ಮೃತ ಮಗನ ಹೆಸರಿನಲ್ಲಿ ತಾಯಿ ಗೋಶಾಲೆಯನ್ನು ನಿರ್ಮಾಣ ಮಾಡಿ ಆತನ ಹುಟ್ಟುಹಬ್ಬದ ದಿನವೇ ಲೋಕಾರ್ಪಣೆ ಮಾಡಿರುವಂತಹ ಘಟನೆಯೊಂದು ನಡೆದಿದೆ.
ಹಾವೇರಿ ತಾಲೂಕಿನ ಗಾಂಧಿಪುರ ಗ್ರಾಮದ ಬಳಿ ಸಂದೇಶ ಗೋಶಾಲೆ ನಿರ್ಮಾಣ ಮಾಡಲಾಗಿದೆ. ತಾಯಿ ಸಂಗೀತಗೆ ಏಕೈಕ ಪುತ್ರ ಸಂದೇಶ ಹುಬ್ಬಳ್ಳಿಯಲ್ಲಿ ಇಂಜನೀರಿಂಗ್ ಓದುತ್ತಾ ಇದ್ದ. ಅದರೆ ಕಳೆದ ನಾಲ್ಕೈದು ತಿಂಗಳ ಹಿಂದೆ ಬೆಳಗಾವಿಗೆ ಹೋದಾಗ ಅಪಘಾತದಲ್ಲಿ ಮೃತಪಟ್ಟಿದ್ದ.
ಮಗನ ನೆನಪಿನಲ್ಲಿ ತಾಯಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರು. ತಾಯಿ ಸಂಗೀತಾಗೆ ಎಲ್ಲವೂ ಮಗನಾಗಿದ್ದ. ಮಗನ ನೆನಪಿಗೋಸ್ಕರ್ ಗಾಂಧಿಪುರ ಗ್ರಾಮದ ಬಳಿ ಒಂದು ಎಕರೆ ಜಮೀನು ಖರೀದಿಸಿ ಆತನ ಹೆಸರಿನಲ್ಲಿಯೇ ಸಂದೇಶ ಗೋಶಾಲೆ ಸ್ಥಾಪನೆ ಮಾಡಿದ್ದಾರೆ. ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಂದೇಶ ಗೋಶಾಲೆಯನ್ನ ಉದ್ಘಾಟನೆ ಮಾಡಿದ್ದಾರೆ.
ಪುತ್ರ ಸಂದೇಶ ಒಳ್ಳಯ ಗುಣವಂತ. ತಾಯಿಗೆ ಮುದ್ದಾದ ಮಗನಾಗಿದ್ದ. ಆ ಮಗನನ್ನ ಕಳೆದುಕೊಂಡ ತಾಯಿ ಸಂಗೀತಾ, ಈಗ ಗೋಶಾಲೆಯಲ್ಲಿ ಮುಖಪ್ರಾಣಿಗಳಿಗೆ ಆಶ್ರಯ ನೀಡುವ ಗೋಶಾಲೆಯನ್ನ ಸುಮಾರು 50 ಲಕ್ಷ ರೂ. ಖರ್ಚು ಮಾಡಿ ಸ್ಥಾಪನೆ ಮಾಡಿದ್ದಾರೆ.
ರೈತರ ಜಾನುವಾರುಗಳು, ಬೀದಿದನಗಳು, ಬಂಜೆತನ ಹೊಂದಿರುವ ಹಸು, ಮೇವು ಇಲ್ಲದೆ ಸಾಕಲು ಕಷ್ಟಪಡುತ್ತಿರುವ ರೈತರ ಜಾನುವಾರುಗಳನ್ನ ಮಗನಂತೆ ಸಾಕಲು ಗೋಶಾಲೆಯನ್ನ ಸ್ಥಾಪನೆ ಮಾಡಿದ್ದಾರೆ. ಪುಣ್ಯಕೋಟಿಯನ್ನ ಉಳಿಸುವ ಕಾರ್ಯವನ್ನ ತಾಯಿ ಸಂಗೀತಾ ಮಾಡುತ್ತಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಪುತ್ರನ ನೆನಪಿನಲ್ಲಿ ತಾಯಿ ಒಂದು ಮಹತ್ವದ ಕಾರ್ಯವನ್ನ ಮಾಡಿದ್ದಾರೆ. ಬರಗಾಲದಂತಹ ಪರಿಸ್ಥಿತಿಯ ಜಾನುವಾರುಗಳಿಗೆ ಮೇವು ಸಹ ಸಿಗುತ್ತಿಲ್ಲ. ಪುಣ್ಯಕೋಟಿ ಗೋವುಗಳ ಶಾಲೆಯನ್ನ ಸ್ಥಾಪನೆ ಮಾಡುವ ಮೂಲಕ ತಮ್ಮ ಮಗನನ್ನು ಕಾಣುತ್ತಿದ್ದಾರೆ.