ಹಿಮವದ್ ಗೋಪಾಲಸ್ವಾಮಿ ಬೆಟ್ಟ; ಪ್ರತಿ ನಿತ್ಯ ದೇವಸ್ಥಾನಕ್ಕೆ ಬಂದು ಪ್ರದಕ್ಷಿಣೆ ಹಾಕುತ್ತೆ ಈ ಒಂಟಿ ಸಲಗ, ಸೆಲ್ಫಿ ಕ್ಲಿಕ್ಕಿಸಿ ಖುಷಿಪಟ್ಟ ಜನ

| Updated By: ಆಯೇಷಾ ಬಾನು

Updated on: Jan 07, 2024 | 9:11 AM

ಬಂಡೀಪುರ ರಾಷ್ಟ್ರೀಯ ಉದ್ಯಾನದ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಸಮುದ್ರ ಮಟ್ಟಕ್ಕಿಂತ 1,450 ಮೀಟರ್ ಎತ್ತರದಲ್ಲಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಈ ಪ್ರಸಿದ್ದ ದೇವಾಲಯವಿದೆ. ಇಲ್ಲಿಗೆ ಪ್ರತಿ ದಿನ ಒಂಟಿ ಸಲಗ ಬಂದು ದೇವಾಲಯ ಪ್ರದಕ್ಷಿಣೆ ಹಾಕುತ್ತೆ.

1 / 6
ಕರ್ನಾಟಕದ ಊಟಿ ಎಂದೇ ಖ್ಯಾತಿ ಪಡೆದಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಪ್ರವಾಸಿಗರು, ಭಕ್ತರು ಆನೆ ದರ್ಶನ ಮಾಡಿ ಫುಲ್ ಖುಷ್ ಆಗಿದ್ದಾರೆ.

2 / 6
ಬಂಡೀಪುರ ರಾಷ್ಟ್ರೀಯ ಉದ್ಯಾನದ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಸಮುದ್ರ ಮಟ್ಟಕ್ಕಿಂತ 1,450 ಮೀಟರ್ ಎತ್ತರದಲ್ಲಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಈ ಪ್ರಸಿದ್ದ ದೇವಾಲಯವಿದೆ.

3 / 6
ಕಳೆದೊಂದಷ್ಟು ವರ್ಷಗಳಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಾಗ ಒಂಟಿ ಸಲಗ ಬಂದು ಹೋಗುತ್ತೆ. ಇದೊಂದು ರೀತಿಯ ವಿಸ್ಮಯವೆನಿಸಿದ್ದು ಗೋಪಾಲನ ಭಕ್ತ ಎಂದೇ ಈ ಒಂಟಿ ಸಲಗ ಖ್ಯಾತಿ ಪಡೆದಿದೆ.

4 / 6
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರತಿನಿತ್ಯ ಕಾಣಿಸಿ ಕೊಳ್ಳುತ್ತಿರೊ ಒಂಟಿ ಸಲಗದ ವಿಡಿಯೋ ವೈರಲ್ ಆಗಿದೆ. ಎಷ್ಟೇ ಜನ ಬಂದು ಸೇರಿದರೂ ಈ ಆನೆ ದಾಳಿ ಮಾಡದೆ ಭಕ್ತರು ನೀಡುವ ಬಾಳೆಹಣ್ಣು, ಪ್ರಸಾದ ಸವಿಯುತ್ತೆ.

5 / 6
ಭಾರಿ ಗಾತ್ರದ ದಂತ ಹೊಂದಿರುವ ಈ ಕಾಡಾನೆ 4 ವರ್ಷದಿಂದ ಪ್ರತಿನಿತ್ಯ ವೇಣುಗೋಪಾಲಸ್ವಾಮಿಯ ದರ್ಶನಕ್ಕೆ ಬರುತ್ತಿದೆ. ಸಂಜೆ 4 ಗಂಟೆಯಾದರೆ ಸಾಕು ದೇವಾಲಯಕ್ಕೆ ಆಗಮಿಸಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕುತ್ತೆ.

6 / 6
ಒಂಟಿ ಸಲಗ ನೋಡಿ ಭಕ್ತರು ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಟ್ಟಿದ್ದಾರೆ. ಸೆಲ್ಪಿ ಕ್ಲಿಕ್ಕಿಸಿ ಒಂಟಿ ಸಲಗದೊಂದಿಗೆ ಫೋಸ್ ನೀಡಿದ ಪ್ರವಾಸಿಗರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.