Updated on: Jun 09, 2022 | 9:45 PM
‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು ಎರಡು ತಿಂಗಳು ಕಳೆಯುತ್ತಾ ಬಂದಿದೆ. ಈ ಚಿತ್ರದ ಶೂಟಿಂಗ್ ಹಾಗೂ ಪ್ರಚಾರದಲ್ಲಿ ಬ್ಯುಸಿ ಆಗಿದ್ದ ಯಶ್, ಸಿನಿಮಾ ತೆರೆಗೆ ಬಂದ ಬಳಿಕ ಕುಟುಂಬದ ಜತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ.
ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಕಂಡರೆ ಯಶ್ಗೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ ಅವರು. ಯಶ್ ಅವರು ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಜತೆ ಕನಕಪುರ ರಸ್ತೆಯಲ್ಲಿರುವ ಅನಿಮಲ್ ಪಾರ್ಕ್ಗೆ ತೆರಳಿದ್ದಾರೆ.
ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲರೂ ಗಿಳಿಯ ಜತೆ ಆಟ ಆಡುತ್ತಾ ಸಮಯ ಕಳೆದಿದ್ದಾರೆ.
ರಾಧಿಕಾ ಪಂಡಿತ್ ಅವರ ಮದುವೆ ನಂತರ ತೆರೆಗೆ ಬಂದಿದ್ದು ಕೇವಲ ಒಂದು ಚಿತ್ರ ಮಾತ್ರ. ಅವರು ನಟನೆಗೆ ಕಂಬ್ಯಾಕ್ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಈ ಆಸೆ ಯಾವಾಗ ಈಡೇರಲಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.