G20 Summit: ಜಿ-20 ನಾಯಕರಿಗೆ ವಿಶೇಷ ಉಡುಗೊರೆ ನೀಡಿದ ಭಾರತ, ಇಲ್ಲಿದೆ ನೋಡಿ

|

Updated on: Sep 12, 2023 | 7:01 PM

ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ ವಿಶ್ವ ನಾಯಕರುಗಳಿಗೆ ಭಾರತದ ಸಾಂಸ್ಕೃತಿಯನ್ನು ಸಾರುವ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ, ಅವುಗಳು ಇಲ್ಲಿದೆ ನೋಡಿ.

1 / 9
ಇಡೀ ಜಗತ್ತೇ ಭಾರತದತ್ತ ನೋಡುವಂತೆ ಮಾಡಿದ 18ನೇ ಜಿ-20 ಶೃಂಗಸಭೆಗೆ ಭಾರತ ಸಾಕ್ಷಿಯಾಗಿತ್ತು.ದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ವಿಶ್ವದ ಜಿ-20 ನಾಯಕರು ಭಾಗವಹಿಸಿದರು. ಈ ಸಭೆಯಲ್ಲಿ ಅನೇಕ ವಿಚಾರಗಳು ಚರ್ಚೆ ನಡೆದಿದೆ. ಇದರ ಜತೆಗೆ ಭಾರತ ಪರಂಪರೆಯನ್ನು ತಿಳಿಸುವ ಕೆಲಸಗಳು ಕೂಡ ನಡೆದಿದೆ. ಇನ್ನು ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ ವಿಶ್ವ ನಾಯಕರುಗಳಿಗೆ ಭಾರತದ ಸಾಂಸ್ಕೃತಿಯನ್ನು ಸಾರುವ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ, ಅವುಗಳು ಇಲ್ಲಿದೆ ನೋಡಿ.

2 / 9
ಸಂದೂಕ್’ ಇದನ್ನು ಹಿಂದಿಯಲ್ಲಿ ನಿಧಿ ಪೆಟ್ಟಿಗೆ ಎಂದು ಕರೆಯಲಾಗುತ್ತದೆ. ಈ ಪೆಟ್ಟಿಗೆಯನ್ನು ಸಾಂಪ್ರದಾಯಿಕವಾಗಿ, ಗಟ್ಟಿಯಾದ ಹಳೆಯ ಮರ ಅಥವಾ ಲೋಹದಿಂದ ಮಾಡಲಾಗಿದೆ.  ಮೇಲ್ಭಾಗದಲ್ಲಿ ಮುಚ್ಚಳ, ಅಲಂಕಾರಗಳನ್ನು ಹೊಂದಿದೆ. ಇದು ಭಾರತೀಯ ಸಾಂಸ್ಕೃತಿಕ ಮತ್ತು ಜಾನಪದ ದಂತಕಥೆಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಜೊತೆಗೆ ಸೊಗಸಾದ ಕಲಾಕುಸುರಿ ಇದರಲ್ಲಿದೆ. ಈ ಸಂದೂಕ್ ಅನ್ನು ಶೀಶಮ್ (ಇಂಡಿಯನ್ ರೋಸ್​​ವುಡ್ ) ಬಳಸಿ ತಯಾರಿಸಲಾಗಿದೆ. ಇದನ್ನು ಜಿ-20ಗೆ ಬಂದ ಅತಿಥಿಗಳಿಗೆ ನೀಡಲಾಗಿದೆ.

3 / 9
ಕಾಶ್ಮೀರಿ ಕೇಸರಿ (ಪರ್ಷಿಯನ್ ಭಾಷೆಯಲ್ಲಿ ‘ಝಫ್ರಾನ್’, ಹಿಂದಿಯಲ್ಲಿ ‘ಕೇಸರ್’) ವಿಶ್ವದ ಅತ್ಯಂತ ವಿಶಿಷ್ಟ ಮತ್ತು ದುಬಾರಿ ಮಸಾಲೆಯಾಗಿದೆ. ಸಂಸ್ಕೃತಿಗಳು ಮತ್ತು ನಾಗರಿಕತೆಗಳಾದ್ಯಂತ, ಕೇಸರಿಯನ್ನು ಪಾಕಶಾಲೆ ಮತ್ತು ಔಷಧೀಯ ಮೌಲ್ಯಕ್ಕಾಗಿ ಬಳಸಲಾಗಿದೆ. ಕಾಶ್ಮೀರಿ ಕೇಸರಿ ವಿಶಿಷ್ಟತೆ ಮತ್ತು ಅಸಾಧಾರಣ ಗುಣಮಟ್ಟದಿಂದ ಕೂಡಿದ್ದು ಇದರ ಸುಗಂಧ, ಗಾಢವಾದ ಬಣ್ಣ ಮತ್ತು ಸಾಟಿಯಿಲ್ಲದ ಸಾಮರ್ಥ್ಯವು ಇದನ್ನು ವಿಶಿಷ್ಟವಾಗಿರಿಸುತ್ತದೆ. ಜಿ-20ಗೆ ಆಗಮಿಸಿದ ವಿಶ್ವ ನಾಯಕರಿಗೆ ನೀಡಲಾಗಿದೆ.

