
ಸಲ್ಮಾನ್ ಖಾನ್ - ಬಹುತೇಕರ ನೆಚ್ಚಿನ ಆಹಾರವಾದ ಬಿರಿಯಾನಿಯೂ ಬಾಲಿವುಡ್ ನಟ ಸಲ್ಲು ಬಾಯ್ ಅವರಿಗೆ ಬಲು ಇಷ್ಟವಂತೆ. ಖಾರ ಮಿಶ್ರಿತ ಸುವಾಸನೆ ಭರಿತ ಪದಾರ್ಥಗಳನ್ನೊಳಗೊಂಡ ಅಮ್ಮ ಮಾಡಿದ ಬಿರಿಯಾನಿಯೆಂದರೆ ಅಚ್ಚು ಮೆಚ್ಚು. ಬಿರಿಯಾನಿ ಜೊತೆಗೆ ಕಬಾಬ್ ಮತ್ತು ಮೋದಕ ಕೂಡ ಅವರ ಇಷ್ಟದ ಆಹಾರವಾಗಿದೆ.

ಕತ್ರಿನಾ ಕೈಫ್ - ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಐಸ್ ಕ್ರೀಂ ಎಂದರೆ ತುಂಬಾನೇ ಇಷ್ಟವಂತೆ. ಈ ಕೆಲವು ಆಹಾರಗಳನ್ನು ಮಿತವಾಗಿ ಸೇವಿಸುವುದರೊಂದಿಗೆ ಫಿಟ್ ನೆಸನ್ನು ಕಾಯ್ದುಕೊಳ್ಳುತ್ತಾರೆ. ಆದರೆ ಕತ್ರಿನಾ ಕೈಫ್ ಅವರ ಇಷ್ಟದ ಡೆಸರ್ಟ್ ಆದ ಐಸ್ ಕ್ರೀಂ ಮತ್ತು ಸಿನ್ನಮೋನ್ ರೋಲ್ಸ್ ಮಿಸ್ ಮಾಡದೇ ಸೇವಿಸುತ್ತಾರೆ

ಹೃತಿಕ್ ರೋಷನ್ - ಬಾಲಿವುಡ್ ನಟ ಹೃತಿಕ್ ರೋಷನ್ರವರ ನೆಚ್ಚಿನ ತಿನಿಸು ಸಮೋಸ. ಡಜನ್ ಗಟ್ಟಲೇ ಸಮೋಸವನ್ನು ಈ ನಟನ ಮುಂದೆ ಇಟ್ಟರೆ ಬಾಯಿ ಚಪ್ಪರಿಸಿಕೊಂಡು ಎಲ್ಲವನ್ನು ಖಾಲಿ ಮಾಡಿ ಬಿಡುತ್ತಾರೆ.

ದೀಪಿಕಾ ಪಡುಕೋಣೆ : ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಇಷ್ಟವಾದ ಆಹಾರಗಳಲ್ಲಿ ಒಂದು ದಕ್ಷಿಣ ಭಾರತದ ತಿನಿಸಾದ ಇಡ್ಲಿ. ಈ ಸಮುದ್ರ ಆಹಾರಗಳನ್ನು ಚಪ್ಪರಿಕೊಂಡು ತಿನ್ನುತ್ತಾರೆ. ಅದಲ್ಲದೇ ಸೇವ್ ಪುರಿಯಿಂದ ಹಿಡಿದು ಮೆಡಿಟರೇನಿಯನ್ ಅಡುಗೆಯವರೆಗೂ ಎಲ್ಲವು ಇಷ್ಟವಂತೆ. ಹೀಗಾಗಿ ದೀಪಿಕಾ ಪಡುಕೋಣೆಯವರ ಅಚ್ಚು ಮೆಚ್ಚಿನ ಆಹಾರಗಳ ಪಟ್ಟಿ ಬಹಳ ದೊಡ್ಡದಿದೆ ಎನ್ನಬಹುದು.

ಅಮಿತಾಬ್ ಬಚ್ಚನ್ - ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಲಹಾಬಾದಿನರಾಗಿದ್ದು ಅವರ ಇಷ್ಟದ ಆಹಾರ ಬೆಂಡಿ ಸಬ್ಜಿ. ಬೆಂಡೆಕಾಯಿ ಪಲ್ಯ ಹಾಗೂ ಹೆಸರುಬೇಳೆ ಸಾರು ಈ ನಟನಿಗೆ ಅಚ್ಚು ಮೆಚ್ಚಾಗಿದ್ದು ಈ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ.
Published On - 10:12 am, Thu, 15 August 24