ಅವಳಿ ಜವಳಿ ಆಕಳು ಕರುಗಳಿಗೆ ಅದ್ಧೂರಿಯಾಗಿ ತೊಟ್ಟಿಲು ಶಾಸ್ತ್ರ: ಮುದ್ದಾದ ಚಿತ್ರಗಳು ಇಲ್ಲಿವೆ

Edited By:

Updated on: Jan 06, 2026 | 1:26 PM

ಗದಗ ಜಿಲ್ಲೆಯ ರಾಮಗಿರಿ ಗ್ರಾಮದ ರೈತರೊಬ್ಬರು ಅವಳಿ ಆಕಳು ಕರುಗಳಿಗೆ ಅದ್ಧೂರಿ ತೊಟ್ಟಿಲು ಶಾಸ್ತ್ರ ನೆರವೇರಿಸುವ ಮೂಲಕ ಗಮನ ಸೆಳೆದಿದ್ದಾರೆ. ಹೂವು, ತಳಿರು ತೋರಣಗಳಿಂದ ಅಲಂಕೃತಗೊಂಡ ಮನೆಯಲ್ಲಿ, ಮಠಾಧೀಶರ ಸಮ್ಮುಖದಲ್ಲಿ ಕರುಗಳಿಗೆ ಶಿವ-ಬಸವ ಎಂದು ನಾಮಕರಣ ಮಾಡಲಾಯಿತು. ರೈತರ ಕುಟುಂಬದ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

1 / 5
ಮನೆಯಲ್ಲಿ ಹುಟ್ಟಿದ ಮಕ್ಕಳಿಗೆ ತೊಟ್ಟಿಲು ಕಾರ್ಯ ಮಾಡೋದು ಮಾಮೂಲು. ಆದ್ರೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಅವಳಿ ಜವಳಿ ಆಕಳು ಕರುಗಳಿಗೆ ಅದ್ಧೂರಿಯಾಗಿ ಮನೆಯವರು ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ. ಇದಕ್ಕೆ ನೂರಾರು ಗ್ರಾಮಸ್ಥರು ಕೂಡ ಸಾಕ್ಷಿಯಾಗಿದ್ದಾರೆ.

2 / 5
ಗ್ರಾಮದ ರೈತ ನಾಗರಾಜ್ ಮಡಿವಾಳರ ಮನೆಯಲ್ಲಿ ತೊಟ್ಟಿಲಿಗೆ ತೆಂಗಿನ ಗರಿ, ತಳಿರು ತೋರಣ, ಹೂವುಗಳಿಂದ ಶೃಂಗಾರ ಮಾಡಲಾಗಿದ್ದು, ಅಕ್ಷರಶಃ ಹಬ್ಬದ ವಾತಾವರಣ ಸ್ಥಳದಲ್ಲಿ ಮನೆ ಮಾಡಿತ್ತು. ಸಂಪ್ರದಾಯದಂತೆ ಮುದ್ದಾದ ಕರುಗಳನ್ನು ತೊಟ್ಟಿಲಿಗೆ ಹಾಕಿ ನೆರೆದಿದ್ದವರು ಸಂತಸಪಟ್ಟರು. ಮಠಾಧೀಶರು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

3 / 5
ಹೂವಿನಶಿಗ್ಲಿ ವಿರಕ್ತ ಮಠದ ಚನ್ನವೀರಮಹಾಸ್ವಾಮಿಗಳು, ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಡಾ. ವೈಜನಾಥ ಶಿವಲಿಂಗ ಮಹಾಸ್ವಾಮೀಜಿ ಕರುಗಳ ಕಿವಿಯಲ್ಲಿ ಹೆಸರು ಹೇಳುವ ಮೂಲಕ ನಾಮಕರಣ ನೆರವೇರಿಸಿಕೊಟ್ಟರು. ಮುದ್ದಾದ ಕರುಗಳಿಗೆ ಶಿವ-ಬಸವ ಅಂತ ನಾಮಕರಣ ಮಾಡಲಾಯ್ತು.

4 / 5
ಈ ಕರುಗಳಿಗೆ ಜನ್ಮ ನೀಡಿರುವ ಹಸುವಿಗೆ 15 ದಿನಗಳ ಹಿಂದೆ ಸೀಮಂತ ಕಾರ್ಯವನ್ನೂ ರೈತ ನಾಗರಾಜ್ ಮಡಿವಾಳ ನೆರವೇರಿಸಿದ್ದರು. ಹೀಗಾಗಿ ಅವುಗಳನ್ನ ತೊಟ್ಟಿಲಿಗೆ ಹಾಕುವ ಕಾರ್ಯವನ್ನೂ ಕುಟುಂಬಸ್ಥರು ಭರ್ಜರಿಯಾಗಿಯೇ ನಡೆಸಿ ಗಮನ ಸೆಳೆದಿದ್ದಾರೆ. ನೂರಾರು ಜನರನ್ನು ಆಹ್ವಾನಿಸಿ ಖುಷಿಪಟ್ಟಿದ್ದಾರೆ.

5 / 5
ನೆರೆದಿದ್ದ ಮಹಿಳೆಯರು ಕರುಗಳಿಗೆ ಆರತಿ ಎತ್ತಿ ಸಂಭ್ರಮಿಸಿದ್ದು, ರೈತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮಕ್ಕಳಿಗೇ ತೊಟ್ಟಿಲು ಶಾಸ್ತ್ರವನ್ನು ಸರಿಯಾಗಿ ಮಾಡದ ಈ ಕಾಲದಲ್ಲಿ, ಮನೆಯ ಕೊಟ್ಟಿಗೆಯಲ್ಲಿ ಕರುಗಳು ಹುಟ್ಟಿರೋದನ್ನು ಈ ಪರಿ ಸಂಭ್ರಮಿಸಿರೋದು ನಿಜಕ್ಕೂ ಮಾದರಿ ಎಂಬ ಮಾತುಗಳು ಕೇಳಿಬಂದಿವೆ.