SK Bhagavan: ಖ್ಯಾತ ಹಿರಿಯ ನಿರ್ದೇಶಕ ಎಸ್​ಕೆ ಭಗವಾನ್​ ದೊರೈ ಭಗವಾನ್​​ ಆಗಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಸಂಗತಿ

Edited By:

Updated on: Feb 20, 2023 | 11:04 AM

ದೊರೈ ಭಗವಾನ್ ಎಂದೇ ಖ್ಯಾತಿ​ ಹೊಂದಿದ್ದ ಎಸ್​ಕೆ ಭಗವಾನ್​ ಅವರು ವಯೋಸಜ ಕಾಯಿಲೆಯಿಂದ‌ ಇಂದು (ಫೆ. 20) ನಿಧನ ಹೊಂದಿದ್ದು, ಇಡೀ ಚಿತ್ರರಂಗ ಸಂತಾಪ ಸೂಚಿಸಿದೆ.

1 / 8
ಖ್ಯಾತ ಹಿರಿಯ ನಿರ್ದೇಶಕರಲ್ಲಿ ಎಸ್​.ಕೆ. ಭಗವಾನ್​ ಅವರು ಕೂಡ ಒಬ್ಬರು. ದೊರೈ ಭಗವಾನ್ ಎಂದೇ ಖ್ಯಾತ​ ಹೊಂದಿರುವ ಎಸ್​.ಕೆ. ಭಗವಾನ್​ ಅವರು ಇಂದು (ಫೆ. 20)
ರಂದು ನಿಧನ ಹೊಂದಿದ್ದು, ಇಡೀ ಚಿತ್ರರಂಗ ಸಂತಾಪ ಸೂಚಿಸಿದ್ದಾರೆ.

ಖ್ಯಾತ ಹಿರಿಯ ನಿರ್ದೇಶಕರಲ್ಲಿ ಎಸ್​.ಕೆ. ಭಗವಾನ್​ ಅವರು ಕೂಡ ಒಬ್ಬರು. ದೊರೈ ಭಗವಾನ್ ಎಂದೇ ಖ್ಯಾತ​ ಹೊಂದಿರುವ ಎಸ್​.ಕೆ. ಭಗವಾನ್​ ಅವರು ಇಂದು (ಫೆ. 20) ರಂದು ನಿಧನ ಹೊಂದಿದ್ದು, ಇಡೀ ಚಿತ್ರರಂಗ ಸಂತಾಪ ಸೂಚಿಸಿದ್ದಾರೆ.

2 / 8

ಎಸ್​.ಕೆ. ಭಗವಾನ್​ ಅವರು ನಿರ್ದೇಶಕರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವರೊಬ್ಬರು ನಿರ್ಮಾಪಕರು ಹೌದು. ಉತ್ತಮ ಸಂದೇಶಗಳನ್ನು ನೀಡುವ ಮನರಂಜನಾ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.

3 / 8

1966ರಲ್ಲಿ ತೆರೆಗೆ ಬಂದ ‘ಸಂಧ್ಯಾರಾಗ’ ಸಿನಿಮಾ ಮೂಲಕ ಎಸ್​.ಕೆ. ಭಗವಾನ್ ಅವರು ನಿರ್ದೇಶಕರಾಗಿ ಬಡ್ತಿ ಪಡೆದರು.

4 / 8

ವರನಟ ಡಾ. ರಾಜ್​ಕುಮಾರ್ ಅವರಿಗೆ ಹಲವು ಜನಪ್ರಿಯ ಚಿತ್ರಗಳನ್ನು ಭಗವಾನ್​ ಅವರು ನಿರ್ದೇಶನ ಮಾಡಿದ್ದಾರೆ. ಆ ಮೂಲಕ ರಾಜ್​ಕುಮಾರ್​ ಅವರ ಜೊತೆ ಅತೀ ಹೆಚ್ಚು ಚಿತ್ರಗಳನ್ನ ನಿರ್ದೇಶನ ಮಾಡಿರುವ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಜೊತೆಗೆ ರಾಜ್​ಕುಮಾರ್ ಕುಟುಂಬದ ಜೊತೆ ನಿಕಟ ಸಂಬಂಧ ಹೊಂದಿದ್ದರು.

5 / 8

ಕ್ಯಾಮರಾ ಮ್ಯಾನ್ ದೊರೈ ಜೊತೆ ಭಗವಾನ್ ಅವರು ಕೆಲಸ ಮಾಡಿದ್ದು, ಇವರಿಬ್ಬರ ಜೋಡಿ‌ ದೊರೈ ಭಗವಾನ್ ಜೋಡಿ‌ ಎಂದೇ ಫೇಮಸ್ ಆಗಿತ್ತು.

6 / 8

24 ಕಾದಂಬರಿಗಳನ್ನ ಸಿನಿಮಾ ಮಾಡಿದ್ದು ನಿರ್ದೇಶಕ ಎಸ್​.ಕೆ. ಭಗವಾನ್​ ಅವರ ಮತ್ತೊಂದು ಹೆಗ್ಗಳಿಕೆ.

7 / 8

'ಆಡುವ ಗೊಂಬೆ' ಭಗವಾನ್ ಅವರ ಕೊನೆಯ ಚಿತ್ರವಾಗಿದ್ದು, ನಟ ಸಂಚಾರಿ ವಿಜಯ್ ನಾಯಕರಾಗಿ ಅಭಿನಯಿಸಿದ್ದಾರೆ.

8 / 8

ಭಗವಾನ್​ ಅವರು ಇಬ್ಬರು ಗಂಡು ಮಕ್ಕಳು, ಒಬ್ಬರು ಹೆಣ್ಣು ಮಗಳನ್ನು ಹೊಂದಿದ್ದು, ಹಲವು ವರ್ಷಗಳ‌ ತುಂಬು ಜೀವನವನ್ನ ನಡೆಸಿದ್ದಾರೆ.

Published On - 10:20 am, Mon, 20 February 23

Loading...
Unable to load recommendations.
Follow Us