
ಬಟ್ಟೆ: ಬಟ್ಟೆಗಳನ್ನು ಎಂದಿಗೂ ವಿನಿಮಯ ಮಾಡಿಕೊಳ್ಳಬೇಡಿ. ಬಟ್ಟೆಗಳು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ. ನೀವು ಇತರರ ಬಟ್ಟೆಯನ್ನು ಧರಿಸುವುದರಿಂದ ಆ ವ್ಯಕ್ತಿಯ ನಕಾರಾತ್ಮಕ ಶಕ್ತಿ ನಿಮಗೆ ಹರಡುವ ಸಾಧ್ಯತೆ ಇರುತ್ತದೆ. ಇನ್ನೊಂದು ಕಾರಣ ಏನೆಂದ್ರೆ, ಅವರಿಗೆ ಅಲರ್ಜಿ ಇತ್ಯಾದಿ ಸಮಸ್ಯೆಗಳಿದ್ದರೆ, ಆ ಬಟ್ಟೆಯ ಮೂಲಕ ಆ ಸಮಸ್ಯೆ ನಿಮಗೂ ಹರಡುವ ಸಾಧ್ಯತೆ ಇರುತ್ತದೆ.

ವಾಚ್: ಒಬ್ಬ ವ್ಯಕ್ತಿಯ ಅದೃಷ್ಟ ಅವನ ಕೈಗಡಿಯಾರದ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಒಬ್ಬ ವ್ಯಕ್ತಿಯು ಧರಿಸುವ ಕೈ ಗಡಿಯಾರವು ಸಮಯವನ್ನು ಮಾತ್ರವಲ್ಲದೆ ಅವನ ಒಳ್ಳೆಯ ಮತ್ತು ಕೆಟ್ಟ ಸಮಯಗಳನ್ನು ಸಹ ಹೇಳುತ್ತದೆ. ಆದ್ದರಿಂದ, ಒಬ್ಬರು ಎಂದಿಗೂ ಇನ್ನೊಬ್ಬ ವ್ಯಕ್ತಿಯ ಗಡಿಯಾರವನ್ನು ಕೇಳಿ ಧರಿಸಬಾರದು. ಇದರಿಂದ ಅವರಲ್ಲಿರುವ ನಕಾರಾತ್ಮಕ ಶಕ್ತಿ ನಿಮಗೂ ಹರಡುವ ಸಾಧ್ಯತೆ ಇರುತ್ತದೆ.

ಪಾದರಕ್ಷೆಗಳು: ಕೆಲವರು ಇತರರ ಶೂ ಮತ್ತು ಚಪ್ಪಲಿಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದ್ರೆ ಹೀಗೆ ಇನ್ನೊಬ್ಬರ ಶೂ, ಚಪ್ಪಲಿಗಳನ್ನು ಧರಿಸಲೂ ಬಾರದು. ಇತರರಿಂದ ಉಚಿತವಾಗಿ ಪಡೆಯಲೂ ಬಾರದು. ಏಕೆಂದರೆ ಇದರಿಂದ ಕೆಲಸದಲ್ಲಿ ಅಡೆತಡೆ ಸೇರಿದಂತೆ ಒಂದಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.

ಶಾಸ್ತ್ರಗಳ ಪ್ರಕಾರ ಖರ್ಚೀಫ್ ಅಥವಾ ಕರವಸ್ತ್ರವನ್ನು ಯಾರಿಂದಲೂ ಉಚಿತವಾಗಿ ಪಡೆಯಬಾರದು. ಅಥವಾ ಇದನ್ನು ಉಡುಗೊರೆಯಾಗಿಗೂ ನೀಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಏಕೆಂದರೆ ಇದರಿಂದ ಜಗಳ, ಉದ್ವಿಗ್ನತೆ ಸೇರಿದಂತೆ ಆರ್ಥಿಕ ನಷ್ಟದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಉಪ್ಪು: ಉಪ್ಪನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ಇತರರಿಂದ ಉಚಿತವಾಗಿ ಪಡೆದರೆ ಅದು ನಿಮ್ಮ ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಹರಡುವ ಸಾಧ್ಯತೆ ಇರುತ್ತದೆ. ಹೀಗೆ ಉಪ್ಪನ್ನು ಉಚಿತವಾಗಿ ಪಡೆದರೆ ಸಾಲ ಸೇರಿದಂತೆ ಆರ್ಥಿಕ ಸಮಸ್ಯೆ ಉಂಟಾಗಲು ಕಾರಣವಾಗಬಹುದು.

ಪೆನ್ನು: ಪೆನ್ನು ಜ್ಞಾನ ಮತ್ತು ಕಲಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬೇರೆಯವರು ಬಳಸಿದ ಪೆನ್ನು ಬಳಸುವುದರಿಂದ ಅದು ಕಲಿಕೆಗೆ ಅಡ್ಡಿಯಾಗಬಹುದು. ಅಲ್ಲದೆ ಇದರಿಂದ ಹೂಡಿಕೆಗೆ ಸಂಬಂಧಿಸಿದ ವಿಷಯದಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ. ಆದ್ದರಿಂದ ಇತರರ ಪೆನ್ನನ್ನು ಯಾವುದೇ ಕಾರಣಕ್ಕೂ ಬಳಸಲು ಹೋಗಬೇಡಿ.

ಹಣ: ಯಾರನ್ನೂ ಸಾಲ ಕೇಳಬೇಡಿ. ತುರ್ತು ಪರಿಸ್ಥಿತಿಯಲ್ಲಿ ಹಣದ ಅಗತ್ಯವಿದ್ದರೆ, ಸಾಲ ಪಡೆದ ನಂತರ ಅದನ್ನು ಆದಷ್ಟು ಬೇಗ ಹಿಂದಿರುಗಿಸಿ, ಇಲ್ಲದಿದ್ದರೆ ಅದು ನಿಮಗೆ ದುರಾದೃಷ್ಟವನ್ನು ತರುತ್ತದೆ. ಶಾಸ್ತ್ರಗಳಲ್ಲಿ ಬೇರೆಯವರ ಹಣವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗಿದೆ.
Published On - 7:22 pm, Sun, 15 June 25