Grand Vitara: ಅತ್ಯಾಕರ್ಷಕ ಮಿಡ್​ SUV ಕಾರು ಪರಿಚಯಿಸಿದ ಸುಜುಕಿ

| Updated By: ಝಾಹಿರ್ ಯೂಸುಫ್

Updated on: Jul 20, 2022 | 4:49 PM

Grand Vitara: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾವನ್ನು 6 ಮೊನೊಟೋನ್ ಬಣ್ಣಗಳಲ್ಲಿ ಮತ್ತು 3 ಡ್ಯುಯಲ್-ಟೋನ್ ಬಣ್ಣಗಳಲ್ಲಿ ಖರೀದಿಸಬಹುದು.

1 / 6
ಮಾರುತಿ ಸುಜುಕಿ ಹೊಸ ಗ್ರ್ಯಾಂಡ್ ವಿಟಾರಾದೊಂದಿಗೆ ಮಧ್ಯಮ ಗಾತ್ರದ SUV ವಿಭಾಗಕ್ಕೆ ಪ್ರವೇಶಿಸಿದೆ. ಈ ಕಾರು ಇತರ ಮಧ್ಯಮ ಗಾತ್ರದ SUV ಳಾದ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, MG ಆಸ್ಟರ್, ಟಾಟಾ ಹ್ಯಾರಿಯರ್ ವಾಹನಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

2 / 6
ಹೊಸ ಗ್ರ್ಯಾಂಡ್ ವಿಟಾರಾದ ಹಲವು ವೈಶಿಷ್ಟ್ಯಗಳು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್​ ನಂತೆ ಇರುವುದು ವಿಶೇಷ. ಎರಡೂ ಎಸ್‌ಯುವಿಗಳು ಸುಜುಕಿಯ ಗ್ಲೋಬಲ್ ಸಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ.  ಮಾರುತಿ ಸುಜುಕಿ ಬ್ರೆಜ್ಜಾ ಮತ್ತು ಎಸ್-ಕ್ರಾಸ್‌ಗಾಗಿಯೂ ಇದನ್ನು ಬಳಸಲಾಗುತ್ತಿದೆ. ಎಂಜಿನ್, ಗೇರ್ ಬಾಕ್ಸ್ ಸೇರಿದಂತೆ ಹಲವು ಅಂಶಗಳನ್ನು ಎರಡೂ ಎಸ್ ಯುವಿಗಳಲ್ಲಿ ಕಾಣಬಹುದಾಗಿದೆ.

3 / 6
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎರಡು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಇದು 1.5-ಲೀಟರ್ ಮೈಲ್ಡ್ ಹೈಬ್ರಿಡ್ ಎಂಜಿನ್ ಮತ್ತು ಹೊಸ 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಮೈಲ್ಡ್ ಹೈಬ್ರಿಡ್ ಎಂಜಿನ್ 100 ಪಿಎಸ್ ಮತ್ತು 135 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರಲಿದೆ. ಹಾಗೆಯೇ ಈ ಕಾರು 21.11 ಕೆಎಂಪಿಎಲ್ ಮೈಲೇಜ್  ನೀಡಲಿದೆ. ಇನ್ನು ಸ್ಟ್ರಾಂಗ್ ಹೈಬ್ರಿಡ್ ಎಂಜಿನ್  ಗರಿಷ್ಠ 115 ಪಿಎಸ್ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಗರಿಷ್ಠ 27.97 ಕೆಎಂಪಿಎಲ್ ಮೈಲೇಜ್ ನೀಡಲಿದೆ.

