ಸೆಲೆಬ್ರಿಟಿಗಳ ಮನೆಯಲ್ಲಿ ಹೇಗಿತ್ತು ನೋಡಿ ಗಣೇಶ ಚತುರ್ಥಿ ಸಂಭ್ರಮ

Updated on: Sep 14, 2026 | 6:28 PM

ಗಣೇಶ ಚತುರ್ಥಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಚಿತ್ರರಂಗದ ಪ್ರಮುಖ ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ. ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ತಾರೆಯರ ಹಬ್ಬದ ಸಂಭ್ರಮದ ಸುಂದರ ಫೋಟೋಗಳು ಹಾಗೂ ವಿವರಣೆ ಇಲ್ಲಿದೆ.

1 / 9
ರಶ್ಮಿಕಾ ಮಂದಣ್ಣ ತಮ್ಮ ಮನೆಯಲ್ಲಿ ಗಣೇಶ ಮೂರ್ತಿಯನ್ನು ಕೈಯಲ್ಲಿ ಹಿಡಿದು, ತಮ್ಮ ಮುದ್ದಾದ ಸಾಕುನಾಯಿಯೊಂದಿಗೆ ನಗುಮೊಗದಿಂದ ಗಣೇಶ ಚತುರ್ಥಿಯ ಶುಭಾಶಯ ತಿಳಿಸಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ಮನೆಯಲ್ಲಿ ಗಣೇಶ ಮೂರ್ತಿಯನ್ನು ಕೈಯಲ್ಲಿ ಹಿಡಿದು, ತಮ್ಮ ಮುದ್ದಾದ ಸಾಕುನಾಯಿಯೊಂದಿಗೆ ನಗುಮೊಗದಿಂದ ಗಣೇಶ ಚತುರ್ಥಿಯ ಶುಭಾಶಯ ತಿಳಿಸಿದ್ದಾರೆ.

2 / 9

ನಟ ಧನಂಜಯ್ ತಮ್ಮ ಕುಟುಂಬದೊಂದಿಗೆ ಸಂಪ್ರದಾಯಿಕ ಉಡುಪಿನಲ್ಲಿ ಗಣೇಶ ಚತುರ್ಥಿ ಆಚರಿಸಿದ್ದಾರೆ. ಹೂವಿನ ಅಲಂಕಾರದ ನಡುವೆ ಮಗುವನ್ನು ಎತ್ತಿಕೊಂಡು ಸಂಭ್ರಮದ ಕ್ಷಣ ಹಂಚಿಕೊಂಡಿದ್ದಾರೆ.

3 / 9

ಸಂಪ್ರದಾಯಿಕ ಬಿಳಿ ಉಡುಪಿನಲ್ಲಿ ದೀಪ ಹಾಗೂ ಅದ್ಧೂರಿ ಹಿನ್ನೆಲೆಯಲ್ಲಿ ಚಿನ್ನದ ಬಣ್ಣದ ಗಣಪತಿ ವಿಗ್ರಹದ ಮುಂದೆ ಕುಳಿತು ಹನ್ಸಿಕಾ ಸಂಭ್ರಮಿಸಿದ್ದಾರೆ.

4 / 9

ಪ್ರತಿವರ್ಷದಂತೆ ಈ ಬಾರಿಯೂ ಶಿಲ್ಪಾ ಶೆಟ್ಟಿ ತಮ್ಮ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ದೀಪ ಬೆಳಗಿ, ಕೀರೀಟವಿಟ್ಟ ಸುಂದರ ಗಣಪತಿಗೆ ಭಕ್ತಿಯಿಂದ ತಿಲಕವಿಟ್ಟು ಪೂಜೆ ಸಲ್ಲಿಸಿದ್ದಾರೆ.

5 / 9

ಹಸಿರು ಸೀರೆಯಲ್ಲಿ ಕಳೆಗಟ್ಟಿರುವ ಐಶಾನಿ ಶೆಟ್ಟಿ, ಹೂವುಗಳಿಂದ ಅಲಂಕರಿಸಲ್ಪಟ್ಟ ಮುದ್ದಾದ ಗಣೇಶ ಮೂರ್ತಿ ಹಾಗೂ ಹಣತೆಯ ಮುಂದೆ ಕುಳಿತು ಸರಳವಾಗಿ ಹಬ್ಬವನ್ನು ಆಚರಿಸಿದ್ದಾರೆ.

6 / 9

ಗುಲಾಬಿ ಉಡುಪಿನಲ್ಲಿ ಕಂಗೊಳಿಸುತ್ತಿರುವ ನಮ್ರತಾ ಶಿರೋಡ್ಕರ್ ತಮ್ಮ ಪೂಜಾ ಕೋಣೆಯಲ್ಲಿ ಗಣೇಶ ಮೂರ್ತಿ ಹಾಗೂ ತಮ್ಮ ಸಾಕುನಾಯಿಗಳೊಂದಿಗೆ ಸರಳವಾಗಿ ಹಬ್ಬ ಆಚರಿಸಿದ್ದಾರೆ.

7 / 9

ಗುಲಾಬಿ-ಕಿತ್ತಳೆ ಬಣ್ಣದ ಸೀರೆಯಲ್ಲಿ ದೇವತೆಯಂತೆ ಕಂಗೊಳಿಸುತ್ತಿರುವ ವೈಷ್ಣವಿ ಗೌಡ, ಗೌರಿ-ಗಣೇಶ ವಿಗ್ರಹಗಳ ಮುಂದೆ ಕೈಮುಗಿದು ನಮಸ್ಕರಿಸುತ್ತಾ ಹಬ್ಬದ ಸಂಭ್ರಮ ಹಂಚಿಕೊಂಡಿದ್ದಾರೆ.

8 / 9

ನಟ ಕಿರಣ್ ರಾಜ್ ಸಂಪ್ರದಾಯಿಕ ಪಂಚೆ ತೊಟ್ಟು, ತಮ್ಮ ವಾಹನದ ಮುಂದೆ ಗಣೇಶ ಮೂರ್ತಿಯನ್ನು ಪವಿತ್ರ ವಸ್ತ್ರದಲ್ಲಿ ಹಿಡಿದು ಮನೆಗೆ ತರುತ್ತಿರುವ ಸುಂದರ ಕ್ಷಣ ಇಲ್ಲಿದೆ.

9 / 9

ಹಳದಿ ಬಣ್ಣದ ಸುಂದರ ಉಡುಪಿನಲ್ಲಿ ಮಿಂಚುತ್ತಿರುವ ತನಿಷಾ ಕುಪ್ಪಂಡ, ಹೂವು ಹಾಗೂ ಹಣ್ಣುಗಳಿಂದ ಅಲಂಕೃತಗೊಂಡ ಬೃಹತ್ ಗಣೇಶ ಮೂರ್ತಿಯ ಮುಂದೆ ನಿಂತು ಹಬ್ಬದ ಶುಭಾಶಯ ಕೋರಿದ್ದಾರೆ.

Published On - 6:23 pm, Mon, 14 September 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us