ಶಾಸ್ತ್ರೋಕ್ತವಾಗಿ ಶುಭ ಲಗ್ನದಲ್ಲಿ ಕತ್ತೆಗಳಿಗೆ ಮದುವೆ: ಇಲ್ಲಿವೆ ಅದ್ಧೂರಿ ಮದ್ವೆಯ ಅಪರೂಪದ ಚಿತ್ರಗಳು

|

Updated on: Jun 26, 2023 | 9:23 AM

ಮಳೆಗಾಗಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಇದರ ಜೊತೆಗೆ ಕಪ್ಪೆ-ಕತ್ತೆ ಮದುವೆ ಮಾಡಿದರೆ ಮಳೆ ಬರುತ್ತೆ ಎನ್ನುವುದು ನಂಬಿಕೆ ಇದೆ. ಇದು ಪೂರ್ವಜ್ಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಇದೀಗ ಮಳೆಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಕತ್ತೆಗಳ ಮದುವೆ ಮಾಡಲಾಗಿದೆ. ಸಂಪ್ರದಾಯ ಶಾಸ್ತ್ರ ಬದ್ಧವಾಗಿ ಕತ್ತೆ ಮದ್ವೆಯ ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ.

1 / 9
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಲಾಯ್ತು.

2 / 9
ಮಂಟಪ ಹಾಕಿ ವೇದಿಕೆ ಮೇಲೆ ಅದ್ದೂರಿಯಾಗಿ ಮದುವೆ ಮಾಡಿದ ಗ್ರಾಮಸ್ಥರು.

3 / 9
ಮದುವೆ ಸಮಾರಂಭದಲ್ಲಿ ನಡೆಸುವ ಹಂದರ ತಪ್ಪಲ ತರುವುದು, ಎದುರು ಭೇಟಿ, ಮದುಮಗಳನ್ನ ಕರೆತರುವುದು, ಸುರಿಗೆ ಸುತ್ತುವುದು ಸೇರಿದಂತೆ ಶಾಸ್ತ್ರೋಕ್ತವಾಗಿ, ಶುಭ ಲಗ್ನದಲ್ಲಿ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದರು.

4 / 9
ಬ್ಯಾಂಡ್ ಬಾಜಾ ಸಮೇತ ಊರಲ್ಲಿ ಮೆರವಣಿಗೆ ಮಾಡಿ ಪುರೋಹಿತರಿಂದ ಮಂತ್ರ ಹೇಳಿಸಿ ಲಗ್ನ ಮಾಡಲಾಯ್ತು.

5 / 9
ಮದುವೆಗೂ ಮುನ್ನ ಕತ್ತೆಗಳಿಗೆ ಮೇಘರಾಜ ಜತೆಗೆ ವಸುಂಧರೆ ಅಂತಾ ಹೆಸರಿಟ್ಟು ಕರೆಯೊಲೆ.

6 / 9
ಕತ್ತೆಗಳ ಮದುವೆ ಸಮಾರಂಭದಲ್ಲಿ ಇಡೀ ಗ್ರಾಮದ ಜನರು ಭಾಗಿಯಾಗಿದ್ದರು.

7 / 9
ಕತ್ತೆಗಳಿಗೆ ಸ್ಟೇಜ್ ರೆಡಿ ಮಾಡಿರುವುದು

ಕತ್ತೆಗಳಿಗೆ ಸ್ಟೇಜ್ ರೆಡಿ ಮಾಡಿರುವುದು

8 / 9
 ಮಾಂಗಲ್ಯಧಾರಣೆಯಾದ ಬಳಿಕ ಕತ್ತೆಗಳನ್ನು ಸ್ಟೇಜ್​ ಮೇಲೆ ನಿಲ್ಲಿಸಲಾಯ್ತು

9 / 9
ಒಟ್ಟಾರೆ  ಸಂಪ್ರದಾಯ ಬದ್ಧವಾಗಿ  ಶಾಸ್ತ್ರೋಕ್ತವಾಗಿ ಹೇಗೆ ಜನರ ಮದುವೆ ಮಾಡುತ್ತಾರೋ ಅದರೇ ತರಹನಾಗಿ ಕತ್ತೆಗಳ ಮದ್ವೆ ಮಾಡಿ ಗಮನಸೆಳೆದಿದ್ದಾರೆ.