4 / 6
ಈ ಕಾರಿನ ಒಳಭಾಗವನ್ನು ಕಪ್ಪು ಮತ್ತು ಕಂದು ಬಣ್ಣದ ಡ್ಯುಯಲ್-ಟೋನ್ ಥೀಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಸ್ಟ್ರಾಂಗ್ ಹೈಬ್ರಿಡ್ ರೂಪಾಂತರದಲ್ಲಿ ಷಾಂಪೇನ್ ಚಿನ್ನದ ಫಾಕ್ಸ್ ಮತ್ತು ಕಪ್ಪು ಚರ್ಮದ ಸೀಟ್‌ಗಳನ್ನು ನೀಡಲಾಗಿದೆ, ಆದರೆ ಸ್ಮಾರ್ಟ್ ಹೈಬ್ರಿಡ್ ರೂಪಾಂತರದಲ್ಲಿ ಸ್ಮಿಲ್ವರ್ ಟೋನ್ಗಳನ್ನು ನೀಡಲಾಗಿದೆ. ಇನ್ನು ಸುರಕ್ಷತೆಗಾಗಿ, ಇದರಲ್ಲಿ 6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್ ಡಿಸೆಂಟ್ ಕಂಟ್ರೋಲ್, ರಿಯರ್ ಡಿಸ್ಕ್ ಬ್ರೇಕ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂನಂತಹ ವ್ಯವಸ್ಥೆಗಳನ್ನು ನೀಡಲಾಗಿದೆ.

5 / 6
ಗ್ರ್ಯಾಂಡ್ ವಿಟಾರಾ ಮಾರುತಿ ಸುಜುಕಿಯಿಂದ ವಿಹಂಗಮ ಸನ್‌ರೂಫ್ ಪಡೆದ ಮೊದಲ ಕಾರು. ಇದು ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಚಾರ್ಜರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ ಮತ್ತು ಸಂಪರ್ಕಿತ ಕಾರ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇತರ ವೈಶಿಷ್ಟ್ಯಗಳೆಂದರೆ ಆಂಬಿಯೆಂಟ್ ಲೈಟಿಂಗ್, ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳು, ಕೀಲೆಸ್ ಎಂಟ್ರಿ, ಹಿಂಬದಿಯ ಎಸಿ ವೆಂಟ್‌ಗಳು, ಎಂಜಿನ್ ಅನ್ನು ಸ್ಟಾರ್ಟ್ ಮಾಡಲು/ಸ್ಟಾಪ್ ಮಾಡಲು ಪುಶ್ ಬಟನ್ , 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ  ನೀಡಲಾಗಿದೆ. ಈ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು  ಸಪೋರ್ಟ್ ಮಾಡುತ್ತದೆ.

6 / 6
ಇನ್ನು ಈ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಅಪ್-ಫ್ರಂಟ್, ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿದೆ. ಇದು ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಗಳನ್ನು ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳನ್ನು ಸಹ ಹೊಂದಿದೆ. ಹಿಂಭಾಗದಲ್ಲಿ LED ಟೈಲ್ ಲ್ಯಾಂಪ್‌ಗಳಿವೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾವನ್ನು 6 ಮೊನೊಟೋನ್ ಬಣ್ಣಗಳಲ್ಲಿ ಮತ್ತು 3 ಡ್ಯುಯಲ್-ಟೋನ್ ಬಣ್ಣಗಳಲ್ಲಿ ಖರೀದಿಸಬಹುದು. ಇನ್ನು ಈ ಕಾರು ಆಟೋ, ಸ್ನೋ, ರಾಕ್ ಮತ್ತು ಸ್ಯಾಂಡ್ ಎಂಬ ನಾಲ್ಕು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುತ್ತದೆ. ಗ್ರ್ಯಾಂಡ್ ಆಲ್-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಬರುತ್ತಿರುವ ಸುಜುಕಿಯ ಏಕೈಕ ಮಿಡ್ ಎಸ್ಯುವಿ ಆಗಿದೆ.ಇನ್ನು ಈ ಕಾರಿನ ಬೆಲೆ ಸುಮಾರು 11 ಲಕ್ಷದಿಂದ 18 ಲಕ್ಷ ರೂ.ವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

Published On - 4:46 pm, Wed, 20 July 22