Kannada News Photo gallery Health Tips: Do you know why water bottle caps are in different colors? Know the reason Health News In Kannada
Health Tips: ನೀರಿನ ಬಾಟಲಿಗಳ ಮುಚ್ಚಳ ಬೇರೆ ಬೇರೆ ಬಣ್ಣದಲ್ಲಿರುತ್ತೆ ಏಕೆ?
ಇತ್ತೀಚಿನ ದಿನಗಳಲ್ಲಿ ನೀರಿನ ಬಾಟಲ್ ಬಳಕೆ ಜಾಸ್ತಿಯಾಗಿದೆ. ನಾವು 10 ಅಥವಾ 20 ರೂಪಾಯಿ ಕೊಟ್ಟು ಬಾಟಲ್ ಖರೀದಿಸುತ್ತೇವೆ ಆದರೆ ಎಂದಾದರೂ ಅವುಗಳ ಮುಚ್ಚಳ ನೀಲಿ, ಬಿಳಿ, ಹಸಿರು ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಏಕೆ ಇರುತ್ತವೆ ಎಂಬುದನ್ನು ಯೋಚಿಸಿದ್ದೀರಾ? ಇದರ ಅರ್ಥವೇನು? ಇಲ್ಲಿದೆ ಈ ಬಗ್ಗೆ ಮಾಹಿತಿ.
1 / 7
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಹೊರಗಡೆ ಹೋದಾಗ, ಮದುವೆ ಸಮಾರಂಭಗಳಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿಯೂ ನೀರಿನ ಬಾಟಲ್ ಬಳಕೆ ಜಾಸ್ತಿಯಾಗಿದೆ. ನಾವು 10 ಅಥವಾ 20 ರೂಪಾಯಿ ಕೊಟ್ಟು ಬಾಟಲ್ ಖರೀದಿಸುತ್ತೇವೆ ಆದರೆ ಎಂದಾದರೂ ಅವುಗಳ ಮುಚ್ಚಳ ನೀಲಿ, ಬಿಳಿ, ಹಸಿರು ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಏಕೆ ಇರುತ್ತವೆ ಎಂಬುದನ್ನು ಯೋಚಿಸಿದ್ದೀರಾ? ಇದರ ಅರ್ಥವೇನು? ಇಲ್ಲಿದೆ ಈ ಬಗ್ಗೆ ಮಾಹಿತಿ.
2 / 7
ನೀರಿನ ಬಾಟಲಿಗಳಿಗೆ ಬೇರೆ ಬೇರೆ ಬಣ್ಣಗಳ ಮುಚ್ಚಳವನ್ನು ಹಾಕಲು ಮುಖ್ಯವಾದ ಕಾರಣವೆಂದರೆ ಅವುಗಳ ನಡುವಿನ ವ್ಯತ್ಯಾಸವನ್ನು ಜನರಿಗೆ ಸ್ಪಷ್ಟವಾಗಿ ತಿಳಿಸುವುದಕ್ಕೆ. ಜನರು ಆ ಆಧಾರದ ಮೇಲೆ ನೀರನ್ನು ಖರೀದಿಸಲಿ ಎಂಬುದಾಗಿದೆ.
3 / 7
ನೀರಿನ ಬಾಟಲಿಗೆ ನೀಲಿ ಬಣ್ಣದ ಮುಚ್ಚಳವಿದ್ದರೆ ಅದು ಖನಿಜಯುಕ್ತ ನೀರು(Mineral Water) ಎಂದರ್ಥ. ಇದು ಮಿನರಲ್ ವಾಟರ್ ಆಗಿದ್ದು ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ನೋಡಬಹುದಾಗಿದೆ.
4 / 7
ಹಸಿರು ಬಣ್ಣದ ಮುಚ್ಚಳವಿದ್ದರೆ ಆ ಬಾಟಲಿಗಳಿಗೆ ಹೆಚ್ಚುವರಿ ಖನಿಜಗಳನ್ನು ಸೇರಿಸಲಾಗಿದೆ ಎಂದರ್ಥ. ಕೆಲವು ಕಂಪನಿಗಳು ನೀರಿಗೆ ಎಲೆಕ್ಟ್ರೋಲೈಟ್‌ಗಳಂತಹ(Electrolyte) ಅಥವಾ ಪರಿಮಳವಿರುವ ರುಚಿಗಳನ್ನು ಸೇರಿಸಿರುತ್ತವೆ. ಬಾಟಲಿಗಳ ಕವರಿನ ಮೇಲೆ ಈ ಬಗ್ಗೆ ಮಾಹಿತಿಗಳಿರುತ್ತವೆ.
5 / 7
ನೀರಿನ ಬಾಟಲಿಯ ಮುಚ್ಚಳವು ಬಿಳಿಯಾಗಿದ್ದರೆ, ಬಾಟಲಿ ನೀರನ್ನು ಸಂಸ್ಕರಿಸಲಾಗಿದೆ ಎಂದರ್ಥ. ಇದು ಕೂಡ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
6 / 7
ಮಾರುಕಟ್ಟೆಯಿಂದ ಖರೀದಿಸಿದ ನೀರಿನ ಬಾಟಲಿಯ ಮುಚ್ಚಳ ಕಪ್ಪು ಬಣ್ಣದ್ದಾಗಿದ್ದರೆ ಇದು ಕ್ಷಾರೀಯ ನೀರು ಎಂದರ್ಥ. ಇದು ನೋಡಲು ಸಿಗುವುದು ತುಂಬಾ ಅಪರೂಪ. ಹೆಚ್ಚಿನ ಸೆಲೆಬ್ರಿಟಿಗಳು ಈ ನೀರನ್ನು ಕುಡಿಯುತ್ತಾರೆ.
7 / 7
ಕೆಲವು ಬಾಟಲಿಗಳು ಪಿಂಕ್ ಮುಚ್ಚಳವನ್ನು ಹೊಂದಿರುತ್ತವೆ. ಇಂತಹ ಬಾಟಲಿಗಳನ್ನು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಅನೇಕ ಚಾರಿಟಿ ಸಂಸ್ಥೆಗಳು ಬಳಸುತ್ತವೆ.