Happy Birthday Sundar Pichai: ಸುಂದರ್ ಪಿಚೈಗೆ ಹುಟ್ಟುಹಬ್ಬದ ಸಂಭ್ರಮ: ಗೂಗಲ್ ಸಿಇಓ ಬಗ್ಗೆ ಅಚ್ಚರಿ ಸಂಗತಿಗಳು ಇಲ್ಲಿವೆ

| Updated By: Vinay Bhat

Updated on: Jun 10, 2022 | 12:40 PM

Google CEO Sundar Pichai's 50th birthday: ವಿಶ್ವದ ನಂಬರ್ ವನ್ ಸರ್ಚ್ ಇಂಜಿನ್ Googleನ CEO ಸುಂದರ್ ಪಿಚೈ ಇಂದು, ಜೂನ್ 10 ರಂದು ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1972ನೇ ಇಸವಿಯ ಜೂನ್ 10ರಂದು ತಮಿಳುನಾಡಿನ ಮಧುರೈನಲ್ಲಿ ಜನಿಸಿದ ಸುಂದರ್ ಪಿಚೈ 2004ರಲ್ಲಿ ಗೂಗಲ್ ಸಂಸ್ಥೆಯ ಉದ್ಯೋಗಿಯಾಗಿ ಕೆಲಸ ಆರಂಭಿಸಿದರು.

1 / 7
ವಿಶ್ವದ ನಂಬರ್ ವನ್ ಸರ್ಚ್ ಇಂಜಿನ್ Googleನ CEO ಸುಂದರ್ ಪಿಚೈ ಇಂದು, ಜೂನ್ 10 ರಂದು ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1972ನೇ ಇಸವಿಯ ಜೂನ್ 10ರಂದು ತಮಿಳುನಾಡಿನ ಮಧುರೈನಲ್ಲಿ ಜನಿಸಿದ ಸುಂದರ್ ಪಿಚೈ 2004ರಲ್ಲಿ ಗೂಗಲ್ ಸಂಸ್ಥೆಯ ಉದ್ಯೋಗಿಯಾಗಿ ಕೆಲಸ ಆರಂಭಿಸಿದರು.

2 / 7
ಗೂಗಲ್ ಕ್ರೋಮ್, ಕ್ರೋಮ್ ಓಎಸ್, ಗೂಗಲ್ ಡ್ರೈವ್ ಸೇರಿದಂತೆ ಗೂಗಲ್ ನ ಇನ್ನಿತರ ಉತ್ಪನ್ನಗಳ ಸಾಫ್ಟ್ ವೇರ್ ವಿಭಾಗ ನಿರ್ವಹಣೆಯ ಮುಖ್ಯಸ್ಥನಾಗಿ ಕೆಲಸಕ್ಕೆ ಸೇರಿದ ಸುಂದರ್ ಪಿಚೈ, ಕೆಲಸಕ್ಕೆ ಸೇರಿದ 11 ವರ್ಷಗಳಲ್ಲಿ ಸಾಧಿಸಿದ್ದು ಅಪಾರ. ಇಂದು ಓರ್ವ ಅಂತರರಾಷ್ಟ್ರೀಯ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ ಅವರ ಸರಳ ಸ್ವಭಾವ ಎಲ್ಲರನ್ನೂ ವಿಶೇಷವಾಗಿ ಸೆಳೆಯುತ್ತದೆ.

3 / 7
ಸುಂದರ್ ಪಿಚೈ ತಂದೆ ಬ್ರಿಟಿಷ್ ಕಂಪನಿ ಜಿಇಸಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹತ್ತನೇ ತರಗತಿವರೆಗೆ ಚೆನ್ನೈನಲ್ಲೇ ಕಲಿತ ಸುಂದರ್ ಪಿಚೈ ಬಳಿಕ ಐಐಟಿ ಖಡಗ್ಪುರದಲ್ಲಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದರು. ಅತ್ಯಂತ ಮೇಧಾವಿಯಾಗಿರುವ ಪಿಚೈ ಯಾವತ್ತೂ ತನ್ನ ಬ್ಯಾಚ್ನ ಟಾಪರ್ ಆಗಿರುತ್ತಿದ್ದರು.

