Updated on:Dec 18, 2022 | 10:43 PM
6 places in india where indians require special permission to travel
ನಾಗಾಲ್ಯಾಂಡ್ ಅನೇಕ ಬುಡಕಟ್ಟುಗಳಿಗೆ ನೆಲೆಯಾಗಿದೆ. ಈ ರಾಜ್ಯವು ಮ್ಯಾನ್ಮಾರ್‌ನೊಂದಿಗೆ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ. ಇದು ಸೂಕ್ಷ್ಮ ಪ್ರದೇಶವಾಗಿದ್ದು, ಪ್ರವಾಸಿಗರು ದೆಹಲಿ, ಕೋಲ್ಕತ್ತಾ, ಕೊಹಿಮಾ, ದಿಮಾಪುರ್, ಶಿಲ್ಲಾಂಗ್ ಮತ್ತು ಮೊಕೊಕ್‌ಚುಂಗ್‌ನ ಡೆಪ್ಯೂಟಿ ಕಮಿಷನರ್‌ನಿಂದ ಇನ್ನರ್ ಲೋನ್ ಅನುಮತಿಯನ್ನು (ILP) ಪಡೆಯಬೇಕು.
ಮಿಜೋರಾಂ ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ರಾಜ್ಯ ಹಲವಾರು ಸ್ಥಳೀಯ ಬುಡಕಟ್ಟುಗಳಿಗೆ ನೆಲೆಯಾಗಿದೆ. ಸಿಲ್ಚಾರ್, ಕೋಲ್ಕತ್ತಾ, ಶಿಲ್ಲಾಂಗ್, ದೆಹಲಿ, ಗುವಾಹಟಿಯಿಂದ ಮಿಜೋರಾಂ ಸರ್ಕಾರದ ಸಂಪರ್ಕ ಅಧಿಕಾರಿಯಿಂದ ಇನ್ನರ್ ಲೋನ್ ಅನುಮತಿಯನ್ನು (ILP) ಪಡೆಯಬೇಕು. ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ, ಐಜ್ವಾಲ್‌ನ ಲೆಂಗ್‌ಪುಯಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಭದ್ರತಾ ಅಧಿಕಾರಿಯಿಂದ ವಿಶೇಷ ಪಾಸ್ ತೆಗೆದುಕೊಳ್ಳಬಹುದು.
ಲಕ್ಷದ್ವೀಪ ಒಂದು ಸುಂದರವಾದ ನಡುಗಡ್ಡೆ. ಜೀವನದಲ್ಲಿ ಒಮ್ಮೆಯಾದರು ಭೇಟಿ ನೀಡಲೇಬೇಕು. ಈ ನಗರ ಕಡಲತೀರಗಳು ಮತ್ತು ಆಕಾಶ ನೀಲಿ ನೀರು ಮತ್ತು ರುಚಿಕರವಾದ ಆಹಾರಕ್ಕಾಗಿ ಹೆಸರುವಾಸಿಯಾಗಿದೆ. ಈ ಕೇಂದ್ರಾಡಳಿತ ಪ್ರದೇಶವನ್ನು ಪ್ರವೇಶಿಸಲು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಮತ್ತು ವಿಶೇಷ ಪರವಾನಗೆ ಅಗತ್ಯವಿದೆ.
ಹಿಮಾಲಯದ ಹೆಬ್ಬಾಗಿಲು, ಸಿಕ್ಕಿಂ ಸುಂದರವಾದ ಹುಲ್ಲುಗಾವಲುಗಳು, ರುಚಿಕರವಾದ ಪಾಕಪದ್ಧತಿಗಳು, ಅನೇಕ ಮಠಗಳು, ಸ್ಫಟಿಕ ಸರೋವರಗಳು ಭೂಮಿಯಾಗಿದೆ. ಭಾರತದ ಈಶಾನ್ಯ ಭಾಗದಲ್ಲಿರುವ ಚಿಕ್ಕ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂನ ತ್ಸೋಮ್ಗೊ ಬಾಬಾ ಮಂದಿರ ಟ್ರಿಪ್, ಸಿಂಗಲಿಲಾ ಟ್ರೆಕ್, ನಾಥ್ಲಾ ಪಾಸ್, ಝೋಂಗ್ರಿ ಟ್ರೆಕ್, ತಂಗು-ಚೋಪ್ಟಾ ವ್ಯಾಲಿ ಟ್ರಿಪ್, ಯುಮೆಸಾಮ್ಡಾಂಗ್, ಯುಮ್ಥಾಂಗ್ ಮತ್ತು ಝೀರೋ ಪಾಯಿಂಟ್ ಟ್ರಿಪ್ ಮತ್ತು ಗುರುದೋಗ್ಮಾರ್ ಸರೋವರ ವೀಕ್ಷಿಸಲು ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಯಿಂದ ಅನುಮತಿಯನ್ನು ನೀಡಲಾಗುತ್ತದೆ ಮತ್ತು ಬಾಗ್ಡೋಗ್ರಾ ವಿಮಾನ ನಿಲ್ದಾಣ ಮತ್ತು ರಂಗ್‌ಪೋಚೆಕ್‌ಪೋಸ್ಟ್‌ನಲ್ಲಿ ಪಡೆಯಬಹುದು.
ಜಮ್ಮು ಮತ್ತು ಕಾಶ್ಮೀರನ ಸುಂದರವಾದ ಕಣಿವೆ ಲಾಡಾಖ್. ಲಡಾಖ್ನ ನುಬ್ರಾ ಕಣಿವೆ, ಖರ್ದುಂಗ್ ಲಾ ಪಾಸ್, ತ್ಸೋ ಮೊರಿರಿ ಲೇಕ್, ಪ್ಯಾಂಗೊಂಗ್ ತ್ಸೋ ಲೇಕ್, ದಹ್, ಹನು ವಿಲೇಜ್, ನ್ಯೋಮಾ, ತುರ್ತುಕ್, ಡಿಗರ್ ಲಾ ಮುಂತಾದ ಸ್ಥಳಗಳಿಗೆ ಹೋಗಲು ಇನ್ನರ್ ಲೈನ್ ಪರ್ಮಿಟ್ ಅಗತ್ಯವಿದೆ. ಇಲ್ಲಿ ಪ್ರವಾಸ ಮಾಡಲು ವಿಶೇಷ ಅನುಮತಿ ಬೇಕಾಗಿದೆ.
Published On - 10:42 pm, Sun, 18 December 22