AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಅನುಮತಿ ಪಡೆದು ಭೇಟಿ ನೀಡಬೇಕಾದ ಭಾರತದ 6 ಪ್ರವಾಸಿ ತಾಣಗಳು

ದೇಶದ ಈ 6 ರಾಜ್ಯಗಳಲ್ಲಿನ ಪ್ರವಾಸಿತಾಣಗಳನ್ನು ವೀಕ್ಷಿಸಲು ನೀವು ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು.

TV9 Web
| Updated By: ವಿವೇಕ ಬಿರಾದಾರ|

Updated on:Dec 18, 2022 | 10:43 PM

Share
ದೇಶದ ಯಾವುದೇ ಪ್ರವಾಸಿತಾಣಗಳಿಗೆ ಭೇಟಿ ನೀಡಲು ಅನುಮತಿ ಬೇಡ ಎಂದು ತಿಳಿದಿದ್ದರೆ ಅದು ತಪ್ಪು. ಏಕೆಂದರೆ ದೇಶದ ಈ ಕೆಲವು ಪ್ರವಾಸಿತಾಣಗಳಿಗೆ ಭೇಟಿ ನೀಡಲು ನೀವು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಹೌದು ಭದ್ರತಾ ಕಾರಣಗಳಿಂದಾಗಿ ಭಾರತದ ಕೆಲವು ಸ್ಥಳಗಳಿಗೆ ವಿಶೇಷ ಅನುಮತಿಯ ಅಗತ್ಯವಿರುತ್ತದೆ.

6 places in india where indians require special permission to travel

1 / 7
ಅರುಣಾಚಲ ಪ್ರದೇಶ: ಈಶಾನ್ಯ ರಾಜ್ಯ ಅರುಣಚಲ ಪ್ರದೇಶ ಚೀನಾ, ಭೂತಾನ್ ಮತ್ತು ಮ್ಯಾನ್ಮಾರ್​​​ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇಲ್ಲಿಗೆ ಭೇಟಿ ನೀಡಲು ಕೋಲ್ಕತ್ತಾ, ಶಿಲ್ಲಾಂಗ್, ಗುವಾಹಟಿ, ದೆಹಲಿ ನಗರಗಳಿಂದ, ಅರುಣಾಚಲ ಪ್ರದೇಶದ ಆಯುಕ್ತರಿಂದ ಪರವಾನಿಗೆ ಪಡೆಯಬೇಕು. ರಾಜ್ಯದ ಕೆಲವು ಸಂರಕ್ಷಿತ ಪ್ರದೇಶಗಳಿಗೆ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ ಸುಮಾರು 100 ರೂಪಾಯಿ ಶೂಲ್ಕದೊಂದಿಗೆ ಸುಮಾರು 30 ದಿನಗಳವರೆಗೆ ಮಾನ್ಯತೆ ನೀಡುತ್ತದೆ.

6 places in india where indians require special permission to travel

2 / 7
6 places in india where indians require special permission to travel

ನಾಗಾಲ್ಯಾಂಡ್ ಅನೇಕ ಬುಡಕಟ್ಟುಗಳಿಗೆ ನೆಲೆಯಾಗಿದೆ. ಈ ರಾಜ್ಯವು ಮ್ಯಾನ್ಮಾರ್‌ನೊಂದಿಗೆ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ. ಇದು ಸೂಕ್ಷ್ಮ ಪ್ರದೇಶವಾಗಿದ್ದು, ಪ್ರವಾಸಿಗರು ದೆಹಲಿ, ಕೋಲ್ಕತ್ತಾ, ಕೊಹಿಮಾ, ದಿಮಾಪುರ್, ಶಿಲ್ಲಾಂಗ್ ಮತ್ತು ಮೊಕೊಕ್‌ಚುಂಗ್‌ನ ಡೆಪ್ಯೂಟಿ ಕಮಿಷನರ್‌ನಿಂದ ಇನ್ನರ್ ಲೋನ್ ಅನುಮತಿಯನ್ನು (ILP) ಪಡೆಯಬೇಕು.

3 / 7
6 places in india where indians require special permission to travel

ಮಿಜೋರಾಂ ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ರಾಜ್ಯ ಹಲವಾರು ಸ್ಥಳೀಯ ಬುಡಕಟ್ಟುಗಳಿಗೆ ನೆಲೆಯಾಗಿದೆ. ಸಿಲ್ಚಾರ್, ಕೋಲ್ಕತ್ತಾ, ಶಿಲ್ಲಾಂಗ್, ದೆಹಲಿ, ಗುವಾಹಟಿಯಿಂದ ಮಿಜೋರಾಂ ಸರ್ಕಾರದ ಸಂಪರ್ಕ ಅಧಿಕಾರಿಯಿಂದ ಇನ್ನರ್ ಲೋನ್ ಅನುಮತಿಯನ್ನು (ILP) ಪಡೆಯಬೇಕು. ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ, ಐಜ್ವಾಲ್‌ನ ಲೆಂಗ್‌ಪುಯಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಭದ್ರತಾ ಅಧಿಕಾರಿಯಿಂದ ವಿಶೇಷ ಪಾಸ್ ತೆಗೆದುಕೊಳ್ಳಬಹುದು.

