AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL Mega Auction 2026: ಈ ದಿನದಂದು ನಡೆಯಲಿದೆ ಡಬ್ಲ್ಯುಪಿಎಲ್ ಮೆಗಾ ಹರಾಜು

WPL 2026 Mega Auction: ಮಹಿಳಾ ಪ್ರೀಮಿಯರ್ ಲೀಗ್‌ನ 2026 ರ ನಾಲ್ಕನೇ ಆವೃತ್ತಿಯ ಮೆಗಾ ಹರಾಜು ನವೆಂಬರ್ 26-27 ರಂದು ನಡೆಯುವ ಸಾಧ್ಯತೆ ಇದೆ. ಐಪಿಎಲ್ ಮಾದರಿಯಲ್ಲೇ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಮೆಗಾ ಹರಾಜಿನಲ್ಲಿ 90 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಫ್ರಾಂಚೈಸಿಗಳು ನವೆಂಬರ್ 5 ರೊಳಗೆ ಆಟಗಾರ್ತಿಯರ ಉಳಿಸಿಕೊಳ್ಳುವ ಪಟ್ಟಿಯನ್ನು ಸಲ್ಲಿಸಬೇಕು. ಉಳಿಸಿಕೊಂಡ ಆಟಗಾರ್ತಿಯರ ವೆಚ್ಚ ಮತ್ತು ಹೊಸ ಆಟಗಾರ್ತಿಯರ ಖರೀದಿಯ ತಂಡಗಳ ತಂತ್ರ ಪ್ರಮುಖವಾಗಲಿದೆ.

ಪೃಥ್ವಿಶಂಕರ
|

Updated on:Oct 22, 2025 | 7:26 PM

Share
ಮಹಿಳಾ ಪ್ರೀಮಿಯರ್ ಲೀಗ್​ನ ನಾಲ್ಕನೇ ಆವೃತ್ತಿಗೆ ಸಂಬಂಧಿಸಿದಂತೆ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ. 2026 ರಲ್ಲಿ ನಡೆಯುವ ಈ ಮಹಿಳಾ ಲೀಗ್​ನ ಮೆಗಾ ಹರಾಜು ಮುಂದಿನ ತಿಂಗಳು ಅಂದರೆ ನವೆಂಬರ್​ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಇದು ಈ ಟೂರ್ನಿಯ ನಾಲ್ಕನೇ ಆವೃತ್ತಿಯಾಗಿರುವ ಕಾರಣ ಈ ಟೂರ್ನಮೆಂಟ್‌ಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಐಪಿಎಲ್‌ನಂತೆ ಮೆಗಾ ಹರಾಜು ಪ್ರಕ್ರಿಯೆ ಇರುತ್ತದೆ ಎಂದು ಹೇಳಲಾಗುತ್ತಿದೆ.

1 / 6
ಮಾಧ್ಯಮ ವರದಿಗಳ ಪ್ರಕಾರ, ಮೆಗಾ ಹರಾಜು ಪ್ರಕ್ರಿಯೆಯು ಮುಂದಿನ ತಿಂಗಳು, ಅಂದರೆ ನವೆಂಬರ್ 26 ಅಥವಾ 27 ರಂದು ನಡೆಯುವ ಸಾಧ್ಯತೆಯಿದೆ. ಈ ಮೊದಲು, ಈ ದಿನಾಂಕವನ್ನು ನವೆಂಬರ್ 26 ಮತ್ತು ನವೆಂಬರ್ 29 ರ ನಡುವೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ಈ ದಿನಾಂಕವನ್ನು ನವೆಂಬರ್ 26 ಮತ್ತು 27 ಕ್ಕೆ ಬದಲಾಯಿಸಲಾಗಿದೆ. ಆದಾಗ್ಯೂ ಮೆಗಾ ಹರಾಜು ಪ್ರಕ್ರಿಯೆಯು ಒಂದೇ ದಿನದಲ್ಲಿ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

2 / 6
ಮೆಗಾ ಹರಾಜು ದೆಹಲಿಯ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಈ ವರ್ಷ ಹೊಸ ತಂಡ ಪ್ರವೇಶಿಸುತ್ತದೆ ಎಂಬ ಮಾತು ಕೇಳಿಬಂದಿತ್ತು. ಆದಾಗ್ಯೂ, ಅದು ನಡೆಯುತ್ತಿರುವಂತೆ ಕಾಣುತ್ತಿಲ್ಲ. ಆದ್ದರಿಂದ, ನಾಲ್ಕನೇ ಸೀಸನ್‌ನಲ್ಲಿ ಕೇವಲ ಐದು ತಂಡಗಳು ಮಾತ್ರ ಮೈದಾನಕ್ಕಿಳಿಯುತ್ತವೆ. ಮೊದಲ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ, ಎರಡನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮೂರನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

3 / 6
ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಹರಾಜಿನ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಆದರೆ ಹರಾಜು ಪ್ರಕ್ರಿಯೆಯು ಒಂದೇ ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು 5 ತಂಡಗಳಿವೆ. ಹೀಗಾಗಿ ಇದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ಮೆಗಾ ಹರಾಜಿನಲ್ಲಿ ಸುಮಾರು 90 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಹೀಗಾಗಿ ಎಲ್ಲಾ 5 ಫ್ರಾಂಚೈಸಿಗಳು ನವೆಂಬರ್ 5 ರೊಳಗೆ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.

4 / 6
ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರ್ತಿಯರ ಬಗ್ಗೆಗಿನ ನಿಯಮವನ್ನು ಪ್ರಕಟಿಸಲಾಗಿದ್ದು, ಅದರಂತೆ ಮೊದಲನೇಯ ಆಟಗಾರ್ತಿಗೆ 3.5 ಕೋಟಿ ರೂ., ಎರಡನೇ ಆಟಗಾರ್ತಿಗೆ 2.5 ಕೋಟಿ ರೂ., ಮೂರನೇ ಆಟಗಾರ್ತಿಗೆ 1.75 ಕೋಟಿ ರೂ., ನಾಲ್ಕನೇಆಟಗಾರ್ತಿಗೆ 1 ಕೋಟಿ ರೂ. ಮತ್ತು ಐದನೇ ಆಟಗಾರ್ತಿಗೆ 50 ಲಕ್ಷ ರೂ. ಮೊತ್ತವನ್ನು ನಿಗದಿಪಡಿಸಲಾಗಿದೆ.

5 / 6
ಅಂದರೆ, ತಂಡದಲ್ಲಿ ಐದು ಆಟಗಾರ್ತಿಯರನ್ನು ಉಳಿಸಿಕೊಂಡರೆ, ಅದಕ್ಕೆ 9.25 ಕೋಟಿ ರೂ. ವೆಚ್ಚವಾಗುತ್ತದೆ. ಹೀಗಾಗಿ ಉಳಿದ ಆಟಗಾರ್ತಿಯರನ್ನು ಖರೀದಿಸಲು ಫ್ರಾಂಚೈಸಿ ಬಳಿ 5.75 ಕೋಟಿ ರೂ. ಮೊತ್ತ ಉಳಿಯಲಿದೆ. ಈಗ ಫ್ರಾಂಚೈಸಿ ಯಾವ ಆಟಗಾರ್ತಿಯರನ್ನು ಉಳಿಸಿಕೊಳ್ಳುತ್ತದೆ ಮತ್ತು ಯಾರನ್ನು ಬಿಡುಗಡೆ ಮಾಡುತ್ತದೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿರುತ್ತದೆ.

6 / 6

Published On - 7:26 pm, Wed, 22 October 25