Updated on: Sep 12, 2021 | 8:40 AM
ಪ್ರತಿದಿನ ಕನಿಷ್ಠ 3ರಿಂದ 4 ಲೀಟರ್ ನೀರು ಕುಡಿಯಬೇಕು. ಹಾಗಂತ ವೈದ್ಯರೇ ಹೇಳುತ್ತಾರೆ. ಆದರೆ ಹಲವರು ನೀರು ಕುಡಿಯುವ ಬಗ್ಗೆ ತಾತ್ಸಾರ ಮನೋಭಾವ ಹೊಂದಿರುತ್ತಾರೆ. ನೀರು ಕುಡಿದಷ್ಟು ಆರೋಗ್ಯ ಸುಧಾರಿಸುತ್ತದೆ. ಇನ್ನು ತೂಕ ಇಳಿಸುವವರು ಹೆಚ್ಚು ನೀರು ಕುಡಿಯಬೇಕು. ಪದೇ ಪದೇ ನೀರು ಕುಡಿಯುವುದರಿಂದ ಹೊಟ್ಟೆ ತುಂಬುತ್ತದೆ. ಹೀಗಾಗಿ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿರಲ್ಲ.
ಗ್ರೀನ್ ಟೀ ಅಥವಾ ಹಸಿರು ಚಹಾ ಇತ್ತೀಚೆಗೆ ಜನಪ್ರಿಯಗೊಂಡಿದೆ. ಸಂಶೋಧನೆಯ ಪ್ರಕಾರ, ಗ್ರೀನ್ ಟೀ ಸೇವಿಸಿದರೆ ಕೆಫೀನ್ ಕೊಬ್ಬನ್ನು ಕಡಿಮೆಯಾಗುತ್ತದೆ. ಇದರಿಂದ ಅತಿಯಾದ ದಪ್ಪ ಇರುವವರು ಗ್ರೀನ್ ಟೀ ಕುಡಿಯಬೇಕು.
ಬ್ಲ್ಯಾಕ್ ಟೀ ಕೂಡಾ ಗ್ರೀನ್ ಟೀಯಂತೆ ಹೆಚ್ಚು ಪೋಷಕಾಂಶಗಳಿಂದ ಕೂಡಿದೆ. ಪೋಷಕಾಂಶಳಾದ ಆಂಟಿಆಕ್ಸಿಡೆಂಟ್ ಮತ್ತು ಪಾಲಿಫಿನಾಲ್ಗಳು ದೇಹದ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಪ್ರೋಟೀನ್ ಶೇಕ್ ತೂಕ ಇಳಿಸಲು ಹೆಚ್ಚು ಸಹಾಯ ಮಾಡುತ್ತದೆ. ಈ ಪ್ರೋಟೀನ್ ಶೇಕ್ ಆಹಾರವನ್ನು ಜೀರ್ಣವಾಗಲು ಹೆಚ್ಚಿನ ಶಕ್ತಿಯನ್ನು ತೆಗೆದುಕೊಳ್ಳುವುದರಿಂದ ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತವೆ.
ತರಕಾರಿ ನೋಡಿದರೆ ಮುಖ ಹಿಂಡುವವರೆ ಹೆಚ್ಚು. ಆದರೆ ಹೆಚ್ಚು ಪ್ರೋಟೀನ್ ಇರುವ ತರಕಾರಿಯನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ತೂಕ ಇಳಿಸುವವರು ತರಕಾರಿ ಜ್ಯೂಸ್ನ ಸೇವಿಸಬಹುದು. ಹಲವು ಬಗೆಯ ತರಕಾರಿಗಳಿಂದ ಮಾಡಿದ ಜ್ಯೂಸ್ ಕುಡಿಯುವದರಿಂದ ಕೊಲೆಸ್ಟ್ರಾಲ್ನ ಕಡಿಮೆಗೊಳಿಸುತ್ತದೆ. ಜೊತೆಗೆ ಹಣ್ಣಿನ ಜ್ಯೂಸ್ನ ಕುಡಿಯಬೇಕು. ಹಸಿವಾದಗೆಲ್ಲ ಹಣ್ಣಿನ ಜ್ಯೂಸ್ ಕುಡಿದರೆ ಒಳಿತು.