4 / 7
6 places in india where indians require special permission to travel

ಲಕ್ಷದ್ವೀಪ ಒಂದು ಸುಂದರವಾದ ನಡುಗಡ್ಡೆ. ಜೀವನದಲ್ಲಿ ಒಮ್ಮೆಯಾದರು ಭೇಟಿ ನೀಡಲೇಬೇಕು. ಈ ನಗರ ಕಡಲತೀರಗಳು ಮತ್ತು ಆಕಾಶ ನೀಲಿ ನೀರು ಮತ್ತು ರುಚಿಕರವಾದ ಆಹಾರಕ್ಕಾಗಿ ಹೆಸರುವಾಸಿಯಾಗಿದೆ. ಈ ಕೇಂದ್ರಾಡಳಿತ ಪ್ರದೇಶವನ್ನು ಪ್ರವೇಶಿಸಲು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಮತ್ತು ವಿಶೇಷ ಪರವಾನಗೆ ಅಗತ್ಯವಿದೆ.

5 / 7
6 places in india where indians require special permission to travel

ಹಿಮಾಲಯದ ಹೆಬ್ಬಾಗಿಲು, ಸಿಕ್ಕಿಂ ಸುಂದರವಾದ ಹುಲ್ಲುಗಾವಲುಗಳು, ರುಚಿಕರವಾದ ಪಾಕಪದ್ಧತಿಗಳು, ಅನೇಕ ಮಠಗಳು, ಸ್ಫಟಿಕ ಸರೋವರಗಳು ಭೂಮಿಯಾಗಿದೆ. ಭಾರತದ ಈಶಾನ್ಯ ಭಾಗದಲ್ಲಿರುವ ಚಿಕ್ಕ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂನ ತ್ಸೋಮ್ಗೊ ಬಾಬಾ ಮಂದಿರ ಟ್ರಿಪ್, ಸಿಂಗಲಿಲಾ ಟ್ರೆಕ್, ನಾಥ್ಲಾ ಪಾಸ್, ಝೋಂಗ್ರಿ ಟ್ರೆಕ್, ತಂಗು-ಚೋಪ್ಟಾ ವ್ಯಾಲಿ ಟ್ರಿಪ್, ಯುಮೆಸಾಮ್ಡಾಂಗ್, ಯುಮ್ಥಾಂಗ್ ಮತ್ತು ಝೀರೋ ಪಾಯಿಂಟ್ ಟ್ರಿಪ್ ಮತ್ತು ಗುರುದೋಗ್ಮಾರ್ ಸರೋವರ ವೀಕ್ಷಿಸಲು ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಯಿಂದ ಅನುಮತಿಯನ್ನು ನೀಡಲಾಗುತ್ತದೆ ಮತ್ತು ಬಾಗ್ಡೋಗ್ರಾ ವಿಮಾನ ನಿಲ್ದಾಣ ಮತ್ತು ರಂಗ್‌ಪೋಚೆಕ್‌ಪೋಸ್ಟ್‌ನಲ್ಲಿ ಪಡೆಯಬಹುದು.

6 / 7
6 places in india where indians require special permission to travel

ಜಮ್ಮು ಮತ್ತು ಕಾಶ್ಮೀರನ ಸುಂದರವಾದ ಕಣಿವೆ ಲಾಡಾಖ್​. ಲಡಾಖ್​ನ ನುಬ್ರಾ ಕಣಿವೆ, ಖರ್ದುಂಗ್ ಲಾ ಪಾಸ್, ತ್ಸೋ ಮೊರಿರಿ ಲೇಕ್, ಪ್ಯಾಂಗೊಂಗ್ ತ್ಸೋ ಲೇಕ್, ದಹ್, ಹನು ವಿಲೇಜ್, ನ್ಯೋಮಾ, ತುರ್ತುಕ್, ಡಿಗರ್ ಲಾ ಮುಂತಾದ ಸ್ಥಳಗಳಿಗೆ ಹೋಗಲು ಇನ್ನರ್‌ ಲೈನ್ ಪರ್ಮಿಟ್ ಅಗತ್ಯವಿದೆ. ಇಲ್ಲಿ ಪ್ರವಾಸ ಮಾಡಲು ವಿಶೇಷ ಅನುಮತಿ ಬೇಕಾಗಿದೆ.

7 / 7

Published On - 10:42 pm, Sun, 18 December 22

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು