Dutee Chand: ನಿಷೇಧಿತ ಡ್ರಗ್ ಸೇವನೆ: ಭಾರತದ ಸ್ಪ್ರಿಂಟ್ ಕ್ವೀನ್ ದ್ಯುತಿ ಚಂದ್​ಗೆ ನಾಲ್ಕು ವರ್ಷಗಳ ನಿಷೇಧ

Dutee Chand Four-year Ban: ದ್ಯುತಿ ಅವರ ಮೂತ್ರದ ಮಾದರಿಯ ವರದಿಯು ಪಾಸಿಟಿವ್ ಬಂದಿದ್ದು, ನಿಷೇಧಿತ ಪದಾರ್ಥಗಳನ್ನು ಸೇವಿಸಿರುವುದು ಸಾಭೀತಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈಗ ದ್ಯುತಿ ಚಂದ್‌ರನ್ನು ಅಮಾನತುಗೊಳಿಸಿರುವುದರಿಂದ ಅವರ ಕೆರಿಯರ್ ಮೇಲೆ ದೊಡ್ಡ ಹೊಡೆತಬಿದ್ದಂತಾಗಿದೆ.

Vinay Bhat
|

Updated on: Aug 18, 2023 | 12:01 PM

ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ಅವರು ಸ್ಪರ್ಧೆಯ ಹೊರಗೆ ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದಾರೆ. 2021 ರ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 4 ರ ಸಮಯದಲ್ಲಿ 11.17 ಸೆಕೆಂಡ್‌ಗಳಲ್ಲಿ 100 ಮೀ ಓಡಿ ದ್ಯುತಿ ನೂತನ ದಾಖಲೆ ನಿರ್ಮಿಸಿದ್ದರು.

1 / 7
ದ್ಯುತಿ ಚಂದ್ ನಿಷೇಧವು ಜನವರಿ 3, 2023 ರಿಂದ ಪ್ರಾರಂಭವಾಗುತ್ತದೆ. ಜೊತೆಗೆ ಡಿಸೆಂಬರ್ 5, 2022 ರಿಂದ ಇವರ ಎಲ್ಲಾ ಸ್ಪರ್ಧಾತ್ಮಕ ಫಲಿತಾಂಶಗಳನ್ನು ಅನರ್ಹಗೊಳಿಸಲಾಗುತ್ತದೆ ಮತ್ತು ಟೈಮ್ಸ್‌ನ ವರದಿಯ ಪ್ರಕಾರ ದ್ಯತಿ ಪಡೆದುಕೊಂಡಿರುವ ಎಲ್ಲ ಪದಕಗಳು, ಅಂಕಗಳು ಮತ್ತು ಬಹುಮಾನಗಳನ್ನು ಕಳೆದುಕೊಳ್ಳುತ್ತಾರೆ.

2 / 7
ದ್ಯುತಿ ಅವರ ಮೂತ್ರದ ಮಾದರಿಯ ವರದಿಯು ಪಾಸಿಟಿವ್ ಬಂದಿದ್ದು, ನಿಷೇಧಿತ ಪದಾರ್ಥಗಳನ್ನು ಸೇವಿಸಿರುವುದು ಸಾಭೀತಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈಗ ದ್ಯುತಿ ಚಂದ್‌ರನ್ನು ಅಮಾನತುಗೊಳಿಸಿರುವುದರಿಂದ ಅವರ ಕೆರಿಯರ್ ಮೇಲೆ ದೊಡ್ಡ ಹೊಡೆತಬಿದ್ದಂತಾಗಿದೆ.

3 / 7
ದ್ಯುತಿ ಚಂದ್ ವೈದ್ಯರನ್ನು ಸಂಪರ್ಕಿಸುವ ಬದಲು ತನ್ನ ಫಿಸಿಯೋಥೆರಪಿಸ್ಟ್ ಅನ್ನು ಸಂಪರ್ಕಿಸಿ ಮತ್ತು ಶಿಫಾರಸು ಮಾಡಿದ ಔಷಧಿಗಳನ್ನು ಸೇವಿಸಿದ್ದಾರೆ. ಅವರು ಸೇವಿಸಿದ ಔಷಧದ ವಿಷಯಗಳಿಗೆ ಸಂಬಂಧಿಸಿದಂತೆ ಲೇಬಲ್ ಅನ್ನು ಪರಿಶೀಲಿಸಲಿಲ್ಲ. ಎಂದು ಚೈತನ್ಯ ಮಹಾಜನ್ ನೇತೃತ್ವದ ಎಡಿಡಿಪಿ ತನ್ನ ಆದೇಶದಲ್ಲಿ ತಿಳಿಸಿದೆ.

4 / 7
ದ್ಯುತಿ ಅವರು ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿಯ (NADA) ಆರ್ಟಿಕಲ್ 2.1 ಮತ್ತು 2.2 ಅನ್ನು ಉಲ್ಲಂಘಿಸಿದ್ದಾರೆ. ಅವರು ತಾತ್ಕಾಲಿಕ ಅಮಾನತು ದಿನಾಂಕದಿಂದ ಅಂದರೆ ಜನವರಿ 3 2023 ರಿಂದ ಪ್ರಾರಂಭವಾಗುವ NADA ADR 2021 ರ ಆರ್ಟಿಕಲ್ 10.2.1.1 ರ ಪ್ರಕಾರ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗುತ್ತಾರೆ.

5 / 7
ಡಿಸೆಂಬರ್ 2022 ರಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ (ನಾಡಾ) ದಿಂದ ದ್ಯುತಿಯನ್ನು ಎರಡು ಬಾರಿ ಪರೀಕ್ಷಿಸಲಾಗಿತ್ತು. ನಿಷೇಧಿತ ಅನಾಬೋಲಿಕ್ ಸ್ಟೀರಾಯ್ಡ್‌ಗಳಿಗೆ ಪರೀಕ್ಷೆ ನಡೆಸಿದ ನಂತರ, ಇವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಇದೀಗ ನಿಷೇಧ ಹೇರಲಾಗಿದೆ.

6 / 7
ಎಎಎಫ್ ಬರೆದ ಪತ್ರದಲ್ಲಿರುವುದೆನೆಂದರೆ, ನಿಮ್ಮ ಮೂತ್ರದ ಮಾದರಿ ಪರೀಕ್ಷೆಯನ್ನು ಮಾಡಲಾಗಿದ್ದು, ವಾಡಾ ಸೂಚನೆಗಳ ಪ್ರಕಾರ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಆಗಿರುವುದು ಕಂಡುಬಂದಿದೆ ಎಂದು ಹೇಳಿದೆ. ದ್ಯುತಿ ಚಂದ್ ಅವರ ಮೂತ್ರದ ಮಾದರಿಯನ್ನು 5 ಡಿಸೆಂಬರ್ 2022 ರಂದು ಭುವನೇಶ್ವರದಲ್ಲಿ ತೆಗೆದುಕೊಳ್ಳಲಾಗಿತ್ತು.

7 / 7
Follow us