
ಅಮೆರಿಕಾದ ಲಾಸ್ ಏಂಜಲೀಸ್ ಸಿಟಿ ಹಾಲ್ ತನ್ನ ಮೊದಲ ದೀಪಾವಳಿ ಆಚರಣೆಯನ್ನು ಆಯೋಜಿಸುವ ಮೂಲಕ ಐತಿಹಾಸಿಕ ಘಟ್ಟವನ್ನು ದಾಖಲಿಸಿದೆ.

ಇದು ಭಾರತ ಮತ್ತು ಅಮೆರಿಕ ದೇಶಗಳ ನಡುವಿನ ಏಕತೆ ಮತ್ತು ಸಾಂಸ್ಕೃತಿಕ ಸೌಹಾರ್ದತೆಯ ಸುಂದರ ಸಂಕೇತವಾಗಿದೆ.

ಭಾರತೀಯ ಮೂಲದ ನಗರ ಪರಿಷತ್ ಸದಸ್ಯೆ ನಿತ್ಯಾ ರಮನ್ ಅವರು ಲಾಸ್ ಏಂಜಲೀಸ್‌ನ ಭಾರತದ ರಾಯಭಾರ ಕಚೇರಿಯ ಸಹಯೋಗದಲ್ಲಿ ಈ ಹಬ್ಬವನ್ನು ಆಯೋಜಿಸಿದ್ದು,ಈ ಕಾರ್ಯಕ್ರಮವು ಸಾಂಸ್ಕೃತಿಕ ಸೌಹಾರ್ದತೆ ಮತ್ತು ಏಕತೆಯನ್ನು ಉತ್ತೇಜಿಸಿತು.

ಕಾರ್ಯಕ್ರಮದಲ್ಲಿ ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಹಾಗೂ ಪ್ರಸ್ತುತ ಅಮೆರಿಕದ ಭಾರತ ರಾಯಭಾರಿ ಶ್ರೀ ಎರಿಕ್ ಗಾರ್ಸೆಟ್ಟಿ ಸೇರಿದಂತೆ ಪ್ರಮುಖ ಭಾರತೀಯ ವಲಸೆ ನಾಯಕರು ಹಾಗೂ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಭಾರತೀಯ ಸಂಗೀತ ಮತ್ತು ನೃತ್ಯದ ಉಜ್ವಲ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಜೊತೆಗೆ ದೀಪ ಬೆಳಗಿಸುವ ಧಾರ್ಮಿಕ ವಿಧಿ ನೆರವೇರಿಸಲಾಯಿತು.

ಭಾರತೀಯ ನೃತ್ಯ ಹಾಗೂ ಸಂಗೀತ ಪ್ರದರ್ಶನ ಅಮೆರಿಕಾದ ಲಾಸ್ ಏಂಜಲೀಸ್ನಲ್ಲಿ ಮೊಳಗಿದ್ದು, ಈ ಕಾರ್ಯಕ್ರಮವು ಸಾಂಸ್ಕೃತಿಕ ಪರಸ್ಪರ ಅರಿವು ಮತ್ತು ಸ್ನೇಹವನ್ನು ಉತ್ತೇಜಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
Published On - 3:43 pm, Wed, 22 October 25