Hot Water: ಪ್ರತಿದಿನ ಬಿಸಿ ನೀರಿನ ಸೇವನೆಯಿಂದ ಯಾವೆಲ್ಲಾ ಲಾಭಗಳಿವೆ ಗೊತ್ತಾ? ಇಲ್ಲಿದೆ ಬಿಸಿ ನೀರಿನ ಮಹತ್ವ
TV9 Web | Updated By: Pavitra Bhat Jigalemane
Updated on:
Feb 03, 2022 | 7:30 AM
ಪ್ರತಿದಿನ ಬೆಳಗ್ಗೆ ಒಂದು ಲೋಟ ಬಿಸಿ ನೀರಿನ ಸೇವನೆ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಆರೋಗ್ಯ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾದ ಬಿಸಿ ನೀರಿನ ಸೇವನೆ ಎಷ್ಟು ಮಯಖ್ಯ ಎನ್ನುವ ಮಾಹಿತಿ ಇಲ್ಲಿದೆ.
1 / 7
ಬಿಸಿ ನೀರು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದರಲ್ಲೂ ಪ್ರತಿದಿನ ಬೆಳಗ್ಗೆ ಬಿಸಿ ನೀರಿನ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಸಾಂಕ್ರಾಮಿಕ ರೋಗದಂತಹ ಕಾಯಿಲೆಗಳಿಂದ ದೇಹವನ್ನು ರಕ್ಷಿಸಲೂ ಕೂಡ ಬಿಸಿ ನೀರು ನೆರವಾಗುತ್ತದೆ.
2 / 7
ಚಳಿಗಾಲದಲ್ಲಿ ಅಥವಾ ಶೀತವಾದಾಗ ಮೂಗು ಕಟ್ಟಿಕೊಳ್ಳುವ, ಗಂಟಲು ಕೆರೆತದ ಸಮಸ್ಯೆ ಉಂಟಾಗುತ್ತದೆ. ಅದಕ್ಕೆ ಪರಿಹಾರವಾಗಿ ಬಿಸಿ ನೀರಿನ ಸೇವನೆಯನ್ನು ಮಾಡಬಹುದು.
3 / 7
ದೇಹದಲ್ಲಿ ನೀರಿನ ಕೊರತೆಯಾದಾಗ ಮಲಬದ್ಧತೆ ಉಂಟಾಗುವುದು ಸಾಮಾನ್ಯ. ಇದು ಬಿಸಿ ನೀರಿನ ಸೇವನೆಯಿಂದ ಶಮನವಾಗುತ್ತದೆ.
4 / 7
ಕೂದಲಿನ ಆರೋಗ್ಯಕ್ಕೂ ಬಿಸಿ ನೀರಿನ ಸೇವನೆ ಒಳ್ಳೆಯದು. ಮೃದು ಕೂದಲನ್ನು ಪಡೆಯಲು ಪ್ರತಿದಿನ ತಪ್ಪದೆ ಬಿಸಿ ನೀರನ್ನು ಸೇವಿಸಿ.
5 / 7
ತ್ವಚೆಯ ಆರೋಗ್ಯಕ್ಕೂ ಬಿಸಿ ನೀರಿನ ಸೇವನೆ ಒಳ್ಳೆಯದು. ಕ್ರಮೇಣವಾಗಿ ಮುಖದ ಮೇಲಿನ ಕಪ್ಪು ಕಲೆ, ಸುಕ್ಕುಗಟ್ಟಿದ ಚರ್ಮವನ್ನು ಬಿಸಿ ನೀರಿನ ಸೇವೆನೆಯಿಂದ ಹೋಗಲಾಡಿಸಬಹುದು.
6 / 7
ಮುಟ್ಟಿನ ದಿನಗಳಲ್ಲಿ ಕಾಡುವ ಹೊಟ್ಟೆನೋವಿಗೆ ಬಿಸಿ ನೀರು ಉಪಯುಕ್ತವಾಗಿದೆ. ಬಿಸಿ ನೀರು ನೋವನ್ನು ಶಮನಗೊಳಿಸಿ ಆರಾಮದಾಯಕ ಅನುಭವವನ್ನು ನೀಡುತ್ತದೆ.
7 / 7
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆಸಿಡಿಟಿ, ಹೊಟ್ಟೆ ಉಬ್ಬರದಂತಹ ಅನಾರೋಗ್ಯ ಸಮಸ್ಯೆಗಳಿಗೆ ಬಿಸಿ ನೀರು ಉತ್ತಮ ಮನೆ ಮದ್ದಾಗಿದೆ.