4 / 7
ಐಐಟಿಯಲ್ಲಿ ಶಿಕ್ಷಣ ಪೂರೈಸಿದ ಪಿಚೈ, ಮುಂದಿನ ಶಿಕ್ಷಣಕ್ಕಾಗಿ ಅಮೆರಿಕದ ಸ್ಯಾನ್ ಪೋರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಪಿಚೈ ಅವರು, ಅಮೆರಿಕಾಗೆ ತೆರಳಲು ತನ್ನ ತಂದೆ ಖರೀದಿಸಿದ್ದ ವಿಮಾನದ ಟಿಕೆಟ್ ಬೆಲೆ ಅವರ ಇಡೀ ಒಂದು ವರ್ಷದ ಸ್ಯಾಲರಿಯಾಗಿತ್ತೆಂಬ ವಿಚಾರವನ್ನು ತಿಳಿಸಿದ್ದರು.

5 / 7
ಗೂಗಲ್ ಸಿಇಓ ಸುಂದರ್ ಪಿಚೈ ಅವರ ಪೂರ್ಣ ಹೆಸರು ಪಿಚೈ ಸುಂದರ್ರಾಜನ್. ಇವರು ಮದುವೆಯಾಗಿದ್ದು ಅವರ ಕಾಲೇಜು ಗೆಳತಿ ಅಂಜಲಿ ಎಂಬುವವರನ್ನು. ಐಐಟಿ ಖರಗ್ ಪುರದಲ್ಲಿ ಪರಸ್ಪರ ಭೇಟಿಯಾದ ಅವರು ಸಹಪಾಠಿಗಳಾಗಿದ್ದರು. ನಂತರ ಅವರ ಗೆಳೆತನ ಗಾಢವಾಗುತ್ತಾ ಪ್ರೀತಿಗೆ ತಿರುಗಿ ವಿವಾಹವಾದರು.

6 / 7
ಸುಂದರ್ ಪಿಚೈ ಅವರಿಗೆ ಫುಟ್ ಬಾಲ್ ಹಾಗೂ ಕ್ರಿಕೆಟ್ ಆಡುವುದೆಂದರೆ ಪಂಚಪ್ರಾಣವಂತೆ. ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದು, ನನಗೆ ಈ ಎರಡೂ ಆಟಗಳೆಂದರೆ ಹುಚ್ಚುಪ್ರೀತಿ. ಇವುಗಳೊಟ್ಟಿಗೆ ಓದುವ ಹುಚ್ಚೂ ಇತ್ತು. ಕೈಗೆ ಏನೇ ಸಿಕ್ಕರೂ ಹಿಡಿದುಕೊಂಡು ಓದುತ್ತಿದ್ದೆ. ಸ್ನೇಹಿತರು, ಕ್ರಿಕೆಟ್, ಪುಸ್ತಕ ಇವೇ ನನ್ನ ಪಾಲಿಗೆ ಆಗಿನ ಸಂಪೂರ್ಣ ಜೀವನ. ಆದರೆ, ಅದು ಯಾವತ್ತೂ ನನಗೆ ಬೇಸರ ಕೊಟ್ಟಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

7 / 7
2015 ರ ಆಗಸ್ಟ್ 10ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕ ಮಾಡಲಾಯ್ತು. 2019ರಲ್ಲಿ ಅವರನ್ನು ಗೂಗಲ್ನ ಮಾತೃಸಂಸ್ಥೆ Alphabetನ ಸಿಇಒ ಹೊಣೆಯನ್ನೂ ವಹಿಸಲಾಯ್ತು. Alphabet ಸಿಇಒ ಆದ ಬಳಿಕ ಪಿಚೈ ಸ್ಯಾಲರಿ ಮತ್ತಷ್ಟು ಹೆಚ್ಚು ಮಾಡಲಾಯ್ತು. ಇಂದು ಅವರು ವಿಶ್ವದಲ್ಲೇ ಅತೀ ಹೆಚ್ಚು ಸ್ಯಾಲರಿ ಪಡೆಯುವ ಸಿಇಒ ಆಗಿ ಗುರುತಿಸಿಕೊಂಡಿಸಿದ್ದಾರೆ. 2020 ರಲ್ಲಿ ಸುಂದರ್ ಪಿಚೈ ಅವರ ಬೇಸಿಕ್ ಸ್ಯಾಲರಿಯೇ 15 ಕೋಟಿ ರೂಪಾಯಿ(20 ಲಕ್ಷ ಡಾಲರ್) ಆಗಿತ್ತು.

Published On - 12:40 pm, Fri, 10 June 22