ದೇಹದಲ್ಲಿ ಕಬ್ಬಿಣಾಂಶದ ಕೊರತೆ ನಿವಾರಣೆಗೆ ಈ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

| Updated By: shruti hegde

Updated on: Nov 30, 2021 | 7:42 AM

ಆರೋಗ್ಯ ಚೆನ್ನಾಗಿರಲು ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು ಬೇಕು. ಹಾಗಿರುವಾಗ ಕಬ್ಬಿಣದ ಕೊರತೆ ನಿವಾರಣೆಗೆ ಈ ಕೆಲವು ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಉತ್ತಮ ಆಯ್ಕೆ.

1 / 5
ಪಾಲಾಕ್ ಸೊಪ್ಪು- ಪಾಲಾಕ್ ಸೊಪ್ಪು ಕಬ್ಬಿಣ ಮತ್ತು ಇತರ ವಿಟಮಿನ್ಗಳಲ್ಲಿ ಸಮೃದ್ಧವಾಗಿರುತ್ತದೆ. ನಮ್ಮ ಕಣ್ಣುಗಳ ಆರೋಗ್ಯ ಮತ್ತು ಮೂಳೆಗಳ ಆರೋಗ್ಯ ಸುಧಾರಣೆಗೆ ಪಾಲಾಕ್ ಸೊಪ್ಪು ಉತ್ತಮ ಆಯ್ಕೆ. ಇದರಲ್ಲಿ ವಿಟಮಿನ್ ಸಿ, ಎ ಮತ್ತು ಮೆಗ್ನೀಶಿಯಮ್ ನಂತಹ ಖನಿಜಾಂಶಗಳಿರುತ್ತವೆ.

2 / 5
ಬ್ರಕೊಲಿ- ಈ ತರಕಾರಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಕಬ್ಬಿಣ, ವಿಟಮಿನ್ ಬಿ ಮತ್ತು ಸಿ ಅಂಶಗಳಿಂದ ಸಮೃದ್ಧವಾಗಿರುತ್ತದೆ. ಇದು ಮಲಬದ್ಧತೆ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಸಮಸ್ಯೆ ನಿವಾರಣೆಗೆ ಸಹಾಯಕ.

3 / 5
ದಾಳಿಂಬೆ- ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಅತ್ಯುತ್ತಮ ಆಯ್ಕೆ. ಇದರಲ್ಲಿ ವಿಟಮಿನ್ ಸಿ, ಫೈಬರ್, ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಸಮೃದ್ಧವಾಗಿರುತ್ತದೆ.

4 / 5
ಸೇಬು- ಸೇಬು ಹಣ್ಣಿನಲ್ಲಿ ಕಬ್ಬಿಣ ಸಮೃದ್ಧವಾಗಿರುತ್ತವೆ. ಇದಲ್ಲದೆ ಸೇಬು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ವಿಟಮಿನ್ ಸಿ, ಎ, ಕೆ, ಪೈಬರ್, ಖನಿಜಗಳು ಮತ್ತು ಇತರ ಅನೇಕ ಪೋಷಕಾಂಶಗಳನ್ನು ಹೊಂದಿದೆ.

5 / 5
ಎಲೆಕೋಸು- ಕಬ್ಬಿಣದ ಜೊತೆಗೆ ವಿಟಮಿನ್ ಬಿ6 ಮತ್ತು ಫೋಲೇಟ್ ಕೂಡಾ ಎಲೆಕೋಸಿನಲ್ಲಿ ಸಮೃದ್ಧವಾಗಿರುತ್ತದೆ. ಇದು ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿರುತ್ತದೆ. ಇದು ಅನೇಕ ಅರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.