4 / 9
ಜಿ-20 ಶೃಂಗಸಭೆಗೆ ಬಂದ ಅತಿಥಿಗಳಿಗೆ ವಿಶೇಷವಾಗಿ ಪೆಕೊ ಡಾರ್ಜಿಲಿಂಗ್ ಮತ್ತು ನೀಲಗಿರಿ ಟೀ ದೇಶದ ವಿಶಿಷ್ಟ ಚಹಾಗಳನ್ನು ಕೂಡ ನೀಡಲಾಗಿದೆ. ಇದು ದೇಶದ ವಿಶಿಷ್ಟ ಚಹಾಗಳು. ಡಾರ್ಜಿಲಿಂಗ್ ಚಹಾವು ವಿಶ್ವದ ಅತ್ಯಂತ ಮೌಲ್ಯಯುತವಾದ ಚಹಾವಾಗಿದೆ. ನೀಲಗಿರಿ ಚಹಾವು ದಕ್ಷಿಣ ಭಾರತದ ಅತ್ಯಂತ ಅದ್ಭುತವಾದ ಪರ್ವತ ಶ್ರೇಣಿಯಿಂದ ಬರುತ್ತದೆ.

5 / 9
ಆಂಧ್ರಪ್ರದೇಶದ ಅರಕು ಕಣಿವೆಯಲ್ಲಿ ಸಾವಯವ ತೋಟಗಳಲ್ಲಿ ಬೆಳೆಯುವ ಅರಕು ಕಾಫಿ ಕೂಡ ಉಡುಗೊರೆಯಾಗಿ ನೀಡಲಾಗಿತ್ತು. ಈ ಕಾಫಿ ಬೀಜಗಳು ಕಣಿವೆಯ ಶ್ರೀಮಂತ ಮಣ್ಣು ಮತ್ತು ಸಮಶೀತೋಷ್ಣ ಹವಾಮಾನದ ಸಾರವನ್ನು ಹೊಂದಿವೆ.

6 / 9
ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯವಾಗಿರುವ ಸುಂದರಬನಗಳು, ಬಂಗಾಳ ಕೊಲ್ಲಿಯಲ್ಲಿ ಗಂಗಾ, ಬ್ರಹ್ಮಪುತ್ರ ಮತ್ತು ಮೇಘನಾ ನದಿಗಳ ಸಂಗಮದಿಂದ ರೂಪುಗೊಂಡ ಡೆಲ್ಟಾದಲ್ಲಿದೆ. ಜೇನುನೊಣಗಳ ಕಾಡು ಎಂದು ಪ್ರಸಿದ್ಧಿಯನ್ನು ಪಡೆದಿರುವ ಈ ಕಾಡು. ಸುಂದರಬನದ ಜೇನುತುಪ್ಪದ ವಿಶಿಷ್ಟ ಮತ್ತು ಸುವಾಸನೆ ಜೈವಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.

7 / 9
ಭಾರತಕ್ಕೆ ಕಾಶ್ಮೀರಿ ಪಶ್ಮಿನಾ ಶಾಲು  ಗೌರವ ಸೂಚಕವಾಗಿದ್ದು,  ‘ಪಾಶ್ಮ್’ ಎಂದರೆ ಪರ್ಷಿಯನ್ ಭಾಷೆಯಲ್ಲಿ ಉಣ್ಣೆ ಎಂದರ್ಥ. ಪ್ರಪಂಚದ ಅತ್ಯಂತ ವಿಶಿಷ್ಟವಾದ ಕ್ಯಾಶ್ಮೀರ್ ಮೇಕೆಯಿಂದ ತಯಾರಿಸಲಾಗಿದೆ. ಸುಂದರವಾದ ಕಸೂತಿ ಮಾಡಲಾಗಿದೆ. ನೋಡಲು ಕೂಡ ಆಕರ್ಷಕವಾಗಿದೆ. ಇದನ್ನು ಈ ಕೂಡ ಬೇರೆ ಬೇರೆ ದೇಶಗಳಿಂದ ಬಂದ ಜಿ-20 ಸದಸ್ಯ ನಾಯಕರಿಗೆ ನೀಡಲಾಗಿದೆ.

8 / 9
ಜಿಘ್ರಾನಾ ಇತ್ತರ್ ಸುಗಂಧ ದ್ರವ್ಯ ಉತ್ತರ ಪ್ರದೇಶದ ಕನೌಜ್‌ಯಲ್ಲಿ ತರಯಾರಿಸಲಾಗಿದೆ. ‘ಇತ್ತರ್’ (ಅಂದರೆ ‘ಸುಗಂಧ’) ಸಸ್ಯಶಾಸ್ತ್ರೀಯ ಮೂಲಗಳಿಂದ ಪಡೆದ ಸಾರಭೂತ ತೈಲವಾಗಿದೆ. ಇತ್ತರ್ ನಿಖರತೆ ಮತ್ತು ತಾಳ್ಮೆಗೆ ಸಂಕೇತವಾಗಿದೆ.

9 / 9
ಭಾರತದಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿ ಮಾಡಿದ ಖಾದಿಯನ್ನು ವಿಶ್ವ ನಾಯಕರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಖಾದಿ ಸ್ಕಾರ್ಫ್ ವಿಶ್ವ ನಾಯಕರಿಗೆ ನೀಡಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸಂಕೇತಗಳಲ್ಲಿ ಒಂದಾಗಿದೆ. 70% ಮಹಿಳೆಯರನ್ನು ಒಳಗೊಂಡಿರುವ ಭಾರತದ ಗ್ರಾಮೀಣ ಕುಶಲಕರ್ಮಿಗಳು, ಕೈಯಿಂದ ನೇಯ್ಗೆ ಮಾಡುತ್ತಿದ್ದು, ಖಾದಿ ಪ್ರಾಚೀನವಾಗಿದ್ದರೂ ಫ್ಯಾಷನ್ ಆಗಿ ಮಾರ್ಪಾಡಾಗಿದೆ.

Published On - 6:54 pm, Tue, 12 September 23