ತುಳಸಿ ಎಲೆಗಳು: ಬಾಯಿಯಿಂದ ಬರುವ ದುರ್ವಾಸನೆಯಿಂದ ನೀವು ತೊಂದರೆಗೀಡಾಗಿದ್ದರೆ, ನೀವು ಪ್ರತಿದಿನ ಬೆಳಿಗ್ಗೆ ತುಳಸಿ ಎಲೆಗಳನ್ನು ತಿನ್ನಬೇಕು. ತಜ್ಞರ ಪ್ರಕಾರ, ಇದರಲ್ಲಿರುವ ಔಷಧೀಯ ಗುಣಗಳು ದವಡೆಯಲ್ಲಿನ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ ಮತ್ತು ಬಾಯಿಯನ್ನು ತಾಜಾವಾಗಿರಿಸುತ್ತದೆ.
ಕರಿಬೇವಿನ ಎಲೆಗಳು: ಹೆಚ್ಚಿನ ಕೊಲೆಸ್ಟ್ರಾಲ್‌ನಿಂದ ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತ ಉಂಟಾಗಬಹುದು. ವರದಿಗಳ ಪ್ರಕಾರ, ಕರಿಬೇವಿನ ಎಲೆಗಳ ಸೇವನೆಯು ಹೆಚ್ಚಿದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಪ್ರಯೋಜನಕಾರಿ.
ಬೆಳ್ಳುಳ್ಳಿ ಎಲೆಗಳು: ಭಾರತದಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ವರದಿಗಳ ಪ್ರಕಾರ, ಕ್ಯಾನ್ಸರ್ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಬೆಳ್ಳುಳ್ಳಿ ಎಲೆಗಳನ್ನು ಸೇವಿಸಬಹುದು. ಇದು ಕರುಳಿನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳಲ್ಲಿ ಬಹಿರಂಗವಾಗಿದೆ.
ಜಿನ್ಸೆಂಗ್ ಎಲೆಗಳು: ಪ್ರಸ್ತುತ ಹೆಚ್ಚಿನ ಜನರು ಮೂತ್ರಪಿಂಡ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದಾರೆ. ಮೂತ್ರಪಿಂಡದ ಆರೋಗ್ಯಕ್ಕಾಗಿ ನೀವು ಜಿನ್ಸೆಂಗ್ ಎಲೆಗಳನ್ನು ಸೇವಿಸಬಹುದು. ಇದು ಪ್ರಯೋಜನಕಾರಿ ಎನ್ನುತ್ತವೆ ವರದಿಗಳು.
ಬೇವಿನ ಎಲೆಗಳು: ಮಧುಮೇಹ ರೋಗಿಗಳಿಗೆ ಬೇವಿನ ಎಲೆಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿವೆ ಎನ್ನುತ್ತವೆ ಅಧ್ಯಯನಗಳು.
Published On - 9:36 am, Sat, 9 April 22