
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯ ರಾಮನಗರ ಜಿಲ್ಲೆಯ ಸುಪ್ರಸಿದ್ಧ ಪುಣ್ಯಕ್ಷೇತ್ರ. ರಾಜ್ಯದ ಮೂಲೆ ಮೂಲೆಗಳಿಂದ ಜನ ಆ ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಧಾರ್ಮಿಕ ಕ್ಷೇತ್ರವಾಗಿದ್ದರೂ ಮಕ್ಕಳ ಜ್ಞಾನಕ್ಕೆ ನೆರವಾಗಲು ನಿಂತಿರುವ ಆ ಜಾಗದಲ್ಲಿ ಈಗ ಹೊಸ ಪ್ರಪಂಚವನ್ನೇ ಸೃಷ್ಟಿ ಮಾಡಲಾಗಿದೆ. ಆ ಕುರಿತಾದ ಫೋಟೋಗಳು ಇಲ್ಲಿವೆ.

ಗೌಡಗೆರೆಯ ಚಾಮುಂಡೇಶ್ವರಿ ದೇವಾಲಯಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ದಂಡು ಆಗಮಿಸುತ್ತಿದೆ. ಆ ದೇವಿಯ ಪವಾಡವೋ ಮಹಿಮೆಯೋ, ಭಕ್ತರು ಅಂದುಕೊಂಡಿದ್ದೆಲ್ಲಾ ಘಟಿಸುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ದಿನಗಳೆದಂತೆ ಭಕ್ತರ ದಂಡು ದುಪ್ಪಟ್ಟಾಗುತ್ತಿದೆ.

ಹಾಗಾಗಿ ದೇವಸ್ಥಾನದಲ್ಲಿ ವಿಶೇಷವಾಗಿ ಏನಾದರು ಮಾಡಬೇಕು ಎಂಬ ಉದ್ದೇಶ ಚಾಮುಂಡೇಶ್ವರಿ ದೇವಸ್ಥಾನದ ಮಂಡಳಿಗೂ ಇತ್ತು. ಹೀಗಾಗಿ ತಂದೆ, ತಾಯಿ ಜೊತೆ ಬರುವ ಮಕ್ಕಳಿಗೆ ಏನಾದ್ರೂ ಒಂದು ವಿಶೇಷ ಸಂಗತಿ ಮಾಡಬೇಕು ಎಂದುಕೊಂಡ ಮಲ್ಲೇಶ್ ಗುರೂಜಿ, ಚಾಮುಂಡೇಶ್ವರಿ ಪಾದದ ಕೆಳಗೆ ಒಂದು ಇಡೀ ಜಗತ್ತನ್ನೇ ಸೃಷ್ಟಿ ಮಾಡಿದ್ದಾರೆ.

ಮಕ್ಕಳಿಗೆ ಇದು ಶೈಕ್ಷಣಿಕ ಸ್ಥಳವಾಗಬೇಕು ಎಂಬ ದೃಷ್ಟಿಕೋನದಿಂದ ಧಾರ್ಮಿಕ ಕ್ಷೇತ್ರವಾಗಿದ್ರೂ ವೈಜ್ಞಾನಿಕ ರೀತಿ, ನೀತಿಗಳ ಮಾದರಿಯನ್ನು ದೇವಸ್ಥಾನದಲ್ಲಿ ಸೃಷ್ಡಿ ಮಾಡಲಾಗಿದೆ. ಮಂಗಳ ಗ್ರಹ, ಚಂದ್ರಲೋಕ, ರಾಕೇಟ್ ಉಡಾವಣೆಯಿಂದ ಹಿಡಿದು ಭೌಗೋಳಿಕವಾಗಿ ಮಕ್ಕಳು ಕಲಿಯಬಹುದಾದ ಹಲವು ಆಚಾರ ವಿಚಾರವಳನ್ನು ದೇವಸ್ಥಾನದಲ್ಲಿ ಅಳವಡಿಕೆ ಮಾಡಲಾಗಿದೆ.

ಡಿಸಂಬರ್ 1ರಂದು ಚಾಮುಂಡೇಶ್ವರಿ ದೇವಾಸ್ಥಾನದಲ್ಲಿ ಲಕ್ಷ ದೀಪೋತ್ಸವ ನಡೆಯಲಿದ್ದು, ಕೇರಳದ ತಂಡವೊಂದು ವಿಶೇಷವಾಗಿ ಈ ಕಾರ್ಯಕ್ರಮ ನಡೆಸಿಕೊಡಲು ಬರುತ್ತಿದೆ. ದೇಶದ ಹಲವು ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಹೀಗಾಗಿ ಸರ್ವ ರೀತಿಯ ತಯಾರಿಗಳನ್ನು ದೇವಸ್ಥಾನದಲ್ಲಿ ಮಾಡಿಕೊಂಡಿದ್ದು, ಪೋಷಕರ ಜೊತೆ ಬರುವ ಮಕ್ಕಳು ಖುಷಿಯಾಗಲು ಒಂದು ರೀತಿಯ ಎಕ್ಸಿಬಿಷನ್ ಇಲ್ಲಿ ತೆರೆದಂತಾಗಿದೆ.

ಅಲ್ಲದೇ ಇಡೀ ದೇವಾಸ್ಥಾನದಲ್ಲಿ ಹಿಂದೂ ದೇವರ ವಿಗ್ರಹವೂ ಸೇರಿದಂತೆ ಅನೇಕ ಕಲಾಕೃತಿಗಳನ್ನು ಪಠಾಣ್ ಎನ್ನುವವರು ಇದರ ಕೆಲಸ ಮಾಡಿದ್ದು, ಹಿಂದೂ ಧರ್ಮದ ಅನುಸಾರ ಕೆಲ ನಿಯಮಗಳನ್ನು ಪಾಲಿಸಿ ವಿಗ್ರಹಗಳ ನಿರ್ಮಾಣ ಮಾಡಿದ್ದಾರೆ. ವರ್ಷ ವರ್ಷ ನಡೆಯುವ ಲಕ್ಷ ದೀಪೋತ್ಸವದ ಪ್ರತಿ ವರ್ಷವೂ ವಿಶೇಷವಾದುದ್ದನ್ನು ಮಾಡುವ ಚಾಮುಂಡೇಶ್ವರಿ ದೇವಾಲಯ ಈ ಬಾರಿ ಶಾಶ್ವತವಾಗಿರುವಂತಹ ಅನೇಕ ಕಲಾಕೃತಿಗಳನ್ನು ನಿರ್ಮಿಸಿ ಮಕ್ಕಳಿಗೆ ಉಚಿತವಾಗಿ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ.