರೀಯರನ್ನ ಆಕರ್ಷಿಸಿದ್ದು ಸುಳ್ಳಲ್ಲ. ಇನ್ನು ಭಾರತೀಯ ಶ್ವಾನ ತಳಿಗಳನ್ನ ಅಭಿವೃದ್ದಿಗೊಳಿಸಲು ಜಿಲ್ಲಾಢಳಿತ ಶ್ರಮವಹಿಸುತ್ತಿರೊದು ಶ್ಲಾಘನೀಯ.