Hasanamba Temple: ಹಾಸನಾಂಬ ದೇವಿ ಸಾರ್ವಜನಿಕ ದರ್ಶನದ ಎರಡನೇ ದಿನ, ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಭಕ್ತ ಸಾಗರ
TV9 Web | Updated By: ಆಯೇಷಾ ಬಾನು
Updated on:
Oct 15, 2022 | 12:56 PM
ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿದ್ದು ಇಂದು 2ನೇ ದಿನದ ದರ್ಶನಕ್ಕೆ ಜನ ಸಾಗರವೇ ಹರಿದು ಬಂದಿದೆ. ಸಾರ್ವಜನಿಕ ದರ್ಶನದ ಎರಡನೇ ದಿನ ಭಾರಿ ಸಂಖ್ಯೆಯಲ್ಲಿ ಭಕ್ತರು ಲಗ್ಗೆ ಇಟ್ಟಿದ್ದಾರೆ.
1 / 6
ಹಾಸನ: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿದ್ದು ಇಂದು 2ನೇ ದಿನದ ದರ್ಶನಕ್ಕೆ ಜನ ಸಾಗರವೇ ಹರಿದು ಬಂದಿದೆ. ಸಾರ್ವಜನಿಕ ದರ್ಶನದ ಎರಡನೇ ದಿನ ಭಾರಿ ಸಂಖ್ಯೆಯಲ್ಲಿ ಭಕ್ತರು ಲಗ್ಗೆ ಇಟ್ಟಿದ್ದಾರೆ.
2 / 6
ವೀಕೆಂಡ್ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ದೇವಿ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದು ಗರ್ಭಗುಡಿಯಲ್ಲಿ ಸರ್ವಾಲಂಕಾರ ಭೂಷಿತೆಯಾಗಿ ಕಂಗೊಳಿಸುತ್ತಿರುವ ದೇವಿಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
3 / 6
ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಿರುವ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆಕ್ಟೋಬರ್ 27 ರ ತನಕ ಹಾಸನಾಂಬೆ ಜಾತ್ರೆ ನಡೆಯಲಿದ್ದು, ಒಟ್ಟು 12 ದಿನ ದೇವಿ ದರ್ಶನ ಸಿಗಲಿದೆ.
4 / 6
ಇಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಹಾಗೂ ಮ.3.30 ರಿಂದ ರಾತ್ರಿ ವರೆಗೆ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಮಧ್ಯಾಹ್ನ 1.30 ರಿಂದ ಮ.3.30 ರವರೆಗೆ ದೇವರಿಗೆ ನೈವೇದ್ಯ ಹಾಗೂ ಅಲಂಕಾರ ಇರುವುದರಿಂದ ಭಕ್ತರಿಗೆ ದೇವಿ ದರ್ಶನ ಇರುವುದಿಲ್ಲ.
5 / 6
ಹಾಸನಾಂಬೆ ದೇಗುಲ ಹಲವು ಪಾವಡಗಳಿಂದಲೂ ಭಕ್ತರನ್ನ ಸೆಳೆಯುತ್ತೆ. ದೇವಿಗೆ ಒಮ್ಮೆ ಹಚ್ಚಿದ ಹಣತೆ ಆರಲ್ಲ. ದೇವರ ಮುಡಿಗಿಟ್ಟ ಹೂ ಬಾಡಲ್ಲ ಎಂಬ ನಂಬಿಕೆ ಹಿಂದಿನಿಂದಲೂ ನಡ್ಕೊಂಡು ಬಂದಿದೆ.
6 / 6
ಶರ್ಮಾಲಯ ಸಂಘದ 165 ಸದಸ್ಯರು ವಿಶೇಷ ದರ್ಶನದ ಟಿಕೆಟ್ ಪಡೆದು ದೇವಿ ದರ್ಶನ ಮಾಡಿದ್ದಾರೆ. 1000 ರೂಪಾಯಿಯ ಬರೋಬ್ಬರಿ 1 ಲಕ್ಷದ 65 ಸಾವಿರ ಹಣ ನೀಡಿ 165 ಟಿಕೆಟ್ ಪಡೆದು ದೇವಿ ದರ್ಶನ ಪಡೆದಿದ್ದಾರೆ.
Published On - 11:29 am, Sat, 15 October 22