ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಬ್ಯಾನ್: ತೂಗುಯ್ಯಾಲೆಯಲ್ಲಿ ಮಹಿಳಾ ವಿಶ್ವಕಪ್ ಭವಿಷ್ಯ
TV9 Web | Updated By: Vinay Bhat
Updated on:
Aug 16, 2022 | 11:11 AM
ಫಿಫಾ ಕೌನ್ಸಿಲ್ ಬ್ಯೂರೋ, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (AIFF) ಸಂಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಘೋಷಿಸಿದೆ. ಬ್ಯೂರೊ ಆಫ್ ಫಿಫಾ (FIFA) ಕೌನ್ಸಿಲ್‍ನಲ್ಲಿ ಈ ಸಂಬಂಧ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
1 / 7
ಫಿಫಾ ಕೌನ್ಸಿಲ್ ಬ್ಯೂರೋ, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (AIFF) ಸಂಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಘೋಷಿಸಿದೆ. ಬ್ಯೂರೊ ಆಫ್ ಫಿಫಾ (FIFA) ಕೌನ್ಸಿಲ್‍ನಲ್ಲಿ ಈ ಸಂಬಂಧ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
2 / 7
ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವವನ್ನು ಉಲ್ಲೇಖಿಸಿ ಫಿಫಾ ಫುಟ್ಬಾಲ್ ಫೆಡರೇಶನ್ ಆಫ್ ಇಂಡಿಯಾವನ್ನು ಅಮಾನತುಗೊಳಿಸಿದೆ. ಅಷ್ಟೇ ಅಲ್ಲದೆ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ FIFA U-17 ಮಹಿಳಾ ವಿಶ್ವಕಪ್ 2022 ರ ಆತಿಥ್ಯವನ್ನೂ ಫಿಫಾ ಕಸಿದುಕೊಂಡಿದೆ.
3 / 7
2022 ರ U17 ಮಹಿಳಾ ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್ 11-30 ರವರೆಗೆ ನಡೆಯಲು ತೀರ್ಮಾನಿಸಲಾಗಿದೆ. ಆದಾಗ್ಯೂ, ನಿಷೇಧವನ್ನು ಹಿಂತೆಗೆದುಕೊಳ್ಳದಿದ್ದರೆ, ಭಾರತದ ಆತಿಥ್ಯದಿಂದ U17 ಮಹಿಳಾ ವಿಶ್ವಕಪ್ ಬೇರೆಡೆ ಶಿಫ್ಟ್ ಆಗಲಿದೆ. ಇದರ ನಡುವೆ ಪಂದ್ಯಾವಳಿಯನ್ನು ಬದಲಾಯಿಸುವ ಬಗ್ಗೆ ಮತ್ತಷ್ಟು ಮೌಲ್ಯಮಾಪನ ಮಾಡುತ್ತಿದ್ದೇವೆ ಮತ್ತು ನಂತರದ ದಿನಾಂಕದಂದು ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಫಿಫಾ ಹೇಳಿದೆ.
4 / 7
ಎಲ್ಲಾದರು ನಿಷೇಧವನ್ನು ಶೀಘ್ರದಲ್ಲೇ ಹಿಂತೆಗೆದುಕೊಂಡರೆ ನಿಗದಿಯಂತೇ ಭಾರತದಲ್ಲಿ ವಿಶ್ವಕಪ್ ನಡೆಸಬಹುದು. ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೆ ಭಾರತದ ರಾಷ್ಟ್ರೀಯ ತಂಡಗಳು ಯಾವುದೇ FIFA ಅಥವಾ AFC- ಮಾನ್ಯತೆ ಪಡೆದ ಪಂದ್ಯಾವಳಿಗಳಲ್ಲಿ ಆಡಲು ಸಾಧ್ಯವಿಲ್ಲ. ಇದಲ್ಲದೆ, ನಿಷೇಧದ ಅವಧಿಯಲ್ಲಿ ಭಾರತೀಯ ಕ್ಲಬ್ ಗಳು ಕಾಂಟಿನೆಂಟಲ್ ಪಂದ್ಯಾವಳಿಗಳಲ್ಲಿ ದೇಶವನ್ನು ಪ್ರತಿನಿಧಿಸುವಂತಿಲ್ಲ.
5 / 7
ಈ ಹಿಂದೆ, U-17 ಮಹಿಳಾ ವಿಶ್ವಕಪ್ ಪಂದ್ಯಾವಳಿಯನ್ನು 2020 ರಲ್ಲಿ ಭಾರತದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ರದ್ದುಗೊಳಿಸ ಮುಂದೂಡಲಾಯಿತು. ಇದೀಗ ಪುನಃ ಇದಕ್ಕೆ ಕಂಟಕ ಬಂದಿದ್ದಿ AIFF ಅನ್ನು ಅಮಾನತುಗೊಳಿಸುವುದರೊಂದಿಗೆ, ಭಾರತದಲ್ಲಿ ಪಂದ್ಯಾವಳಿಯನ್ನು ನಡೆಸುವುದು ಇನ್ನೂ ಅನುಮಾನವಾಗಿಯೇ ಉಳಿದಿದೆ.
6 / 7
ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯ ಅಧಿಕಾರವನ್ನು ವಹಿಸಿಕೊಳ್ಳಲು ನಿರ್ವಾಹಕರ ಸಮಿತಿಯನ್ನು ರಚಿಸುವ ಆದೇಶವನ್ನು ರದ್ದುಗೊಳಿಸಿದ ನಂತರ ಮತ್ತು ಎಐಎಫ್‌ಎಫ್ ಆಡಳಿತವು ಎಐಎಫ್ ಎಫ್ ನ ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದ ನಂತರ ಅಮಾನತು ತೆಗೆದುಹಾಕಲಾಗುವುದು ಎಂದು ಫಿಫಾ ಹೇಳಿಕೆಯಲ್ಲಿ ತಿಳಿಸಿದೆ.
7 / 7
ಈ ತಿಂಗಳ ಆರಂಭದಲ್ಲಿ, ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕಾಗಿ AIFF ಅನ್ನು ಅಮಾನತುಗೊಳಿಸುವುದಾಗಿ FIFA ಬೆದರಿಕೆ ಹಾಕಿತು. ಇದೀಗ ಎಐಎಫ್ ಎಫ್ ಚುನಾವಣೆ ಆಗಸ್ಟ್ 28 ರಂದು ನಡೆಯಲಿದೆ. ಆಗಸ್ಟ್ 17 ರಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.
Published On - 11:11 am, Tue, 16 August 22