ಬೆಂಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮ; ಸುಂದರ ಫೋಟೋಗಳ ಝಲಕ್ ಇಲ್ಲಿದೆ
ನಾಡಿನೆಲ್ಲೆಡೆ ಈದ್ ಮಿಲಾದ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಒಂದು ಕಡೆ ಓಣಂ ಆಚಾರಣೆ ಜೋರಾಗಿದ್ರೆ, ಮತ್ತೊಂದೆಡೆ ಈದ್ ಮಿಲಾದ್ ಜೋರಾಗಿ ನಡೆಯುತ್ತಿದೆ. ಮುಸ್ಲಿಂ ಬಾಂಧವರು ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆ ಸೇರಿ ಮೆರವಣಿಗೆ ಮಾಡಿ, ಕುಣಿದು ಕುಪ್ಪಳಿಸಿದ್ದಾರೆ.
1 / 6
ನಿನ್ನೆ ಈದ್-ಮಿಲಾದ್-ಉನ್-ನಬಿ ಎಂದು ಕರೆಯುವ ಈದ್ ಮಿಲಾದ್ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಪ್ರಯುಕ್ತವಾಗಿ ಈ ಹಬ್ಬವನ್ಮ ಆಚಾರಣೆ ಮಾಡಲಾಗುತ್ತೆ. ಅಲ್ಲದೇ ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಅವರು ಈ ದಿನದಂದೇ ಜನಿಸಿದ್ದು, ಇದೇ ದಿನದಂದು ಅವರು ಮರಣ ಹೊಂದಿದ್ದಾರೆ.
2 / 6
ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಅವರು ಈ ದಿನದಂದೇ ಜನಿಸಿದ್ರಂತೆ. ಹೀಗಾಗಿ ಈ ದಿನವನ್ನ ಸುನ್ನಿ ಸಮುದಾಯದವರು ಮಹಮ್ಮದ್ ರ ಜನ್ಮದಿನ ಎಂದು ಆಚರಿಸುತ್ತಾರೆ. ಸಿಲಿಕಾಮ್ ಸಿಟಿಯಲ್ಲಿ ನಿನ್ನೆ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡಲಾಗಿದೆ. ನಗರದೆಲ್ಲೆಡೆ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ.
3 / 6
ನಿನ್ನೆ ನಗರದೆಲ್ಲೆಡೆ ಮೆರವಣಿಗೆ ಇದ್ದಿದ್ದರಿಂದ ರಸ್ತೆಗಳು ಕ್ಲೋಸ್ ಆಗಿದ್ವು. ನಗರದ ಚಾಮರಾಜಪೇಟೆ, ಶಿವಾಜಿನಗರ, ಆರ್ ಟಿ ನಗರದಲ್ಲಿ ಅದ್ದೂರಿಯಾಗಿ ಈದ್ ಮಿಲಾದ್ ನಡೆದಿದೆ.
4 / 6
ರಿಚ್ಮಂಡ್ ರಸ್ತೆಯಿಂದ ಬರುವ ವಾಹನಗಳು ಆರ್.ಆರ್.ಎಂ.ಆರ್. ರಸ್ತೆ ಹಡ್ಸನ್ ವೃತ್ತದ ಮೂಲಕ ಕೆ.ಜಿ.ರಸ್ತೆ ಕಡೆಗೆ ಹಾಗೂ ಎನ್.ಆರ್.ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ರಸ್ತೆ ವಿಂಗಡಿಸಲಾಗಿತ್ತು. ಹೀಗಾಗಿ ಮರವಣಿಗೆ ಮಧ್ಯೆ ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡಿದ್ರು.
5 / 6
ಇನ್ನು ನಗರದೆಲ್ಲೆಡೆ ಮೆರವಣಿಗೆ ಮಾಡಿ ವೈರಂಸಿಎ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು. ಇನ್ನು ಈ ಹಬ್ಬದಲ್ಲಿ ಎಲ್ಲಾ ಸಂಬಂಧಿರು ಒಂದಾಗಿ ಹಬ್ಬ ಮಾಡ್ತಿವಿ. ಮರವಣಿಗೆ ಮಾಡಿ ಮೊಹಮ್ಮದ್ ಜನ್ಮದಿನವನ್ನ ಆಚರಿಸುತ್ತೀವಿ ಅಂತ ಓರ್ವರು ಸಂತೋಷ ವ್ಯಕ್ತಪಡಿಸಿದ್ರು.
6 / 6
ಒಟ್ನಲ್ಲಿ, ನಗರದೆಲ್ಲೆಡೆ ಅದ್ದೂರಿಯಾಗಿ ಈದ್ ಮಿಲಾದ್ ಆಚರಿಸಿದ್ದು, ಮುಸ್ಲಿಂ ಬಾಂಧವರು ಒಂದೆಡೆ ಸೇರಿ ಅದ್ಧೂರಿಯಾಗಿ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.