FIFA World Cup 2022: ಮೆಸ್ಸಿ ಹಿಂದಿಕ್ಕೆ ಗೋಲ್ಡನ್ ಬೂಟ್ ಗೆದ್ದ ಕೈಲಿಯನ್ ಎಂಬಪ್ಪೆ..!
TV9 Web | Updated By: ಪೃಥ್ವಿಶಂಕರ
Updated on:
Dec 19, 2022 | 12:36 AM
Kylian Mbappe: ಎಂಬಪ್ಪೆ ಆಡಿದ ಏಳು ಪಂದ್ಯಗಳಲ್ಲಿ 8 ಗೋಲು ಗಳಿಸಿದ್ದರೆ, ಮತ್ತೊಂದೆಡೆ, ಎರಡನೇ ಸ್ಥಾನದಲ್ಲಿರುವ ಮೆಸ್ಸಿ ಅದೇ ಸಂಖ್ಯೆಯ ಪಂದ್ಯಗಳಲ್ಲಿ ಏಳು ಗೋಲುಗಳನ್ನು ಬಾರಿಸಿದ್ದಾರೆ.
1 / 5
ಫಿಫಾ ವಿಶ್ವಕಪ್ 2022 ರ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಅರ್ಜೆಂಟೀನಾ ಯಶಸ್ವಿಯಾಗಿದೆ. ವಾಡಿಕೆಯಂತೆ ಪ್ರತಿ ವಿಶ್ವಕಪ್‌ನಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನೀಡುವ ಗೋಲ್ಡನ್ ಬೂಟ್ ಪ್ರಶಸ್ತಿ ಫ್ರೆಂಚ್ ತಂಡದ ಯುವ ಸ್ಟಾರ್ ಕೈಲಿಯನ್ ಎಂಬಪ್ಪೆ ಪಾಲಾಗಿದೆ.
2 / 5
ಫೈನಲ್‌ಗೂ ಮುನ್ನ ಕೈಲಿಯನ್ ಎಂಬಪ್ಪೆ ಮತ್ತು ಲಿಯೋನೆಲ್ ಮೆಸ್ಸಿ ಗೋಲ್ಡನ್ ಬೂಟ್ ರೇಸ್‌ನಲ್ಲಿ ಟೈ ಆಗಿದ್ದರು. ಇಬ್ಬರೂ ತಮ್ಮ ಹೆಸರಿನಲ್ಲಿ ತಲಾ 5 ಗೋಲುಗಳನ್ನು ಹೊಂದಿದ್ದರು. ಲಿಯೋನೆಲ್ ಮೆಸ್ಸಿ ಅಂತಿಮ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಿದರೆ, ಎಂಬಪ್ಪೆ ಹ್ಯಾಟ್ರಿಕ್ ಗಳಿಸುವ ಮೂಲಕ ರೇಸ್‌ನಲ್ಲಿ ಮುನ್ನಡೆ ಕಾಯ್ದುಕೊಂಡರು.
3 / 5
ಎಂಬಪ್ಪೆ 80ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಗೋಲು ಗಳಿಸಿದರೆ, ಒಂದು ನಿಮಿಷದ ನಂತರ ಎರಡನೇ ಗೋಲು ಗಳಿಸಿದರು. ಇದರ ನಂತರ ಎಂಬಪ್ಪೆ ಹೆಚ್ಚುವರಿ ಸಮಯದಲ್ಲಿ ಪೆನಾಲ್ಟಿಯಲ್ಲಿ ಮತ್ತೊಂದು ಗೋಲು ಗಳಿಸಿದರು.
4 / 5
2018 ರಲ್ಲಿ ರಷ್ಯಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ಈ ಪ್ರಶಸ್ತಿಯನ್ನು ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಪಡೆದುಕೊಂಡಿದ್ದರು. ಹ್ಯಾರಿ ಕೇನ್ ಆರು ಗೋಲು ಗಳಿಸಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದಿದ್ದರು.
5 / 5
ಎಂಬಪ್ಪೆ ಆಡಿದ ಏಳು ಪಂದ್ಯಗಳಲ್ಲಿ 8 ಗೋಲು ಗಳಿಸಿದ್ದರೆ, ಮತ್ತೊಂದೆಡೆ, ಎರಡನೇ ಸ್ಥಾನದಲ್ಲಿರುವ ಮೆಸ್ಸಿ ಅದೇ ಸಂಖ್ಯೆಯ ಪಂದ್ಯಗಳಲ್ಲಿ ಏಳು ಗೋಲುಗಳನ್ನು ಬಾರಿಸಿದ್ದಾರೆ. ಇದಲ್ಲದೆ ಫ್ರಾನ್ಸ್‌ನ ಒಲಿವಿಯರ್ ಗಿರೌಡ್ ಮತ್ತು ಅರ್ಜೆಂಟೀನಾದ ಜೂಲಿಯನ್ ಅಲ್ವಾರೆಜ್ ತಲಾ 4 ಗೋಲುಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
Published On - 12:34 am, Mon, 19 December 22