ಸಕ್ಕರೆ ನಾಡು ಮಡ್ಯದಲ್ಲಿ ಮೊದಲ ಬಾರಿಗೆ ಕೃಷಿ ಕ್ರೀಡಾಕೂಟ; ಎಲ್ಲರ ಗಮನ ಸೆಳೆದ ಕಬ್ಬು ಕಟಾವು ಚಾಲೆಂಜ್

ಕಿರಣ್ ಹನುಮಂತ್​ ಮಾದಾರ್

Updated on: Oct 05, 2024 | 7:16 PM

ಈ ಬಾರಿ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಮಂಡ್ಯ ಜಿಲ್ಲಾಡಳಿತ ತಯಾರಿ ಕೂಡ ಮಾಡುತ್ತಿದೆ. ಈ ನಡುವೆ ಸಮ್ಮೇಳನವನ್ನ ಪ್ರಚಾರ ಪಡಿಸಲು ವಿವಿಧ ಸ್ವರ್ಧೆಗಳನ್ನ ಕೂಡ ಏರ್ಪಡಿಸಲಾಗುತ್ತಿದೆ. ಇದೇ ಮೊದಲ ಬಾರಿ ಕಬ್ಬು ಕಟಾವು ಸ್ವರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ಕಬ್ಬು ಕಟಾವು ಸ್ವರ್ಧೆ ಎಲ್ಲರ ಗಮನ ಸೆಳೆದಿದ್ದು, ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

1 / 6
ಸಕ್ಕರೆ ನಗರಿ ಮಂಡ್ಯದಲ್ಲಿ ಈ ಬಾರಿ ಡಿಸೆಂಬರ್​ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನವನ್ನ ಆಯೋಜನೆ ಮಾಡಲಾಗಿದೆ. ಡಿಸೆಂಬರ್ 21, 22, 23 ರಂದು ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನವನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಲು ಮಂಡ್ಯ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್​ ಈಗಿನಿಂದಲೇ ಎಲ್ಲ ರೀತಿಯ ತಯಾರಿ ಮಾಡುತ್ತಿದೆ.

ಸಕ್ಕರೆ ನಗರಿ ಮಂಡ್ಯದಲ್ಲಿ ಈ ಬಾರಿ ಡಿಸೆಂಬರ್​ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನವನ್ನ ಆಯೋಜನೆ ಮಾಡಲಾಗಿದೆ. ಡಿಸೆಂಬರ್ 21, 22, 23 ರಂದು ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನವನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಲು ಮಂಡ್ಯ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್​ ಈಗಿನಿಂದಲೇ ಎಲ್ಲ ರೀತಿಯ ತಯಾರಿ ಮಾಡುತ್ತಿದೆ.

2 / 6

ಸಮ್ಮೇಳನವನ್ನ ಹೆಚ್ಚು ಪ್ರಚಾರ ಪಡಿಸಿ, ಜನರನ್ನ ಆಕರ್ಷಿಸಲು ಈಗಿನಿಂದಲೇ ಎಲ್ಲ ಸ್ವರ್ಧೆಗಳನ್ನ ಆಯೋಜನೆ ಮಾಡುತ್ತಿದೆ. ಅದರಲ್ಲೂ ಮಂಡ್ಯ ಅಂದರೆ ಕಬ್ಬಿಗೆ ಫೇಮಸ್. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕಟಾವು ಚಾಲೆಂಜ್ ಅನ್ನ ಏರ್ಪಡಿಸಿತ್ತು.

3 / 6

ಜಿಲ್ಲೆಯ ಮದ್ದೂರು ತಾಲೂಕಿನ ಕಾರಕಹಳ್ಳಿ ಗ್ರಾಮದ ಜಮೀನುವೊಂದರಲ್ಲಿ ಕೃಷಿ ಕ್ರೀಡಾಕೂಟವನ್ನ ಆಯೋಜನೆ ಮಾಡಲಾಗಿತ್ತು. ಬಾ ಗುರು ಕಬ್ಬು ಕಡಿ ಸ್ವರ್ಧೆ ಎಲ್ಲರ ಗಮನ ಸೆಳೆದಿತ್ತು. ಈ ಸ್ಪರ್ಧೆಯಲ್ಲಿ 18 ವರ್ಷ ಮೇಲ್ಪಟ್ಟ ಜನರಿಗೆ ಅವಕಾಶವಿತ್ತು.

4 / 6

ಒಂದು ತಂಡದಲ್ಲಿ ಆರು ಯುವಕರಿಗೆ ಅವಕಾಶ ನೀಡಲಾಗಿತ್ತು. 15 ನಿಮಿಷಗಳ ಕಾಲಾವಕಾಶ ನೀಡಿ ಇದರಲ್ಲಿ ಯಾರು ಹೆಚ್ಚು ಕಬ್ಬು ಕಡಿಯುತ್ತಾರೋ ಆ ತಂಡಕ್ಕೆ ಬಹುಮಾನವನ್ನ ಸಹ ಇಡಲಾಗಿತ್ತು. ಮದ್ದೂರು ತಾಲೂಕಿನ ವಿವಿಧ ಗ್ರಾಮದ ಎಂಟು ಯುವಕರ ತಂಡ ಈ ಚಾಲೆಂಜ್ ನಲ್ಲಿ ಭಾಗವಹಿಸಿದ್ರು.

5 / 6

ಸ್ವರ್ಧೆಯಲ್ಲಿ ಗೆದ್ದ ತಂಡ ನಗದು ಹಾಗೂ ಪ್ರಶಸ್ತಿ ಪತ್ರವನ್ನ ಕೂ ನೀಡಲಾಗಿತ್ತು. ಹಳ್ಳಿ ಯುವಕರು ಸಹ ಈ ಸ್ವರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

6 / 6

ಒಟ್ಟಾರೆ ಇದೇ ಮೊದಲ ಬಾರಿ ಆಯೋಜನೆ ಮಾಡಿದ್ದ ಕಬ್ಬು ಕಟಾವು ಸ್ವರ್ಧೆ ಎಲ್ಲರ ಗಮನ ಸೆಳೆದಿತ್ತು. ಯುಕವರು ಕೂಡ ಸಾಕಷ್ಟು ಉತ್ಸಹಕ್ಕೆ ಸ್ವರ್ಧೆಯಲ್ಲಿ ಪಾಲ್ಗೊಂಡು ಕಬ್ಬು ಕಟಾವು ಮಾಡಿದರು.

Loading...
Unable to load recommendations.
Follow Us