ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು, ನೀವು ನಿಮ್ಮ ಚರ್ಮದ ಮೇಲೆ ಎರಡರಿಂದ ಮೂರು ಹನಿ ಆಕ್ರೋಟ್ (ವಾಲ್‌ನಟ್ಸ್) ಎಣ್ಣೆಯನ್ನು ಹಚ್ಚಬಹುದು. ನಿಮ್ಮ ಅಂಗೈಯಲ್ಲಿ ವಾಲ್‌ನಟ್ಸ್ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಬೆರಳುಗಳ ಸಹಾಯದಿಂದ ನಿಮ್ಮ ಮುಖವನ್ನು ನಿಧಾನವಾಗಿ ಮಸಾಜ್ ಮಾಡಿ. ನೀವು ಬಯಸಿದರೆ, ನಿಮ್ಮ ಫೇಸ್ ಪ್ಯಾಕ್‌ನಲ್ಲಿ ನೀವು ಎರಡರಿಂದ ಮೂರು ಹನಿ ವಾಲ್‌ನಟ್ಸ್ ಎಣ್ಣೆಯನ್ನು ಸಹ ಬಳಸಬಹುದು.
ವಾಲ್‌ನಟ್ಸ್ ಎಣ್ಣೆಯು ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ ನಿತ್ಯವೂ ವಾಲ್ ನಟ್ಸ್ ಸೇವಿಸುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.
ಹೃದ್ರೋಗಗಳ ಅಪಾಯವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ನೆನಪಿನ ಶಕ್ತಿಗೂ ತುಂಬಾ ಒಳ್ಳೆಯದು. ಇತ್ತೀಚಿಗೆ ಜಗತ್ತಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಹೆಚ್ಚು ಜನರು ಸಾಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದಕ್ಕಾಗಿಯೇ ಹೃದಯವನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ.
ಉತ್ತಮ ದಾಂಪತ್ಯ ಜೀವನಕ್ಕಾಗಿ, ಪುರುಷರು ರಾತ್ರಿ ಮಲಗುವ ಮೊದಲು ಕನಿಷ್ಠ 2 ವಾಲ್‌ನಟ್‌ಗಳನ್ನು ಹಾಲಿನೊಂದಿಗೆ ಸೇವಿಸಬಹುದು. ತಜ್ಞರ ಪ್ರಕಾರ, ಪ್ರತಿದಿನ ರಾತ್ರಿ ವಾಲ್‌ನಟ್ಸ್ ನೊಂದಿಗೆ ಹಾಲು ಕುಡಿಯುವುದು ಪುರುಷರಲ್ಲಿ ದುರ್ಬಲತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಲೈಂಗಿಕ ಆರೋಗ್ಯವನ್ನು ಸುಧಾರಿಸಲು ಇದು ತುಂಬಾ ಉಪಯುಕ್ತವಾಗಿದೆ
ವಾಲ್‌ನಟ್ಸ್ ಫೈಬರ್, ವಿಟಮಿನ್ಗಳು, ಖನಿಜಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ನಮ್ಮ ಮೆದುಳಿಗೆ ಮತ್ತು ಜ್ಞಾಪಕ ಶಕ್ತಿಗೆ ತುಂಬಾ ಪ್ರಯೋಜನಕಾರಿ. ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಇದು ಹೊಟ್ಟೆಗೆ ಒಳ್ಳೆಯದು.
ಪ್ರತಿನಿತ್ಯ ವಾಲ್ ನಟ್ಸ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಆಹಾರದ ಫೈಬರ್ಗಳಲ್ಲಿ ಸಮೃದ್ಧವಾಗಿರುವ ವಾಲ್ನಟ್ಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪ್ರಸ್ತುತ ಅನೇಕ ಜನರು ನಿದ್ರಾಹೀನತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಿದ್ರೆಯ ಸಮಸ್ಯೆಗಳನ್ನು ನಿವಾರಿಸಲು, ನಿಮ್ಮ ದೈನಂದಿನ ಆಹಾರದಲ್ಲಿ ನೀವು ಜೀವಸತ್ವಗಳನ್ನು ಸೇರಿಸಿಕೊಳ್ಳಬೇಕು.